ಮುಂಬಯಿ: 2023ರ ವಿಶ್ವಕಪ್ಗಾಗಿ(World cup 2023) ಭಾರತಕ್ಕೆ ಪ್ರಯಾಣಿಸಲಿರುವ ತಮ್ಮ ಕ್ರಿಕೆಟ್ ತಂಡಕ್ಕೆ ಭದ್ರತೆ ಖಾತರಿ ನೀಡುವ ಲಿಖಿತ ಹೇಳಿಕೆ ಕೊಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡ ಐಸಿಸಿ ಹಾಗೂ ಬಿಸಿಸಿಐಗೆ ಹೇಳಿದೆ. ಈ ಮೂಲಕ ಹೊಸ ತಗಾದೆಯನ್ನು ತೆಗೆದಿದೆ. 14 ಸದಸ್ಯರ ಸಮಿತಿಯು ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರವಾಸದ ಬಗ್ಗೆ ಚರ್ಚಿಸಿತು. ಭಾರತ ಮತ್ತು ಪಾಕ್ ನಡುವಿನ ಪಂದ್ಯದ ದಿನಾಂಕ ಮತ್ತು ಸ್ಥಳವನ್ನು ಒಪ್ಪಿಕೊಂಡಿದ್ದರೂ, ಪಾಕಿಸ್ತಾನ ಸರ್ಕಾರವು ಐಸಿಸಿ ಮತ್ತು ಬಿಸಿಸಿಐ ಎರಡರಿಂದಲೂ ಭದ್ರತಾ ಖಾತರಿಯನ್ನು ಕೋರಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ಬಾಬರ್ ಅಜಮ್ ನೇತೃತ್ವದ ತಂಡ ಭಾರತಕ್ಕೆ ಪ್ರಯಾಣಿಸಲು ಅಲ್ಲಿನ ಸರ್ಕಾರದ ಅನುಮತಿ ಪಡೆಯಬೇಕು. 2016ರ ಟಿ20 ವಿಶ್ವ ಕಪ್ನಲ್ಲಿ ಭಾರತ ತಂಡ ಕೊನೆಯ ಬಾರಿ ಆಡಿತ್ತು. ಅವರ ಕೊನೆಯ ದ್ವಿಪಕ್ಷೀಯ ಸರಣಿ 2012 ರಲ್ಲಿ ನಡೆದಿತ್ತು. ಈ ವಿಷಯದ ಬಗ್ಗೆ ನಿರ್ಧರಿಸಲು ಪ್ರಧಾನಿ ಶೆಹಬಾಜ್ ಷರೀಫ್ ಅವರು ಸಮಿತಿಯನ್ನು ರಚಿಸಿದ್ದರು. ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ನೇತೃತ್ವದ ಸಭೆಯಲ್ಲಿ ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಕೂಡ ಭಾಗವಹಿಸಿದ್ದರು. ಸಮಿತಿಯು ತನ್ನ ಶಿಫಾರಸುಗಳನ್ನು ಪ್ರಧಾನಿಗೆ ಕಳುಹಿಸಲಿದೆ. 2023ರ ವಿಶ್ವಕಪ್ ಭಾಗವಹಿಸುವಿಕೆಯ ಬಗ್ಗೆ ಅಂತಿಮ ಕರೆ ನೀಡಲಿದ್ದಾರೆ.
ಬಿಲಾವಲ್ ನೇತೃತ್ವದ 14 ಸದಸ್ಯರ ಸಮಿತಿಯಲ್ಲಿ ಆಂತರಿಕ ಸಚಿವ ರಾಣಾ ಸನಾವುಲ್ಲಾ, ಕಾನೂನು ಸಚಿವ ಅಜಂ ನಜೀರ್ ತರಾರ್, ಮಾಹಿತಿ ಸಚಿವ ಮರಿಯಮ್ ಔರಂಗಜೇಬ್, ಅಂತರ ಪ್ರಾಂತೀಯ ಸಮನ್ವಯ ಸಚಿವ ಎಹ್ಸಾನ್-ಉರ್-ರೆಹಮಾನ್ ಮಜಾರಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದೇಶಾಂಗ ಕಾರ್ಯದರ್ಶಿ ಇದ್ದರು. ಈ ಸಮಿತಿಯು ಲಿಖಿತ ಭದ್ರತಾ ಭರವಸೆಯನ್ನು ಕೇಳಿದೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮತ್ತೆ ದೀರ್ಘ ಅವಧಿಯ ರಜೆ! ಯಾಕೆ ಗೊತ್ತೇ?
ಅಕ್ಟೋಬರ್ 14ರಂದು ಅಹಮದಾಬಾದ್ನಲ್ಲಿ ಭಾರತ ಮತ್ತು ಪಾಕ್ ನಡುವೆ ಆಡಲು ಪಿಸಿಬಿ ಒಪ್ಪಿಕೊಂಡಿದೆ. ಆರಂಭದಲ್ಲಿ, ಈ ಆಟವನ್ನು ಅಕ್ಟೋಬರ್ 15ರಂದು ಆಡಲು ನಿರ್ಧರಿಸಲಾಗಿತ್ತು ಆದರೆ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬಳಿಕ ವೇಳಾಪಟ್ಟಿಯನ್ನು ಬದಲಾಯಿಸಲಾಯಿತು.