ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ 2023 ರ (Asian Games) ರೋಮಾಂಚಕ ಪಂದ್ಯದಲ್ಲಿ ಬಾಂಗ್ಲಾದೇಶವು ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ 6 ವಿಕೆಟ್ ಗೆಲುವು ಸಾಧಿಸಿತು. ಚಿನ್ನದ ಪದಕಕ್ಕಾಗಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡ ನಂತರ ಎರಡೂ ತಂಡಗಳು ಮೂರನೇ ಸ್ಥಾನವನ್ನು ಪಡೆಯಲು ಪ್ರಯತ್ನಿಸಿದ್ದರಿಂದ ಈ ಹೋರಾಟ ಕುತೂಹಲಕಾರಿಯಾಗಿತ್ತು. ಅದರೆ, ಪಾಕಿಸ್ತಾನ ತಂಡವನ್ನು ಸೋಲಿಸಿದ ಬಾಂಗ್ಲಾದೇಶವನ್ನು ಕಂಚಿನ ಪದಕ ತನ್ನದಾಗಿಸಿಕೊಂಡಿತು. ಎರಡನೇ ಶ್ರೇಯಾಂಕ ಹೊಂದಿದ್ದ ಪಾಕಿಸ್ತಾನ ತಂಡ ಯಾವುದೇ ಪದಕಗಳನ್ನು ಗೆಲ್ಲದೇ ನಿರಾಸೆಯಿಂದ ತವರಿಗೆ ಮರಳುವಂತಾಯಿತು.
ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಮೂರನೇ ಸ್ಥಾನದ ಪಂದ್ಯದಲ್ಲಿ ರಕಿಬುಲ್ ಹಸನ್ ಅವರ ಕೊನೆಯ ಎಸೆತದಲ್ಲಿ ಫೋರ್ ರನ್ ಬಾರಿಸಿ ಬಾಂಗ್ಲಾದೇಶವು ಕಂಚಿನ ಪದಕ ಗೆಲ್ಲಲು ಸಹಾಯ ಮಾಡಿದರು. ಮಳೆ ಪೀಡಿತ ಡಿಎಲ್ಎಸ್ ಗುರಿಯನ್ನು ಸರಿಹೊಂದಿಸಿದ ನಂತರ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 5 ಓವರ್ಗಳಲ್ಲಿ 65 ರನ್ ಗಳಿಸಬೇಕಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ 5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತ್ತು. ಆದರೆ ಎರಡನೇ ಬಾರಿಗೆ ಮಳೆ ಬಂದಾಗ ಐದು ಓವರ್ ಗಳ ನಂತರ ಅವರ ಇನ್ನಿಂಗ್ಸ್ ಮೊಟಕುಗೊಂಡಿತು. ಬಳಿಕ ಬಾಂಗ್ಲಾದೇಶಕ್ಕೆ ದೊಡ್ಡ ಗುರಿಯನ್ನು ನೀಡಲಾಗಿತ್ತು.
ಬಾಂಗ್ಲಾದೇಶದ ಇನ್ನಿಂಗ್ಸ್ನ ಆರಂಭಿಕ ಓವರ್ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಅರ್ಷದ್ ಇಕ್ಬಾಲ್ ಎರಡು ವಿಕೆಟ್ ಪಡೆದು ಪಾಕಿಸ್ತಾನಕ್ಕೆ ಆರಂಭಿಕ ಮುನ್ನಡೆ ಕೊಟ್ಟಿತು. ಆದರೆ ಅಫಿಫ್ ಹುಸೇನ್ ಅವರ 11 ಎಸೆತಗಳಲ್ಲಿ 20 ಮತ್ತು ಯಾಸಿರ್ ಅಲಿ ಅವರ 16 ಎಸೆತಗಳಲ್ಲಿ 34 ರನ್ ಬಾರಿಸಿ ಬಾಂಗ್ಲಾದೇಶವನ್ನು ಗೆಲುವಿನೆಡೆಗೆ ಮುನ್ನಡೆಸಿದರು. ಅವರು ಕೊನೇ ಓವರ್ನಲ್ಲಿ 6,26,2 ರನ್ ಬಾರಿಸಿ 16 ರನ್ ಬಾರಿಸಿ ಔಟಾದರು. ಆದರೆ ಆಟದ ಕೊನೆಯ ಎಸೆತದಲ್ಲಿ 4 ರನ್ ಗೆಲುವಿಗೆ ಬೇಕಾಗಿತ್ತು. ರಕಿಬಲ್ ಹಸನ್ ಫೋರ್ ಹೊಡೆದು ತಂಡಕ್ಕೆ ಕಂಚಿನ ಪದಕ ತಂದುಕೊಟ್ಟರು.
ಇದನ್ನೂ ಓದಿ : Asian Games : ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ
ಖುಷ್ದಿಲ್ ಶಾ ಮತ್ತು ಮಿರ್ಜಾ ಬೇಗ್ ನಡುವಿನ 47 ರನ್ಗಳ ಜೊತೆಯಾಟದಿಂದ ಪಾಕಿಸ್ತಾನವೂ ಉತ್ತಮ ಹಾದಿಯಲ್ಲಿ ಸಾಗುತ್ತಿತ್ತು. 4.4 ಓವರ್ ಗಳಲ್ಲಿ ಒಳಗೆ ಬೇಗ್ 18 ಎಸೆತಗಳಲ್ಲಿ 32 ರನ್ ಗಳಿಸಿದರು. ಎಡಗೈ ಸ್ಪಿನ್ನರ್ ರಕಿಬುಲ್ ಬೌಲಿಂಗ್ನಲ್ಲಿ 1 ವಿಕೆಟ್ ಪಡೆದು 12 ರನ್ ನೀಡಿ ತಂಡಕ್ಕೆ ನೆರವಾದರು.
ಮಳೆಯಿಂದಾಗಿ ವಿಳಂಬ
ಮಳೆಯಿಂದಾಗಿ ಆಟದ ಪ್ರಾರಂಭವು ವಿಳಂಬವಾಗಿ ಆರಂಭವಾಯಿತು. ಒಂದು ವೇಳೆ ಪಂದ್ಯ ರದ್ದಾದರೆ ಪಾಕಿಸ್ತಾನ ತಂಡ ಕಂಚಿನ ಪದಕ ಗೆಲ್ಲುತ್ತಿತ್ತು. ಆದಾಗ್ಯೂ, ಅದೃಷ್ಟ ಬಾಂಗ್ಲಾ ಹುಲಿಗಳ ಪರವಾಯಿತು.