Site icon Vistara News

Team India | ಕರ್ಮ ಫಲ ಎಂದು ಮೊಹಮ್ಮದ್‌ ಶಮಿಯನ್ನು ಟ್ರೋಲ್‌ ಮಾಡಿದ ಪಾಕ್‌ ಅಭಿಮಾನಿಗಳು

team india

ಢಾಕಾ : ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್ ಶಮಿ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯಿಂದ ಹೊರಗುಳಿಯಲು ಅವರಿಗೆ ಎದುರಾಗಿರುವ ಭುಜದ ನೋವು ಕಾರಣ. ನೋವಿಗೆ ಅವರು ಫಿಸಿಯೊಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್‌ ತಂಡದ ಅಭಿಮಾನಿಗಳು ಮೊಹಮ್ಮದ್ ಶಮಿಯನ್ನು ಇದೇ ಗಾಯದ ವಿಚಾರವಾಗಿ ಟ್ರೋಲ್‌ ಮಾಡಿದ್ದಾರೆ. ಇದು ಕರ್ಮ ಫಲ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೊಹಮ್ಮದ್‌ ಶಮಿ ಶುಕ್ರವಾರ ಅಭ್ಯಾಸ ನಡೆಸುವ ವೇಳೆ ಭುಜದ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರು ತಂಡದ ಫಿಸಿಯೊಗಳ ಮೂಲಕ ವೈದ್ಯಕೀಯ ನೆರವು ಪಡೆದುಕೊಂಡಿದ್ದಾರೆ. ಅದರ ಚಿತ್ರವನ್ನು ಅವರು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿ “ಪ್ರತಿ ಬಾರಿಯೂ ಗಾಯಗಳಾದಾಗ ನಾನು ಹೊಸದನ್ನು ಕಲಿಯುತ್ತಿರುತ್ತೇನೆ. ಪ್ರತಿ ಬಾರಿಯೂ ಗಾಯದ ಸಮಸ್ಯೆ ಬಂದಾಗಲೂ ಮತ್ತಷ್ಟು ಸದೃಢನಾಗಿ ವಾಪಸಾಗುವ ವಿಶ್ವಾಸ ಇಟ್ಟುಕೊಂಡಿರುತ್ತೇನೆ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್‌ಗೆ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ಮಾಡಿದ್ದು, ಇದಕ್ಕೆಲ್ಲ ಬೇಜಾರು ಮಾಡಿಕೊಳ್ಳಬೇಡಿ ಇದು ನಿಮಗೆ ಸಿಕ್ಕ ಕರ್ಮ ಫಲ ಎಂಬುದಾಗಿ ಬರೆದುಕೊಂಡಿದ್ದಾರೆ. ದೇಶ ಭಕ್ತಿಯ ಸರ್ಟಿಫಿಕೇಟ್‌ ನಿಮಗೆ ದೊರಕಿರಬಹುದು. ಮುಂದಿನ ಐಪಿಎಲ್‌ನ ವೇಳೆಗೆ ಎಲ್ಲವೂ ಸರಿಯಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಯಾಕೆ ಕರ್ಮ ಎಂದು ಕರೆದಿದ್ದು?

ಭಾರತ ತಂಡ ಕಳೆದ ಟಿ೨೦ ವಿಶ್ವ ಕಪ್‌ನಲ್ಲಿ ಸೆಮಿ ಫೈನಲ್‌ ಹಂತದಿಂದ ಹೊರಬಿದ್ದಾಗ ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದರು. ಅಂತೆಯೇ ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ್ತಿತ್ತು. ಈ ವೇಳೆ ಮೊಹಮ್ಮದ್‌ ಶಮಿ ಅಖ್ತರ್ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟು “ಕ್ಷಮಿಸು ಸಹೋದರ, ಇದು ಕರ್ಮಫಲ,” ಎಂದು ಬರೆದಿದ್ದರು. ಆ ಸಿಟ್ಟಿಗೆ ಈಗ ಪಾಕಿಸ್ತಾನ ಅಭಿಮಾನಿಗಳು ಶಮಿಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ | T20 World Cup | ಇದಕ್ಕೆ ಕರ್ಮ ಎನ್ನುವುದು; ಅಖ್ತರ್‌ಗೆ ಟ್ರೋಲ್‌ ಮಾಡಿದ ಮೊಹಮ್ಮದ್ ಶಮಿ

Exit mobile version