Site icon Vistara News

World Cup 2023 : ಭಾರತಕ್ಕೆ ತಂಡ ಕಳುಹಿಸುವ ವಿಚಾರದಲ್ಲಿ ಪಾಕ್‌ ವಿದೇಶಾಂಗ ಸಚಿವಾಲಯದ ಕಿರಿಕ್‌!

Pakistan Cricket team

#image_title

ನವ ದೆಹಲಿ: ರಾಜಕೀಯ ಸಂಬಂಧಗಳು ಹಳಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವಿನ ದ್ವಿಪಕ್ಷೀಯ ಕ್ರಿಕೆಟ್‌ ಸಂಬಂಧ ಹಳಸಿದೆ. ಕಳೆದ ಒಂದು ದಶಕದಿಂದ ಈ ಎರಡೂ ತಂಡಗಳು ಪರಸ್ಪರ ದೇಶಗಳಿಗೆ ಪ್ರವಾಸ ಮಾಡಿಲ್ಲ. ಕೇವಲ ತಟಸ್ಥ ತಾಣಗಳಲ್ಲಿ ಬಹು ತಂಡಗಳ ಟೂರ್ನಿಯಲ್ಲಿ ಮಾತ್ರ ಪಾಲ್ಗೊಂಡಿದೆ. ಈ ಸಮಸ್ಯೆ ಭಾರತದಲ್ಲಿ ಮುಂದಿನ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯಲುವ ವಿಶ್ವ ಕಪ್‌ಗೂ ತಟ್ಟಿದೆ. ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸಲು ಅಲ್ಲಿನ ಸರಕಾರ ಹಿಂದೆ ಮುಂದೆ ನೋಡುತ್ತಿದೆ. ಬೇಕೆಂತಲೇ ಕಿರಿಕ್‌ ಮಾಡುತ್ತಿದೆ. ಇದೀಗ ಪ್ರವಾಸ ವಿಚಾರ ವಿದೇಶಾಂಗ ಸಚಿವಾಲಯದ ಪರಾಮರ್ಶೆಯಲ್ಲಿದೆ ಎನ್ನುವ ಮೂಲಕ ಆಯೋಜಕರಾಗಿರುವ ಬಿಸಿಸಿಐಗೆ ತೊಂದರೆ ಕೊಡಲಾಗುತ್ತಿದೆ.

ಭಾರತ ತಂಡ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಆ ದೇಶಕ್ಕೆ ಹೋಗದಿರುವುದು ಸಮಸ್ಯೆಗೆ ಮೂಲ ಕಾರಣ ಎಂದು ಹೇಳಬಹುದು. ಭಾರತದ ನಿರಾಕರಣೆಯಿಂದಾಗಿ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸಲಾಗಿದ. ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಲಾಗಿದ್ದರೆ ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ. ಇದೀಗ ಭಾರತಕ್ಕೆ ಅಲ್ಲಿನ ತಂಡ ಪ್ರಯಾಣ ಮಾಡುವ ವಿಚಾರ ಎದುರಾಗಿರುವ ಕಾರಣ ಆ ದೇಶದ ತಂಡ ಕಿರಿಕ್‌ ತೆಗೆಯುತ್ತಿದೆ.

ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಸಭೆಯಲ್ಲಿ ಭಾಗವಹಿಸಲು ಕಳೆದ ತಿಂಗಳು ಭಾರತದ ಗೋವಾಕ್ಕೆ ಬಂದಿದ್ದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಕೂಡ ಒಬ್ಬರು. ಅವರ ನೇತೃತ್ವದ ತಂಡ ಈಗ ಭಾರತಕ್ಕೆ ತಂಡವನ್ನು ಕಳುಹಿಸುವ ಬಗ್ಗೆ ಪರಾಮರ್ಶೆ ನಡೆಸುತ್ತದೆ ಎನ್ನಲಾಗಿದೆ.

ರಾಜಕೀಯವನ್ನು ಕ್ರೀಡೆಯೊಂದಿಗೆ ಬೆರೆಸಬಾರದು ಎಂದು ಪಾಕಿಸ್ತಾನ ಭಾವಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಹೇಳಿದ್ದಾರೆ. ಇದೇ ವೇಳೆ ಅವರು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡದಿರುವ ಭಾರತದ ನೀತಿ ನಿರಾಶಾದಾಯಕ ಎಂಬುದಾಗಿಯೂ ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ತೆರಳುವ ಪಾಕಿಸ್ತಾನ ತಂಡದ ಕ್ರಿಕೆಟಿಗರ ಭದ್ರತಾ ಪರಿಸ್ಥಿತಿ ಸೇರಿದಂತೆ ವಿಶ್ವಕಪ್‌ನಲ್ಲಿ ನಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ನಾವು ಗಮನಿಸುತ್ತಿದ್ದೇವೆ. ಸರಿಯಾದ ಮೌಲ್ಯಮಾಪನ ಮಾಡುತ್ತಿದ್ದೇವೆ ಮತ್ತು ಸರಿಯಾದ ಸಮಯದಲ್ಲಿ ನಮ್ಮ ಅಭಿಪ್ರಾಯಗಳನ್ನು ಪಿಸಿಬಿಗೆ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ನೀಡುತ್ತೇವೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ.

ಇದನ್ನೂ ಓದಿ : INDvsWI : ಪೂಜಾರಗೆ ವಿಶ್ರಾಂತಿ ಎಂದುಕೊಳ್ಳುವೆ; ಬಿಸಿಸಿಐ ವಿರುದ್ಧ ಮಾಜಿ ಸ್ಪಿನ್ನರ್‌ ಪರೋಕ್ಷ ಅಸಮಾಧಾನ

ಪಾಕಿಸ್ತಾನದ ಭಾಗವಹಿಸುವಿಕೆಯ ಬಗ್ಗೆ ಅನುಮಾನಗಳು ಇರುವುದರಿಂದ ವಿಶ್ವಕಪ್‌ನ ದಿನಾಂಕಗಳು ಮತ್ತು ಸ್ಥಳಗಳನ್ನು ಇನ್ನೂ ದೃಢಪಡಿಸಲಾಗಿಲ್ಲ. , ಪಂದ್ಯಾವಳಿ ಪ್ರಾರಂಭವಾಗಲು ಕೇವಲ ಮೂರು ತಿಂಗಳುಗಳು ಉಳಿದಿರುವ ಕಾರಣ ಆತಿಥ್ಯ ವಹಿಸಿರುವ ಬಿಸಿಸಿಐ ಚಡಪಡಿಕೆಯಲ್ಲಿದೆ.

ಆಗಸ್ಟ್ 31ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗಾಗಿ ಭಾರತ ತಂಡ ಈಗಾಗಲೇ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದೆ. ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಕಳೆದುಕೊಂಡರೆ ವಿಶ್ವಕಪ್ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಇದೀಗ ಹೈಬ್ರಿಡ್‌ ಮಾಡೆಲ್‌ಗೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ. ಪ್ರಾದೇಶಿಕ ಪಂದ್ಯಾವಳಿಯನ್ನು ‘ಹೈಬ್ರಿಡ್ ಮಾದರಿಯಲ್ಲಿ’ ಆಯೋಜಿಸಲಾಗುವುದು. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ಮತ್ತು ಉಳಿದ ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.

Exit mobile version