ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ (IND vs PAK) ಏಷ್ಯಾ ಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿಕೊಂಡು ಆಡಲಿದ್ದಾರೆ. ತಮ್ಮ ದೇಶದಲ್ಲಿ ಉಂಟಾಗಿರುವ ಪ್ರಳಯ ಪರಿಸ್ಥಿತಿಯ ನಿರಾಶ್ರಿತರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಲು ನಿರ್ಧರಿಸಿದ್ದಾರೆ. ಪಾಕಿಸ್ತಾನದಲ್ಲಿ ಪ್ರಳಯ ಪರಿಸ್ಥಿತಿಯಿಂದ ಒಟ್ಟು ೧೧೯ ಮಂದಿ ಮೃತಪಟ್ಟಿದ್ದು, ೯,೫೦,೦೦೦ ಮನೆಗಳು ಕೊಚ್ಚಿಕೊಂಡು ಹೋಗಿವೆ. ಇವರೆಲ್ಲರಿ ಸ್ಥೈರ್ಯ ತುಂಬುವ ಉದ್ದೇಶದಿಂದ ಕಪ್ಪು ಪಟ್ಟಿ ಧರಿಸಿ ಆಡಲು ಬಾಬರ್ ಅಜಂ ಬಳಗ ನಿರ್ಧರಿಸಿದೆ.
ಪಾಕಿಸ್ತಾನದಲ್ಲಿ ಸಮಾರು ೧೧೦ ಜಿಲ್ಲೆಗಳು ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಲೂಚಿಸ್ತಾನ, ಗಿಲ್ಗಿಟ್ ಬಾಲ್ಟಿಸ್ಟಾನ್ ಹಾಗೂ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಹೆಚ್ಚು ನೆರೆ ಪರಿಸ್ಥಿತಿ ಉಂಟಾಗಿದೆ. ಈ ಪ್ರದೇಶದ ಜನರಿಗೆ ಧೈರ್ಯ ತುಂಬುವ ಉದ್ದೇಶದಿಂದ ಪಾಕಿಸ್ತಾನ ತಂಡ ಭಾರತ ವಿರುದ್ಧ ಪಂದ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಆಡಲಿದೆ.
ಇದನ್ನೂ ಓದಿ | Ind vs Pak | ಭಾರತ- ಪಾಕ್ ಹಣಾಹಣಿಯಲ್ಲಿ ಇತ್ತಂಡಗಳ ಆಟಗಾರರು ತಲುಪಲಿರುವ ಮೈಲುಗಲ್ಲುಗಳು