ಕೋಲ್ಕತಾ: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಹಾಲಿ ಆವೃತ್ತಿಯ ವಿಶ್ವ ಕಪ್ನ (ICC World Cup 2023) ಲೀಗ್ ಹಂತದಿಂದಲೇ ಹೊರಕ್ಕೆ ನಡೆದಿದೆ. ಭಾರತೀಯ ಉಪ ಖಂಡದ ಲಾಭಗಳನ್ನು ಬಳಸಿಕೊಂಡು ಕಪ್ ಗೆದ್ದುಕೊಂಡು ಬರುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಪಾಕ್ ತಂಡ ನಿರಾಶಾದಾಯಕ ಪ್ರದರ್ಶನ ನೀಡುವ ಮೂಲಕ ಮೊದಲ ಹಂತದಿಂದಲೇ ನಿರ್ಗಮಿಸಿದೆ. ಈ ಮೂಲಕ ಆಡಳಿತಾತ್ಮಕವಾಗಿ ಹಾಗೂ ಆಂತರಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಪಾಕ್ ತಂಡ ಭಾರತದಿಂದ ಬೇಸರದಿಂದ ನಿರ್ಗಮಿಸುವಂತಾಗಿದೆ.
ಪಾಕಿಸ್ತಾನ ತಂಡ ಹೊರಕ್ಕೆ ಬೀಳುತ್ತಿದ್ದಂತೆಯೇ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಫಿಕ್ಸ್ ಆಗಿದೆ. ನವೆಂಬರ್ 15ರಂದು ಮೊದಲ ಸೆಮಿ ಫೈನಲ್ ನಡೆಯಲಿದ್ದು, ಈ ಪಂದ್ಯ ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಅಯೋಜನೆಗೊಂಡಿದೆ.
ನವೆಂಬರ್ 11ರಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಅಂತರದ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ಗೇರುವ ಅವಕಾಶ ಇತ್ತು.ಗೆಲುವಿನ ಜತೆಗೆ ನ್ಯೂಜಿಲ್ಯಾಂಡ್ ತಂಡವನ್ನು ನೆಟ್ರನ್ ರೇಟ್ನಲ್ಲಿ ಹಿಂದಿಕ್ಕಿ ಪಾಕಿಸ್ತಾನ ತಂಡ ಉಪಾಂತ್ಯಕ್ಕೆ ಪ್ರವೇಶ ಮಾಡಬೇಕಾಗಿತ್ತು. ಆದರೆ ಆ ಗುರಿ ಅಸಾಧ್ಯವಾಗಿತ್ತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 337 ರನ್ ಬಾರಿಸಿತ್ತು. ಕೇವಲ 6. 4 ಓವರ್ಗಳಲ್ಲಿ ಆ ಗುರಿಯನ್ನು ಮುಟ್ಟಿದ್ದರೆ ಪಾಕ್ಗೆ ಸೆಮೀಸ್ ಪ್ರವೇಶದ ಅವಕಾಶ ಇತ್ತು. ಆ ಅವಕಾಶ ಮುಗಿದ ತಕ್ಷಣ ಪಾಕ್ ತಂಡದ ಸೆಮಿಸ್ ಕತೆ ಮುಗಿಯಿತು.
ಪಾಕಿಸ್ತಾನ ತಂಡ ಇನ್ನು ಇಂಗ್ಲೆಂಡ್ ವಿರುದ್ಧ ಗೆದ್ದರೂ ಏನೂ ಪ್ರಯೋಜನ ಇಲ್ಲ. ಅದು ಗರಿಷ್ಠ 5 ಗೆಲುವುಗಳೊಂದಿಗೆ 10 ಅಂಕಗಳನ್ನು ಸಂಪಾದಿಸಿ ತವರಿಗೆ ಮರಳಬಹುದು.
ಈ ಸುದ್ದಿಯನ್ನೂ ಓದಿ : ICC World Cup 2023 : ಡಚ್ಚರನ್ನು ಸೋಲಿಸಿ ಅಜೇಯ ಸಾಧನೆ ಮಾಡುವುದೇ ರೋಹಿತ್ ಪಡೆ?
ಪಂದ್ಯದ ಮೊದಲು ಸನ್ನಿವೇಶಗಳ ಬಗ್ಗೆ ಮಾತನಾಡಿದ ಬಾಬರ್ ಅಜಮ್ ಅಂಡ್ ಕೋ 1.3 ಓವರ್ಗಳಲ್ಲಿ 20 ರನ್ಗಳ ಗುರಿಯನ್ನು ಬೆನ್ನಟ್ಟಬೇಕಾಗಿತ್ತು. 2.5 ಓವರ್ ಗಳಲ್ಲಿ 50 ರನ್ ಗಳ ಗುರಿ ನೀಡಲಾಗಿತ್ತು 3.4 ಓವರ್ ಗಳಲ್ಲಿ 150 ರನ್ ಗಳ ಗುರಿ ನೀಡಲಾಯಿತು. 4.3 ಓವರ್ ಗಳಲ್ಲಿ 200 ಮತ್ತು 6.1 ಓವರ್ ಗಳಲ್ಲಿ 300 ರನ್ ಗಳ ಗುರಿಯು ಎದುರಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಜಾನಿ ಬೈರ್ಸ್ಟೋವ್ ಬೆನ್ ಸ್ಟೋಕ್ಸ್, ಜೋ ರೂಟ್ ಅವರ ಅರ್ಧಶತಕಗಳೊಂದಿಗೆ ಒಟ್ಟು 337 ರನ್ ಗಳಿಸಿತು. ನಾಯಕ ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ ಮತ್ತು ಡೇವಿಡ್ ವಿಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪಾಕಿಸ್ತಾನ ಪರ ಹ್ಯಾರಿಸ್ ರವೂಫ್ 3 ವಿಕೆಟ್ ಪಡೆದರು. ಆದಾಗ್ಯೂ, ಅವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.
ವಿಶ್ವಕಪ್ನಲ್ಲಿ ಬೌಲರ್ ಬಿಟ್ಟುಕೊಟ್ಟ ಅತಿ ಹೆಚ್ಚು ರನ್ಗಳು
- 528* – 2023ರಲ್ಲಿ ಹ್ಯಾರಿಸ್ ರವೂಫ್ (9 ಅಂಕ)
- 526 – ಆದಿಲ್ ರಶೀದ್ (2019)
- 525 – 2023 ರಲ್ಲಿ ಮಧುಶಂಕ (9 ಮ್ಯಾಟ್ ಗಳು)
- 502 – 2019 ರಲ್ಲಿ ಸ್ಟಾರ್ಕ್ (10 ಮ್ಯಾಟ್)
- 484 – 2019 ರಲ್ಲಿ ಮುಸ್ತಾಫಿಜುರ್ (8 ಅಂಕಗಳು)
- 481 – ಶಾಹೀನ್ ಅಫ್ರಿದಿ (9 ಮ್ಯಾಟ್)
ಸೆಮಿಫೈನಲ್ನಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಿದರೆ, ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.