ಕೊಲೊಂಬೊ: ಇಲ್ಲಿನ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಏಷ್ಯಾ ಕಪ್ (Asia Cup 2023) ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ 252 ರನ್ ಬಾರಿಸಿ ಗೆಲುವು ಸಾಧಿಸಿದೆ. ಪಾಕಿಸ್ತಾನವು ಅದೇ ಮೊತ್ತವನ್ನು ಬಾರಿಸಿತ್ತು. ಹಾಗಾದರೆ ಪಂದ್ಯ ಟೈ ಅಲ್ಲವೇ? ಶ್ರೀಲಂಕಾ ಗೆದ್ದಿದ್ದು ಹೇಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ದೊರಕಿದ್ದು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಲಂಕಾ ತಂಡ ಗೆದ್ದಿದೆ. ಈ ಲೆಕ್ಕಾಚಾರ ಸುಲಭವಾಗಿ ಅರ್ಥವಾಗುವುದಿಲ್ಲ . ಆದರೆ, ಮಳೆ ಬರುವ ಮೊದಲಿನ ವಿಕೆಟ್ ಲೆಕ್ಕಾಚಾರದ ಪ್ರಕಾರ ಲಂಕಾ ಗೆದ್ದಿದೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮಳೆ ಬಂದ ಕಾರಣ ಓವರ್ಗಳ ಸಂಖ್ಯೆಯನ್ನು 45ಕ್ಕೆ ಇಳಿಸಲಾಯಿತು. ಆದಾಗ್ಯೂ, ಪಾಕಿಸ್ತಾನದ ಇನ್ನಿಂಗ್ಸ್ ವೇಳೆ ಮಳೆಯಿಂದ ಮತ್ತೊಂದು ವಿರಾಮ ಪಡೆಯಬೇಕಾಯಿತು ಈ ವೇಳೆ ಓವರ್ಗಳ ಸಂಖ್ಯೆಯನ್ನು ಮತ್ತಷ್ಟು 42 ಕ್ಕೆ ಇಳಿಸಲಾಗಿತ್ತು. ನಿಗದಿತ 42 ಓವರ್ಗಳಲ್ಲಿ ಪಾಕ್ ತಂಡ 252 ರನ್ ಗಳಿಸಿದರೂ, ಡಿಎಲ್ಎಸ್ ವಿಧಾನವು ಗೆಲುವಿನ ಗುರಿಯನ್ನು 252ಕ್ಕೆ ಸರಿಹೊಂದಿಸಿತು. ಹೀಗಾಗಿ ಲಂಕಾ ತಂಡ ಗೆಲುವು ಸಾಧಿಸಿದೆ.
45 ನಿಮಿಷಗಳ ಅಡಚಣೆ
ಪಂದ್ಯವು 50 ಓವರ್ಗಳ ಪಂದ್ಯವಾಗಿದ್ದರೆ ಅಥವಾ 45 ಓವರ್ಗಳ ಪಂದ್ಯವಾಗಿದ್ದರೆ ಗುರಿಗಿಂತ ಒಂದು ರನ್ ಹೆಚ್ಚು ಮಾಡಬೇಕಾಗಿತ್ತು. ಒಂದೇ ರೀತಿಯ ಮೊತ್ತ ಬಾರಿಸಿದ್ದರೆ ಟೈನಲ್ಲಿ ಕೊನೆಗೊಳ್ಳುತ್ತಿತ್ತು. ಆಗ ಡಿಎಲ್ಎಸ್ ನಿಯಮ ಜಾರಿಗೆ ಬರುತ್ತಿರಲಿಲ್ಲ. ಯಾಕೆಂದರೆ ಪಂದ್ಯ ಆರಂಭಕ್ಕೆ ಮೊದಲೇ ಓವರ್ಗಳನ್ನು ಕಡಿತ ಮಾಡಲಾಗಿತ್ತು. ಆದರೆ ಎರಡನೇ ಮಳೆ ಬಂದಾಗ ಪರಿಸ್ಥಿತಿ ಬದಲಾಯಿತು. ಪಾಕಿಸ್ತಾನ 27.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತ್ತು. ಮಳೆ ಬಂದು ಸುಮಾರು 45 ನಿಮಿಷಗಳ ನಂತರ ಆಟಕ್ಕೆ ತಡೆ ಉಂಟಾಯಿತು. ಈ ವೇಳೆ ಇನ್ನೂ ಮೂರು ಓವರ್ಗಳನ್ನು ಕಡಿತಗೊಳಿಸಲಾಯಿತು. ಇದು 42 ಓವರ್ಗಳ ಪಂದ್ಯವಾಯಿತು. ಆದರೆ ಅದಕ್ಕಿಂತ ಮುಖ್ಯವಾಗಿ, ಡಿಎಲ್ಎಸ್ ವಿಧಾನವು ಜಾರಿಗೆ ಬಂದಿತು.
