Site icon Vistara News

World Cup 2023 : ಚೆನ್ನೈನಲ್ಲೂ ಆಡಲ್ಲ ಅಂತಿದೆ ಪಾಕಿಸ್ತಾನ; ಬಾಬರ್​ ಬಳಗದ ಆಕ್ಷೇಪಗಳಿಗೆ ಕೊನೆಯೇ ಇಲ್ಲ!

Pakistan Cricket Team

#image_title

ಮುಂಬಯಿ: ಮುಂಬರುವ ವಿಶ್ವ ಕಪ್​ನ (World Cup 2023) ಕರಡು ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ ತಂಡಕ್ಕೆ ಚೆನ್ನೈನ ಎಂ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​​ನಲ್ಲಿ ಅಪಘಾನಿಸ್ತಾನ ವಿರುದ್ಧ ಪಂದ್ಯವೊಂದಿದೆ. ಆದರೆ, ಅಫಘಾನಿಸ್ತಾನ ವಿರುದ್ಧ ಚೆನ್ನೈನಲ್ಲಿ ಪಂದ್ಯ ನಡೆಸುವುದು ಬೇಡ ಎಂಬುದಾಗಿ ಪಾಕಿಸ್ತಾನ ತಂಡ ಆಕ್ಷೇಪ ಎತ್ತಿದೆ ಎನ್ನಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲೂ ಅಸಮ್ಮತಿ ಸೂಚಿಸಿದೆ. ಬ್ಯಾಟಿಂಗ್​ಗೆ ನೆರವಾಗುವ ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ ಆಡಲು ಆ ತಂಡದ ನಿಯೋಗ ನಿರಾಕರಿಸಿದೆ.

ಏಷ್ಯಾ ಕಪ್ ಆಯೋಜನೆ ಕುರಿತ ಬಿಕ್ಕಟ್ಟು ಕೊನೆಗೊಂಡಿರುವ ಕಾರಣ ಪಾಕಿಸ್ತಾನ ತಂಡವು ಅಕ್ಟೋಬರ್ -ನವೆಂಬರ್​ನಲ್ಲಿ ವಿಶ್ವಕಪ್​​ಗಾಗಿ ಭಾರತಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್​ನಲ್ಲಿ ಆಯೋಜನೆಗೊಂಡಿದೆ. ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು, ಕರಡು ಪ್ರತಿಯನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೇರಿದಂತೆ ಎಲ್ಲ ಸದಸ್ಯ ಮಂಡಳಿಗಳನ್ನು ಪ್ರಸ್ತಾವಿತ ಪ್ರಯಾಣದ ಬಗ್ಗೆ ಸಲಹೆಗಳನ್ನು ಕೇಳಿದೆ.

50 ಓವರ್​ಗಳ ವಿಶ್ವ ಕಪ್​ಗಾಗಿ ಐಸಿಸಿ ಮತ್ತು ಬಿಸಿಸಿಐ ನೀಡಿರುತ ತಾತ್ಕಾಲಿಕ ಪಟ್ಟಿಯಲ್ಲಿನ ಪಾಕಿಸ್ತಾನದ ಪಂದ್ಯಗಳನ್ನು ಅನುಮೋದಿಸುವ ಕಾರ್ಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದತ್ತಾಂಶ, ವಿಶ್ಲೇಷಣೆ ಮತ್ತು ತಂಡದ ಕಾರ್ಯತಂತ್ರ ತಜ್ಞರು ನಡೆಸುತ್ತಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ತಂಡವು ಕೆಲವೊಂದು ತಾಣಗಳ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ.

ಪಾಕಿಸ್ತಾನ ತಂಡದ ಕೆಲವು ನಿಗದಿತ ಪಂದ್ಯಗಳು ಮತ್ತು ಸ್ಥಳಗಳ ಬಗ್ಗೆ ವಿಶ್ಲೇಷಣೆ ಮಾಡಿದ ನಕಾರಾತ್ಮಕ ವರದಿ ಕಳುಹಿಸಿದೆ. ಉದಾಹರಣೆಗೆ ಪಾಕಿಸ್ತಾನವು ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ : Asia Cup 2023 : ಭಾರತ ತಂಡಕ್ಕೆ ಸೋಲಿನ ಭಯ, ಅದಕ್ಕೆ ಪಾಕ್​ಗೆ ಬರುವುದಿಲ್ಲ ಎಂದ ಮಾಜಿ ನಾಯಕ ಮಿಯಾಂದಾದ್​

