ಹೈದಾರಾಬಾದ್: 2023 ರ ವಿಶ್ವಕಪ್ನಲ್ಲಿ (ICC World Cup 2023) ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತಕ್ಕೆ ಬಂದಿಳಿದಾಗಿನಿಂದ ಹೈದರಾಬಾದ್ ನಲ್ಲಿ ಸಂತೋಷದ ಸಮಯವನ್ನು ಕಳೆಯುತ್ತಿದೆ. ಅಕ್ಟೋಬರ್ 3ರಂದು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಅಭ್ಯಾಸ ಪಂದ್ಯವನ್ನು ಪಾಕಿಸ್ತಾನ ತಂಡದ ಆಡಲಿದೆ. ಅದಕ್ಕಿಂತ ಮೊದಲು ತಂಡದ ಆಟಗಾರರು ಭೋಜನ ಕೂಟಕ್ಕೆ ತೆರಳಿದರು. ಈ ವಿಡಿಯೊವನ್ನು ಐಸಿಸಿ ಪ್ರಕಟಿಸಿದ್ದು. ಪಾಕಿಸ್ತಾನ ತಂಡದ ಆಟಗಾರರು ಸಂಭ್ರಮದಲ್ಲಿರುವುದು ಕಂಡು ಬಂತು. ಅವರಿಗೆ ಸ್ಥಳೀಯ ಅಭಿಮಾನಿಗಳು ಕೂಡ ಉತ್ತಮ ಆತಿಥ್ಯ ನೀಡಿದರು.
ಸೆಪ್ಟೆಂಬರ್ 29 ರಂದು ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಅಭ್ಯಾಸ ಪಂದ್ಯವನ್ನು ಸೋತ ನಂತರ, ಪಾಕಿಸ್ತಾನವು ತಮ್ಮ ತಂಡದೊಂದಿಗೆ ನೈಟ್ ಔಟ್ ಮಾಡಿತು. ಸಕಲ ಭದ್ರತೆಯೊಂದಿಗೆ ಆಟಗಾರರು ಹೈದರಾಬಾದ್ನ ಪ್ರಮುಖ ರೆಸ್ಟೋರೆಂಟ್ ಒಂದಕ್ಕೆ ತೆರಳಿ ಊಟ ಮಾಡಿದರು.
🎥 Hangout in Hyderabad: Glimpses from the Pakistan team dinner 🍽️#CWC23 pic.twitter.com/R2mB9rQurN
— Pakistan Cricket (@TheRealPCB) September 30, 2023
ತಮ್ಮ ವಾಸ್ತವ್ಯದ ಹೋಟೆಲ್ನಿಂದ ಹೊರಬಂದ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡ ಹೋಟೆಲ್ಗೆ ಪ್ರಯಾಣ ಮಾಡಿತು. ರೆಸ್ಟೋರೆಂಟ್ ಪ್ರವೇಶಿಸಿದ ಅವರಿಗೆ ಹೈದರಾಬಾದ್ನ ಮುತ್ತಿನ ಹಾರ ಹಾಕಿ ಸ್ವಾಗತಿಸಲಾಯಿತು. ಜತೆಗೊಂದು ಗುಲಾಬಿ ಕೂಡ ನೀಡಲಾಯಿತು. ಮೆನ್ ಇನ್ ಗ್ರೀನ್ ಕರತಾಡನದೊಂದಿಗೆ ರೆಸ್ಟೋರೆಂಟ್ ಗೆ ಪ್ರವೇಶಿಸಿದರು.
ಇದನ್ನೂ ಓದಿ : World Cup History : ಎರಡು ಪಂದ್ಯಗಳ ವಾಕ್ ಓವರ್ ಪಡೆದು ವಿಶ್ವ ಕಪ್ ಗೆದ್ದ ಶ್ರೀಲಂಕಾ!
ಪಾಕಿಸ್ತಾನ ಕ್ರಿಕೆಟ್ ತಂಡವು ಅವರಿಗೆ ನೀಡಲಾಗುವ ಆತಿಥ್ಯ ಮತ್ತು ಆಹಾರದಿಂದ ಪ್ರಭಾವಿತವಾಗಿದೆ. ಪ್ರವಾಸಿ ತಂಡವು ಬಾಣಸಿಗರ ತಂಡಗಳು ಮತ್ತು ಅಭಿಮಾನಿಗಳೊಂದಿಗೆ (ರೆಸ್ಟೋರೆಂಟ್ ಒಳಗೆ ಮತ್ತು ಹೊರಗೆ) ಫೋಟೋಗಳನ್ನು ಕ್ಲಿಕ್ ಮಾಡಿಕೊಂಡರು.
ಪಾಕಿಸ್ತಾನ ತಂಡದ ನಿಗದಿತ ಪಂದ್ಯಗಳ ವೇಳಾಪಟ್ಟಿ ಇಂತಿದೆ
- ಅಭ್ಯಾಸ ಪಂದ್ಯ: ಸೆಪ್ಟೆಂಬರ್ 29: ಪಾಕಿಸ್ತಾನ, ನ್ಯೂಜಿಲೆಂಡ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದಾರಾಬಾದ್
- ಅಭ್ಯಾಸ ಪಂದ್ಯ: ಅಕ್ಟೋಬರ್ 3: ಪಾಕಿಸ್ತಾನ ಆಸ್ಟ್ರೇಲಿಯಾ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದಾರಾಬಾದ್
- ಅಕ್ಟೋಬರ್ 2: ನೆದರ್ಲ್ಯಾಂಡ್ಸ್ ವಿರುದ್ಧ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದಾರಾಬಾದ್
- ಅಕ್ಟೋಬರ್ 10 ಶ್ರೀಲಂಕಾ ವಿರುದ್ಧ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದಾರಾಬಾದ್
- ಅಕ್ಟೋಬರ್ 14 ಭಾರತ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣ ಅಹಮದಾಬಾದ್
- ಅಕ್ಟೋಬರ್ 20 ಆಸ್ಟ್ರೇಲಿಯಾ ವಿರುದ್ಧ, ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು
- ಅಕ್ಟೋಬರ್ 23 ಅಫ್ಘಾನಿಸ್ತಾನ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣ ಚೆನ್ನೈ
- ಅಕ್ಟೋಬರ್ 27 ದಕ್ಷಿಣ ಆಫ್ರಿಕಾ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣ ಚೆನ್ನೈ
- ಅಕ್ಟೋಬರ್ 31 ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್ಸ್ ಕೋಲ್ಕೊತಾ
- ನವೆಂಬರ್ 4 ನ್ಯೂಜಿಲೆಂಡ್ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು
- ನವೆಂಬರ್ 11 ಇಂಗ್ಲೆಂಡ್ ವಿರುದ್ಧ ಈಡನ್ ಗಾರ್ಡನ್ಸ್ ಕೋಲ್ಕೊತಾ