Site icon Vistara News

ENGvsPAK | ಪಾಕ್‌ ತಂಡಕ್ಕೆ ತವರಿನಲ್ಲಿ ಮುಖಭಂಗ, ಮೊದಲ ಟೆಸ್ಟ್‌ನಲ್ಲಿ ಆಂಗ್ಲರಿಗೆ ಜಯ

INDvsPAK

ರಾವಲ್ಪಿಂಡಿ : ೧೭ ವರ್ಷದ ಬಳಿಕ ಪಾಕಿಸ್ತಾನ ನೆಲಕ್ಕೆ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್‌ (ENGvsPAK) ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಬಳಗದ ವಿರುದ್ಧ ೭೪ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ ತಂಡ ೧-೦ ಮುನ್ನಡೆಯನ್ನು ಪಡೆದುಕೊಂಡಿತು.

ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ ೬೫೭ ರನ್ ಬಾರಿಸಿ, ಎರಡನೇ ಇನಿಂಗ್ಸ್‌ನಲ್ಲಿ ೭ ವಿಕೆಟ್‌ ನಷ್ಟಕ್ಕೆ ೨೬೪ ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ೩೪೩ ರನ್‌ಗಳ ಗೆಲುವಿನ ಗುರಿಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ ತಂಡ ೨೬೮ ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು. ಪಾಕಿಸ್ತಾನ ತಂಡವೂ ಮೊದಲ ಇನಿಂಗ್ಸ್‌ನಲ್ಲಿ ೫೭೯ ರನ್‌ ಬಾರಿಸಿತ್ತು.

ಈ ಪಂದ್ಯವು ಗರಿಷ್ಠ ಮೊತ್ತ ದಾಖಲಾಗಿದ್ದ ಹೊರತಾಗಿಯೂ ಫಲಿತಾಂಶ ಕಂಡ ಟೆಸ್ಟ್‌ ಪಂದ್ಯ ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿತು. ಎರಡೂ ತಂಡಗಳು ಸೇರಿ ಇಲ್ಲಿ ಐದು ದಿನಗಳಲ್ಲಿ ೧೭೬೮ ರನ್‌ ಬಾರಿಸಿವೆ.

ಇದನ್ನೂ ಓದಿ | World Record | ಟೆಸ್ಟ್‌ ಪಂದ್ಯದ ಮೊದಲ ದಿನ 506 ರನ್‌; ಹೊಸ ದಾಖಲೆ ಸೃಷ್ಟಿಸಿದೆ ಇಂಗ್ಲೆಂಡ್‌ ತಂಡ

Exit mobile version