Site icon Vistara News

Pakistan Cricket: ಬಾಡಿಗೆ ಫ್ಲಡ್‌ಲೈಟ್‌ ಅಳವಡಿಸಿ ಚಾಂಪಿಯನ್‌ ಟ್ರೋಫಿ ನಡೆಸಲು ಮುಂದಾದ ಪಾಕಿಸ್ತಾನ

Pakistan Cricket

Pakistan Cricket: Pakistan to instal new floodlights in stadiums on rental basis for Champions Trophy 2025

ಕರಾಚಿ: ಮುಂದಿನ ವರ್ಷ ನಡೆಯುವ ಚಾಂಪಿಯನ್‌ ಟ್ರೋಫಿಗಾಗಿ(champions trophy 2025) ಎಲ್ಲ ಸಿದ್ಧತೆ ಆರಂಭಿಸಿದ್ದೇವೆ ಎಂದು ಕಟು ಸತ್ಯ ಮರೆಮಾಚಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನ ಕ್ರಿಕೆಟ್(Pakistan Cricket)​ ಮಂಡಳಿಯ ಪರಿಸ್ಥಿತಿ ಕಂಡು ಇದೀಗ ನಗುವಂತಾಗಿದೆ. ಹೌದು, ತನ್ನ ಕ್ರೀಡಾಂಗಣಗಳನ್ನು ಸಿದ್ಧಪಡಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (Pakistan Cricket Board), ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣಗಳಿಗೆ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲಿದೆ ಎಂದು ತಿಳಿದುಬಂದಿದೆ.

ಕರಾಚಿ ಹಾಗೂ ಲಾಹೋರ್‌ನಲ್ಲಿ ಈಗಾಗಲೇ ಇರುವ ಫ್ಲಡ್‌ಲೈಟ್‌ಗಳು ಹಳೆಯದಾಗಿವೆ. ಹೀಗಾಗಿ ಅಲ್ಲಿನ ಫ್ಲಡ್‌ಲೈಟ್‌ಗಳನ್ನು ಹಣ ಉಳಿತಾಯಕ್ಕಾಗಿ ಕ್ವೆಟ್ಟಾ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳಿಗೆ ಸ್ಥಳಾಂತರ ಮಾಡಿ, ಕರಾಚಿ ಹಾಗೂ ಲಾಹೋರ್‌ಗೆ ಬೇಕಾದ ಫ್ಲಡ್‌ಲೈಟ್‌ಗಳನ್ನು ಬಾಡಿಗೆಗೆ ಪಡೆಯಲು ಪಿಸಿಬಿ ಈಗಾಗಲೇ ಟೆಂಡರ್‌ ಕೂಡಾ ಆಹ್ವಾನಿಸಿದೆ ಎನ್ನಲಾಗಿದೆ. ಈ ವಿಚಾರ ತಿಳಿದ ನೆಟ್ಟಿಗರು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಲಾಹೋರ್​ ಕ್ರಿಕೆಟ್​ ಮೈದಾನದಲ್ಲಿ ಬೆಳೆದಿದ್ದ ಭಾರೀ ಗಾತ್ರದ ಹುಲ್ಲುಗಳನ್ನು ಕಟಾವು ಮಾಡುತ್ತಿರುವ ವಿಡಿಯೊ ವೈರಲ್​ ಆಗಿತ್ತು. ಎಷ್ಟೇ ದಯನೀಯ ಪರಿಸ್ಥಿತಿಯ ಇದ್ದರೂ ಕೂಡ ಪಾಕ್​ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ(ICC Champions Trophy) ಭಾರತ(champions trophy ind vs pak) ತಂಡ ಪಾಲ್ಗೊಳ್ಳಲಿದೆಯಾ? ಇಲ್ಲವಾ? ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದುವರೆಗೂ ಈ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಮಾರ್ಚ್ 1 ರಂದು ಲಾಹೋರ್​ನಲ್ಲಿ ನಡೆಯಬೇಕಿದೆ.

ಇದನ್ನೂ ಓದಿ Pakistan Cricket Team: ಪಾಕಿಸ್ತಾನ ಕ್ರಿಕೆಟಿಗರ ವೇತನ ಕಡಿತಕ್ಕೆ ಮುಂದಾದ ಪಾಕ್​ ಕ್ರಿಕೆಟ್ ಮಂಡಳಿ

ಒಂದೊಮ್ಮೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್ ಮತ್ತು ಬೇಡಿಕೆ​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಿಸಿಬಿಯ ಮನವಿಗೆ ಐಸಿಸಿ ಸ್ಪಂದಿಸಿದ್ದು, ಹೈಬ್ರಿಡ್​ ಮಾದರಿಯ ಪಂದ್ಯಗಳಿಗೆ ಐಸಿಸಿ ಅನುಮತಿಸಿಲ್ಲ ಎಂದು ವರದಿಯಾಗಿದೆ. ಈ ವಿಚಾವಾಗಿ ಈಗಾಗಲೇ ಬಿಸಿಸಿಐ ಜತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭಾರತ ಚಾಂಪಿಯನ್ಸ್​ ಟ್ರೋಫಿ ಆಡುವ ಬಗ್ಗೆ ನಿರ್ಧಾರವಾಗಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

Exit mobile version