ಸ್ಪಿನ್ ಸ್ನೇಹಿ ಚೆನ್ನೈ ಪಿಚ್​​ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುವುದು ಕಷ್ಟ. 2023ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟನ್ಸ್ ಪರ ಉತ್ತಮ ಪ್ರದರ್ಶನ ನೀಡಿದ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅಫಘಾನಿಸ್ತಾನ ತಂಡದಲ್ಲಿ ಇರುತ್ತಾರೆ. ಅವರು ಮಿಂಚಿದರೆ ಸೋಲು ಖಚಿತ ಎಂಬುದು ಪಾಕಿಸ್ತಾನ ತಂಡದ ಭಯ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪರಿಸ್ಥಿತಿಗಳು ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರುತ್ತವೆ. ಹೀಗಾಗಿ ಚೆನ್ನೈ ಬದಲಿಗೆ ಬೆಂಗಳೂರಿನಲ್ಲಿ ಅಫಘಾನಿಸ್ತಾನ ತಂಡವನ್ನು ಎದುರಿಸುವ ಇರಾದೆ ಹೊಂದಿದೆ ಪಾಕಿಸ್ತಾನ. ಆಸ್ಟ್ರೇಲಿಯಾ ತಂಡದ ವಿರುದ್ಧ ಚೆನ್ನೈನಲ್ಲಿ ಆಡುವುದು ಉತ್ತಮ ಎಂದು ಮಂಡಳಿಗೆ ಸಲಹೆ ನೀಡಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಪಂದ್ಯಗಳನ್ನು ಮರು ನಿಗದಿಪಡಿಸಲು ಮತ್ತು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾದಲ್ಲಿ ಆಡಲು ಐಸಿಸಿಗೆ ಮನವಿ ಮಾಡಲು ಪಾಕಿಸ್ತಾನ ತಂಡ ಮುಂದಾಗಿದೆ ಎನ್ನಲಾಗಿದೆ. ಐಸಿಸಿ ಸದಸ್ಯರಿಗೆ ಪ್ರಯಾಣದ ಬಗ್ಗೆ ಸಲಹೆಗಳನ್ನು ಕೇಳುವುದು ಪ್ರೋಟೋಕಾಲ್​​ನ ಭಾಗವಷ್ಟೇ. ತಾಣ ಬದಲಾಯಿಸುವ ಅವಕಾಶ ಇಲ್ಲ. ಒಂದು ವೇಳೆ ಬದಲಾಯಿಸಬೇಕಾಗಬಹುದು ಎಂದರೆ ಬಲವಾದ ಕಾರಣ ಇರಬೇಕು.

ಭದ್ರತೆಯ ನೆಪ

2016ರಲ್ಲಿ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ಗಾಗಿ ಭಾರತ ಪ್ರವಾಸ ಕೈಗೊಂಡಾಗ ಮಾಡಿದಂತೆಯೇ ಭದ್ರತಾ ಕಾರಣಗಳಿಂದಾಗಿ ಸದಸ್ಯ ಮಂಡಳಿಯು ಸ್ಥಳ ಬದಲಾವಣೆಗೆ ಒತ್ತಾಯಿಸಬಹುದು. ಆದರೆ, ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಗೆ ಅನುಗುಣವಾಗಿ ನೀವು ಸ್ಥಳದ ಬಗ್ಗೆ ಆಕ್ಷೇಪಣೆಗಳನ್ನು ಹಾಕಿದರೆ ಸ್ವೀಕಾರವಾಗದು.

ಆಧುನಿಕ ಕ್ರಿಕೆಟ್​​ನ ಅವಶ್ಯಕತೆಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ ಆಯ್ಕೆದಾರರು ಯಾವುದೇ ಪಂದ್ಯಕ್ಕೆ ಮುಂಚಿತವಾಗಿ ತಂಡದ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಡೇಟಾ ಮತ್ತು ವಿಶ್ಲೇಷಣೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಪಾಕಿಸ್ತಾನ ತಂಡ ಮುಖ್ಯ ಆಯ್ಕೆದಾರ ಹಾರೂನ್ ರಶೀದ್ ಹೇಳಿದ್ದಾರೆ.

ಅಹ್ಮದಾಬಾದ್​ನಲ್ಲಿ ಭಾರತ ವಿರುದ್ಧ ತನ್ನ ಪಂದ್ಯವನ್ನು ಆಡಲು ಪಾಕಿಸ್ತಾನ ಸಿದ್ಧವಾಗಿದೆಯೇ ಎಂದು ಕೇಳಿದಾಗ, ಪಿಸಿಬಿ ಮೂಲಗಳು ಹೆಚ್ಚು ಕಡಿಮೆ ಒಪ್ಪಿಕೊಂಡಿವೆ. ಸರ್ಕಾರದಿಂದ ಅಂತಿಮ ಕರೆ ಬರಲಿದೆ ಎಂದು ಹೇಳಿದರು.

ಪಾಕಿಸ್ತಾನ ತಂಡದ ಆರಂಭಿಕ ಎರಡು ಅರ್ಹತಾ ಪಂದ್ಯಗಳು ಅಕ್ಟೋಬರ್ 6 ಮತ್ತು 12 ರಂದು ಹೈದರಾಬಾದ್​ನಲ್ಲಿ ನಡೆಯಲಿವೆ. ಚೆನ್ನೈ, ಕೋಲ್ಕೊತಾ, ಬೆಂಗಳೂರು ಮತ್ತು ಅಹಮದಾಬಾದ್​ನಲ್ಲಿ ಪಾಕಿಸ್ತಾನ ಆಡುವ ನಿರೀಕ್ಷೆಯಿದೆ.

Exit mobile version