Site icon Vistara News

PAK vs ENG | ಕೆಟ್ಟದಾಗಿ ಸೋತಿದಕ್ಕೆ ಪತ್ರಿಕಾಗೋಷ್ಠಿಗೆ ನನ್ನನ್ನು ಕಳುಹಿಸಿದರು ಎಂದ ಪಾಕ್‌ ಬೌಲಿಂಗ್‌ ಕೋಚ್

ಲಾಹೋರ್‌ : ಪಾಕಿಸ್ತಾನದ ಬೌಲಿಂಗ್‌ ಕೋಚ್‌ ಶಾನ್‌ ಟೇಟ್‌ ಅವರು ತಮ್ಮ ತಂಡದ ಮ್ಯಾನೇಜ್ಮೆಂಟ್‌ಗೆ ಇರಿಸುಮುರಸಾಗುವಂಥ ಹೇಳಿಕೆ ನೀಡಿದ ಸಂದರ್ಭ ಶನಿವಾರ ರಾತ್ರಿ ನಡೆದಿದೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಟಿ೨೦ ಸರಣಿಯ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾನ್‌ ಈ ಮಾತನ್ನು ಹೇಳಿದ್ದರು. ಅವರು ಹೇಳಿಕೆ ನೀಡುತ್ತಿದ್ದಂತೆ ತಂಡದ ಮಾಧ್ಯಮ ಸಮನ್ವಯಕಾರ ಅಲ್ಲಿಗೆ ಮೈಕ್‌ ಆಫ್‌ ಮಾಡಿ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಸರಣಿಯ ಆರನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ೮ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಯಿತು. ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಗೆ ಬೌಲಿಂಗ್‌ ಕೋಚ್‌ ಶಾನ್‌ ಟೇಟ್‌ ಅವರನ್ನು ಕಳುಹಿಸಿದ್ದರು. ಮಾಧ್ಯಮ ಸಂಯೋಜಕ ಪತ್ರಿಕಾಗೋಷ್ಠಿ ಆರಂಭ ಮಾಡುತ್ತಿದ್ದಂತೆ, ಶಾನ್‌ ಟೇಟ್‌ ಅವರು “ನಾವು ಕೆಟ್ಟದಾಗಿ ಸೋತೆವು. ಹೀನಾಯವಾಗಿ ಸೋತ ಕಾರಣ ನನ್ನನ್ನು ಪತ್ರಿಕಾಗೋಷ್ಠಿಗೆ ನನ್ನನ್ನು ಕಳುಹಿಸಿದ್ದಾರೆ,” ಎಂದು ಹೇಳಿದರು.

ಮುಜುಗರಕ್ಕೆ ಒಳಗಾದ ಮಾಧ್ಯಮ ಸಮನ್ವಯಕಾರ ಅಲ್ಲಿಗೆ ಹೋಗಿ ಮೈಕ್ ಆಫ್‌ ಮಾಡಿದರು. ಅಲ್ಲದೆ, ತಾವು ತಪ್ಪಾಗಿ ಮಾತನಾಡುತ್ತಿದ್ದೀರಾ ಎಂದು ಹೇಳಿದರು. ಅವರ ಸೂಚನೆಯ ಬಳಿಕ ತಪ್ಪು ಸರಿಪಡಿಸಿಕೊಂಡ ಶಾನ್‌ ಟೇಟ್‌, ಮುಂದಿನ ಪ್ರಶ್ನೆಗಳಿಗೆ ಉತ್ತರಿಸಿದರು.

ಇದನ್ನೂ ಓದಿ | Babar Azam | ವಿರಾಟ್‌ ಕೊಹ್ಲಿಯ ದಾಖಲೆ ಸರಿಗಟ್ಟಿದ ಬಾಬರ್‌ ಅಜಮ್‌, ಏನದು ಹೊಸ ಸಾಹಸ?

Exit mobile version