ನವ ದೆಹಲಿ : ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನದಲ್ಲೇ ನಡೆಸಬೇಕು ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಮೊಂಡು ವಾದ ಮಾಡುತ್ತಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ಗೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಿರುವ ಆ ದೇಶದಲ್ಲಿ ಅಯೋಜನೆ ಮಾಡುವುದು ಕೊಂಚವೂ ಇಷ್ಟವಿಲ್ಲ. ಬಿಸಿಸಿಐ ಕೂಡ ಪಾಕ್ ವಾದಕ್ಕೆ ವಿರೋಧ ವ್ಯಕ್ತಪಡಿಸಿವೆ. ಭಾರತ ಕ್ರಿಕೆಟ್ ತಂಡದ ಆಟಗಾರರು ಪಾಕಿಸ್ತಾನದಲ್ಲಿ ಸುರಕ್ಷಿತವಲ್ಲ ಎಂಬುದೇ ಅವರ ವಾದ. ಅದಕ್ಕೆ ಪೂರಕವಾಗಿ ಈಗ ಅಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ ಅದು ಸುರಕ್ಷಿತವಲ್ಲ ಎಂದೇ ಹೇಳಬಹುದು.
ಫೆಬ್ರವರಿ 5ರಂದು ಪಾಕಿಸ್ತಾನ ಕ್ರಿಕೆಟ್ ಲೀಗ್ (ಪಿಎಸ್ಎಲ್) ಕ್ರಿಕೆಟ್ನ ಪ್ರದರ್ಶನ ಪಂದ್ಯ ಆಯೋಜನೆಗೊಂಡಿದ್ದ ಬುಗ್ತಿ ಸ್ಟೇಡಿಯಮ್ ಇರುವ ಕ್ವೆಟ್ಟಾ ನಗರದಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಪ್ರದರ್ಶನ ಪಂದ್ಯವೇ ರದ್ದಾಗಿದೆ. ಕೆಲವು ದಿನಗಳ ಹಿಂದೆ ಪೆಶಾವರಲ್ಲಿ ನಡೆದ ಬಾಂಬ್ ಬ್ಲಾಸ್ಟ್ನಲ್ಲಿ 101 ಮಂದಿ ಮೃತಪಟ್ಟಿದ್ದಾರೆ. ಭಯೋತ್ಪಾದಕರ ತಾಣವಾಗಿರುವ ಪಾಕಿಸ್ತಾನದಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುವ ಕಾರಣ ಭಾರತ ತಂಡದ ಆಟಗಾರರು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂಬುದೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾದವಾಗಿದೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಪಾಕಿಸ್ತಾನದಲ್ಲಿ ಗುಂಡಿನ ದಾಳಿ ನಡೆದ ಬಳಿಕ ಅಲ್ಲಿಗೆ ಕ್ರಿಕೆಟ್ ತಂಡಗಳು ಹೋಗುತ್ತಿರಲಿಲ್ಲ. ಇತ್ತೀಚಿಗೆ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಅಲ್ಲಿಗೆ ಪ್ರವಾಸ ಮಾಡಿದ್ದವು. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ತಂಟೆ ಜತೆಗೆ ರಾಜಕೀಯ ಮನಸ್ತಾಪ ಇರುವ ಕಾರಣ ಎರಡೂ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವೂ ಮುರಿದು ಬಿದ್ದಿದೆ. ಹೀಗಾಗಿ 2006ರ ಬಳಿಕ ಭಾರ ಕ್ರಿಕೆಟ್ ತಂಡ ನೆರೆಯ ದೇಶಕ್ಕೆ ಕಾಲಿಟ್ಟಿಲ್ಲ. ಸದ್ಯದ ವೈಷಮ್ಯ ನೋಡಿದರೆ ಎರಡೂ ದೇಶಗಳು ಪರಸ್ಪರ ಪ್ರವಾಸ ಮಾಡುವುದು ಸಾಧ್ಯತೇ ಇಲ್ಲ.
ಮುಂಬರುವ ಏಷ್ಯಾ ಕಪ್ನ ಆತಿಥ್ಯ ಪಡೆದ ಪಾಕಿಸ್ತಾನ ನಮ್ಮ ದೇಶದಲ್ಲಿಯೇ ಟೂರ್ನಿ ನಡೆಸಬೇಕು ಎಂದು ಪಟ್ಟು ಹಿಡಿದಿದೆ. ಆದರೆ, ಭಾರತ ತಂಡ ಅಲ್ಲಿಗೆ ಹೋಗಲು ಒಪ್ಪುತ್ತಿಲ್ಲ. ಏಷ್ಯ ಕ್ರಿಕೆಟ್ ಕೌನ್ಸಿಲ್ ಕೂಡ ಅದೇ ಮಾತನ್ನು ಹೇಳುತ್ತಿದೆ. ಇದೀಗ ಆಗಿರುವ ಬಾಂಬ್ ಬ್ಲಾಸ್ಟ್ ಪ್ರಕರಣವೂ ಬಿಸಿಸಿಐ ನಿರಾಕರಣೆಗೆ ಇನ್ನೊಂದು ಸಾಕ್ಷಿ ಸಿಕ್ಕಂತಾಗಿದೆ.
ಇದನ್ನೂ ಓದಿ : Quetta Blast: ಕ್ರಿಕೆಟ್ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ; ಪಾಕ್ ನಾಯಕ ಬಾಬರ್ ಅಜಂ ಬಚಾವ್!