ಪಾಕಿಸ್ತಾನದ ಕೈಯಲ್ಲಿ ಇನ್ನೂ ಮೂರು ವಿಕೆಟ್ಗಳು ಇದ್ದವು. ಅವರ ಮೊತ್ತಕ್ಕೆ ಅದೂ ಪೂರಕವಾಗಿತ್ತಲ್ಲವೇ ಎಂಬ ಪ್ರಶ್ನೆ ಇದೆ. ಆದರೆ ಡಕ್ವರ್ತ್ ನಿಯಮದಲ್ಲಿ ಒಂದು ತಂಡವು ತಮ್ಮ ಇನ್ನಿಂಗ್ಸ್ ನ ಕೊನೆಯಲ್ಲಿ ಎಷ್ಟು ವಿಕೆಟ್ ಗಳನ್ನು ಕಳೆದುಕೊಂಡಿದೆ ಎಂಬುದು ಮುಖ್ಯವಲ್ಲ. ಮಳೆ ನಿಲ್ಲುವ ಮೊದಲು ಅವರು ಕಳೆದುಕೊಳ್ಳುವ ವಿಕೆಟ್ ಗಳ ಸಂಖ್ಯೆಯು ಎದುರಾಳಿಯ ಅಂತಿಮ ಗುರಿಯನ್ನು ನಿರ್ಧರಿಸುತ್ತದೆ. ಇದರರ್ಥ, ಡಿಎಲ್ಎಸ್ ವಿಧಾನದ ಪ್ರಕಾರ, ಮಳೆ ವಿರಾಮದ ಮೊದಲು ಐದು ವಿಕಟ್ಗಳನ್ನು ಕಳೆದುಕೊಂಡಿತ್ತು.
ಇದನ್ನೂ ಓದಿ: ind vs pak : ಪಾಕ್ ತಂಡದ ಏಷ್ಯಾ ಕಪ್ ಸೋಲಿನ ಗಾಯಕ್ಕೆ ಉಪ್ಪು ಸವರಿದ ಭಾರತ ತಂಡ
ಮಳೆ ಆರಂಭಕ್ಕೆ ಮೊದಲಿನ ಕೊನೆಯ ಎಸೆತದಲ್ಲಿ ಪಾಕ್ ತಂಡದ ಮೊಹಮ್ಮದ್ ನವಾಜ್ ಔಟಾಗದಿದ್ದರೆ, ಶ್ರೀಲಂಕಾಕ್ಕೆ 252 ರ ಬದಲು 255 ರನ್ಗಳ ಗುರಿ ಎದುರಾಗುತ್ತಿತ್ತು. ಅಂತೆಯೇ, ಪಾಕಿಸ್ತಾನವು ನಾಲ್ಕಕ್ಕಿಂತ ಕಡಿಮೆ ವಿಕೆಟ್ಗಳನ್ನು ಕಳೆದುಕೊಂಡಿದ್ದರೆ, ಅವರ ಅಂತಿಮ ಮೊತ್ತಕ್ಕೆ ಹೆಚ್ಚಿನ ರನ್ಗಳು ಸೇರುತ್ತಿದ್ದವು. ಇನ್ನೂ ಹೆಚ್ಚು ವಿಕೆಟ್ಗಳ ಹೆಚ್ಚು ಕಳೆದುಕೊಂಡಿದ್ದರೆ ಅವರ ಒಟ್ಟು ಮೊತ್ತದಿಂದ ಹೆಚ್ಚಿನ ರನ್ಗಳು ಕಡಿತವಾಗುತ್ತಿದ್ದವು. ಡಿಎಲ್ಎಸ್ ವಿಧಾನವು ಈ ರೀತಿ ಕಾರ್ಯನಿರ್ವಹಿಸುತ್ತದೆ. ಡಿಎಲ್ಎಸ್ ಲೆಕ್ಕಾಚಾರದಲ್ಲಿ ವಿಕೆಟ್ಗಳು ಪ್ರಮುಖ ಅಂಶವಾಗಿರುತ್ತದೆ.