ಕರಾಚಿ: ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಕ್ಲೀನ್ ಸ್ವೀಪ್ ಸೋಲು ಕಂಡ ಬೆನ್ನಲೇ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾರನ್ನು ವಜಾ ಮಾಡಲಾಗಿದೆ. ರಮೀಜ್ ರಾಜಾ ಸ್ಥಾನಕ್ಕೆ ನಜೀಮ್ ಸೇಥಿಯನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
2021ರ ಸೆಪ್ಟೆಂಬರ್ನಲ್ಲಿ ರಮೀಜ್ ರಾಜಾ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಇವರ ಆಡಳಿತಾವಧಿಯಲ್ಲಿ ತಂಡದ ಏಳಿಗೆಗಿಂತ ಹೆಚ್ಚಾಗಿ ಇತರ ಕ್ರಿಕೆಟ್ ಮಂಡಳಿ ಜತೆ ಕಿರಿಕ್ ಮಾಡಿದ್ದೇ ಹೆಚ್ಚು. ಇದೀಗ ಅಂತಿಮವಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಿತಿಯ ಪ್ರಮುಖ ಸದಸ್ಯ, ಪ್ರಧಾನಿ ಶಹಬಾಜ್ ಶರೀಫ್ ನೇತೃತ್ವದಲ್ಲಿ ಸಭೆ ನಡೆಸಿ ನಜೀಮ್ ಸೇಥಿಯನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಜೀಮ್ ಸೇಥಿ ಈ ಹಿಂದೆ ಪಾಕಿಸ್ತಾನ ಕ್ರಿಕಟ್ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆ ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿಯಾಗಿದ ವೇಳೆ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
2015ರಲ್ಲಿ ನಜೀಮ್ ಸೇಥಿ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಅಂದಿನ ಪ್ರಧಾನಿ ನವಾಜ್ ಷರೀಫ್ ಅವರು ಸೇಥಿ ಹೆಸರನ್ನು ಅಂತಿಮಗೊಳಿಸಿ ಹಂಗಾಮಿ ಅಧ್ಯಕ್ಷರಾಗಿ ನೇಮಕಾತಿಗೆ ಆದೇಶ ನೀಡಿದ್ದರು. ಇಸ್ಲಾಮಾಬಾದ್ ಕೋರ್ಟ್ ಆದೇಶದಂತೆ ಹಂಗಾಮಿ ಅಧ್ಯಕ್ಷರ ಆಯ್ಕೆ ಮಾಡಲಾಗಿತ್ತು. ಇದೀಗ ಪ್ರಧಾನಿ ಶಹಬಾಜ್ ಷರೀಫ್ ಮತ್ತೆ ಸೇಥಿಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ಇದನ್ನೂ ಓದಿ | IND VS BAN | ದ್ವಿತೀಯ ಟೆಸ್ಟ್: ಬಾಂಗ್ಲಾವನ್ನು ಕ್ಲೀನ್ ಸ್ವೀಪ್ ಮಾಡೀತೇ ಟೀಮ್ ಇಂಡಿಯಾ?