Site icon Vistara News

ind vs pak : ಭಾರತಕ್ಕಿಂತ ನಾವೇ ಸ್ಟ್ಟಾಂಗ್! ಪಾಕ್​ ಬೌಲರ್​​ನ ಅತಿ ವಿಶ್ವಾಸ

India Pakistan Match

ನವದೆಹಲಿ: ಮುಂಬವರು ಏಷ್ಯಾ ಕಪ್​ ಮತ್ತು ವಿಶ್ವ ಕಪ್​ಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಈ ಎರಡೂ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (ind vs pak) ಸೆಣಸುತ್ತಿರುವ ಕಾರಣ ಟೂರ್ನಿಗೆ ನಿಧಾನಕ್ಕೆ ಕಳೆಗಟ್ಟುತ್ತಿದೆ. ವಿಶ್ವದ ಕ್ರಿಕೆಟ್​ ಪ್ರೇಮಿಗಳು ಈ ಪಂದ್ಯಗಳಲ್ಲಿ ಗೆಲ್ಲುವುದು ಯಾರಿರಬಹುದು ಎಂಬ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ. ಭಾರತ ಅಥವಾ ಪಾಕಿಸ್ತಾನದಲ್ಲಿ ಯಾರು ಉತ್ತಮ ಆಟಗಾರರು, ಯಾರು ಮ್ಯಾಚ್​ ವಿನ್ನರ್​ಗಳು ಎಂಬ ಚರ್ಚೆ ಆರಂಭಗೊಂಡಿದೆ. ಏತನ್ಮಧ್ಯೆ, 2023ರ ಏಷ್ಯಾ ಕಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವ ಕಪ್​ಗೆ ಹೋಗುವ ಟೀಮ್ ಇಂಡಿಯಾಕ್ಕಿಂತ ಪಾಕಿಸ್ತಾನ ತಂಡವೇ ಹೆಚ್ಚು ಸ್ಥಿರವಾಗಿದೆ ತಂಡ ಎಂದು ಪಾಕಿಸ್ತಾನದ ಮಾಜಿ ವೇಗಿ ಸರ್ಫರಾಜ್ ನವಾಜ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ ಹಾಗೂ ತಂಡದ ಸಂಯೋಜನೆ ಕುರಿತೂ ಮಾಹಿತಿ ಇಲ್ಲ ಎಂದು ಹೇಳಿದ ನವಾಜ್, ಬಿಸಿಸಿಐ ನಿಯಮಿತವಾಗಿ ನಾಯಕರನ್ನು ಬದಲಾಯಿಸುತ್ತಿದೆ ಹಾಗೂ ಅನನುಭವಿ ಆಟಗಾರರೊಂದಿಗೆ ಪ್ರಯೋಗಗಳನ್ನು ಮಾಡುತ್ತಿದೆ ಎಂದು ಹೇಳಿದರು. ಭಾರತ ತಂಡದ ಆಯ್ಕೆದಾರರು ತಮ್ಮ ಪತನಕ್ಕೆ ಎಡೆ ಮಾಡಿಕೊಡುತ್ತಿದೆ. ಪ್ರಯೋಗಗಳಿಂದ ಭಾರತ ತಂಡಕ್ಕೆ ಸಹಾಯ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೂ ಪ್ರಕಟವಾಗಿಲ್ಲ ತಂಡ

ಭಾರತ ತಂಡಕ್ಕೆ ಹೋಲಿಸಿದರೆ ಪಾಕಿಸ್ತಾನವು ಏಷ್ಯಾ ಕಪ್ ಮತ್ತು ವಿಶ್ವಕಪ್​ನಲ್ಲಿ ಹೆಚ್ಚು ಸ್ಥಿರವಾದ ಮತ್ತು ಸದೃಢವಾಗಿರುವ ಬಳಗವನ್ನು ಹೊಂದಿದೆ. ಪ್ರಮುಖ ಟೂರ್ನಿಗೆ ತಮ್ಮ ಅಂತಿಮ ಸಂಯೋಜನೆಯನ್ನು ರೂಪಿಸಲು ಭಾರತೀಯರಿಗೆ ಇನ್ನೂ ಸಾಧ್ಯವಾಗಿಲ್ಲ. ನಾಯಕರು ಬದಲಾಗುತ್ತಿದ್ದಾರೆ, ಅನೇಕ ಹೊಸ ಆಟಗಾರರನ್ನು ಪ್ರಯತ್ನಿಸಲಾಗುತ್ತಿದೆ. ಸರಿಯಾದ ಸಂಯೋಜನೆಗಳಿಲ್ಲ. ಭಾರತ ತಂಡವನ್ನು ಅಭಿವೃದ್ಧಿಪಡಿಸುವ ಬದಲು ಅದನ್ನು ನಾಶಪಡಿಸಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ನವಾಜ್ ಹೇಳಿದ್ದಾರೆ.

