ಕೊಲಂಬೊ: ಭಾರತ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನದ(IND vs PAK) ಆಟಗಾರ ಆಘಾ ಸಲ್ಮಾನ್(Agha Salman) ಅವರು ಗಾಯಗೊಂಡ ತಕ್ಷಣ ಅವರಿಗೆ ಆರೈಕೆ ಮಾಡಿದ ಕೆ.ಎಲ್ ರಾಹುಲ್(KL Rahul) ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ದೊಡ್ಡ ಮೊತ್ತವನ್ನು ಬೆನ್ನಟ್ಟುತ್ತಿದ್ದ ವೇಳೆ ಸ್ಪಿನ್ನರ್ ರವೀಂದ್ರ ಜಡೇಜಾ(Ravindra Jadeja) ಅವರ ಎಸೆದಲ್ಲಿ ಆಘಾ ಸಲ್ಮಾನ್ ಅವರ ಮುಖಕ್ಕೆ ಬೆಂಡು ಬಡಿದು ರಕ್ತಸ್ರಾವ ಉಂಟಾಯಿತು. ತಕ್ಷಣ ಕೀಪಿಂಗ್ ನಡೆಸುತ್ತಿದ್ದ ರಾಹುಲ್ ಪಾಕ್ ಆಟಗಾರನ ಬಳಿ ಬಂದು ಮುಖವನ್ನು ಮೇಲೆತ್ತಿ ಆರೈಕೆ ಮಾಡಿದ್ದಾರೆ. ಈ ಫೋಟೊ ಮತ್ತು ವಿಡಿಯೊವನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾತಲಾಣದಲ್ಲಿ ಹಂಚಿಕೊಂಡಿದ್ದಾರೆ.
ಜಡೇಜಾ ಅವರ 21ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಬ್ಯಾಟಿಂಗ್ ನಡೆಸುತ್ತಿದ್ದ ಆಘಾ ಸಲ್ಮಾನ್ ಮುಂದೆ ಬಂದು ಚೆಂಡನ್ನು ಸಿಕ್ಸರ್ ಬಾರಿಸಲು ಯತ್ನಿಸಿದ ವೇಳೆ ಚೆಂಡು ಬಲ ಕಣ್ಣಿನ ಕೆಳಗೆ ಬಡಿದಿದೆ. ತಕ್ಷಣ ಅವರ ಮುಖದಿಂದ ರಕ್ತ ಸುರಿದಿದೆ. ಇದೇ ವೇಳೆ ಕೆ.ಎಲ್ ರಾಹುಲ್ ಮತ್ತು ಟೀಮ್ ಇಂಡಿಯಾ ಆಟಗಾರರು ಅವರ ಬಳಿ ಬಂದು ಗಾಯವನ್ನು ಪರೀಕ್ಷಿಸಿ ಮೈದ್ಯಕೀಯ ಸಿಬ್ಬಂದಿಗಳು ತಕ್ಷಣ ಮೈದಾನಕ್ಕೆ ಬರುವಂತೆ ಕೈ ಸನ್ನೆ ಮಾಡಿದ್ದಾರೆ. ಬಳಿಕ ಅವರಿಗೆ ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.
ಹೆಲ್ಮೆಟ್ ಧರಿಸದೇ ಆಡಿದಿದ್ದ ಅವರ ಗಾಯಕ್ಕೆ ಪ್ರಮುಖ ಕಾರಣ. ಗಾಯಗೊಂಡ ಬಳಿಕ ಹೆಲ್ಮೆಟ್ ಧರಿಸಿ ಆಟ ಮುಂದುವರಿಸಿದರು. ಆದರೆ 23 ರನ್ ಗಳಿಸಿದ್ದ ವೇಳೆ ಕುಲದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಇದನ್ನೂ ಓದಿ IND vs SL: ಭಾರತ-ಲಂಕಾ ಪಂದ್ಯಕ್ಕೂ ಮಳೆ ಭೀತಿ; ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
Nice gesture from KL Rahul.
— CricketMAN2 (@ImTanujSingh) September 11, 2023
When the ball hit, he straight to go Salman Agha and checking him. pic.twitter.com/sZvZjxlvwx
ಪಂದ್ಯ ಗೆದ್ದ ಭಾರತ
ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಪರಾಕ್ರಮ ಸಾಧಿಸಿದ ಭಾರತ ತಂಡ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್(Asia Cup 2023) ಸೂಪರ್-4 (Super 4 match) ಹಂತದ ಪಂದ್ಯದಲ್ಲಿ 228 ರನ್ಗಳ ಭರ್ಜರಿ ವಿಜಯ ಸಾಧಿಸಿತು. ಭಾರತ ತಂಡದ ಪರ ವಿರಾಟ್ ಕೊಹ್ಲಿ ( ಅಜೇಯ 122 ರನ್), ಕೆ. ಎಲ್ ರಾಹುಲ್ (ಅಜೇಯ 111 ರನ್) ಅವರ ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದರೆ. ಸ್ಪಿನ್ನರ್ ಕುಲ್ದೀಪ್ ಯಾದವ್ (25 ರನ್ಗಳಿಗೆ 5 ವಿಕೆಟ್) ಅವರ ಮಾರಕ ದಾಳಿ ನಡೆಸಿ ಬೌಲಿಂಗ್ನಲ್ಲಿ ಮಿಂಚಿದರು. ಇದು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಪಾಕಿಸ್ತಾನ ತಂಡದ ವಿರುದ್ದ ಲಭಿಸಿದ ದಾಖಲೆಯ ಅಂತರದ ವಿಜಯವಾಗಿದೆ.
ಸೋಮವಾರ ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 32 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್ ಶಾ ಬ್ಯಾಟಿಂಗ್ ಮಾಡದ ಕಾರಣ ಪಾಕಿಸ್ತಾನ ತಂಡ ಆಲ್ಔಟ್ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.