ಇದನ್ನೂ ಓದಿ : IND vs WI: 4ನೇ ಟಿ20; ಹಾರ್ದಿಕ್​ ಪಡೆಗೆ ಮಸ್ಟ್​ ವಿನ್​ ಗೇಮ್​

ಕಳೆದ 10 ವರ್ಷಗಳಿಂದ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲವಾದ್ದರಿಂದ ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಭಾರತವು ಸಾಕಷ್ಟು ಒತ್ತಡವನ್ನು ಅನುಭವಿಸಲಿದೆ ಎಂದು ನವಾಜ್ ಇದೇ ವೇಳೆ ನುಡಿದರು.

ತವರಿನಲ್ಲಿ ಆಡುವಾಗ ಯಾವಾಗಲೂ ಹೆಚ್ಚಿನ ನಿರೀಕ್ಷೆಗಳು ಇರುತ್ತವೆ. ಅದರಿಂದ ಅದು ಹೆಚ್ಚಿನ ಒತ್ತಡ ಸೃಷ್ಟಿಸುತ್ತದೆ. ಇವೆಲ್ಲದರ ನಡುವೆ ಭಾರತದ ಪ್ಲಸ್ ಪಾಯಿಂಟ್ ಎಂದರೆ ತಂಡದಲ್ಲಿ ಕೆಲವು ಉತ್ತಮ ಹಿರಿಯ ಆಟಗಾರರು ಇದ್ದಾರೆ ಎಂದು ನವಾಜ್ ಹೇಳಿದರು.

ಭಾರತಕ್ಕೆ ಅಫ್ರಿದಿ ಭಯ ಕಾಡಲಿದೆ

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು ಶ್ಲಾಘಿಸಿದ ಸರ್ಫರಾಜ್ ನವಾಜ್, ಶಾಹಿನ್​ ಅವರು ಅಸಾಧಾರಣ ಬೌಲರ್’ ಎಂದು ಹೇಳಿದ್ದಾರೆ. ಬಾಬರ್ ಅಜಮ್ ನಾಯಕತ್ವದಲ್ಲಿ ಮುಂಬರುವ ಮೆಗಾ ಟೂರ್ನಿಗಳಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಲಿದೆ ಎಂದು 74 ವರ್ಷದ ಹಫೀಜ್ ಹೇಳಿದ್ದಾರೆ.

ಅವರು ಅಸಾಧಾರಣ ಬೌಲರ್ ಮತ್ತು ಅವರ ಮೊದಲ ಸ್ಪೆಲ್​ನ ಎರಡು ಮೂರು ಓವರ್​ಗಳಲ್ಲಿ ತುಂಬಾ ಮಾರಕವಾಗಿದ್ದಾರೆ. ಸ್ವಿಂಗ್, ಸೀಮ್ ಮತ್ತು ವೇಗದ ಮೇಲೆ ಅಂಥ ನಿಯಂತ್ರಣ ಹೊಂದಿರುವ ಬೌಲರ್ ಮತ್ತು ಹೊಸ ಚೆಂಡಿನೊಂದಿಗೆ ಯಾರ್ಕರ್ ಹಾಕುತ್ತಾರೆ ಎಂದು ಹೇಳಿದ್ದರು.

ಎರಡೂ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಏಕೆಂದರೆ ನಾವು ಸ್ಥಿರ ತಂಡವನ್ನು ಹೊಂದಿದ್ದೇವೆ ಮತ್ತು ಬಾಬರ್ ಅಜಮ್ ಅವರನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿ ಮತ್ತು ಏಷ್ಯಾ ಕಪ್​ಗೆ ಆಯ್ಕೆ ಸಮಿತಿಯು ಸಮತೋಲಿತ ತಂಡವನ್ನು ಆಯ್ಕೆ ಮಾಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

Exit mobile version