ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam) ಯುವತಿಯೊಬ್ಬಳ ಜತೆ ವಿಡಿಯೊ ಕಾಲ್ ಮಾಡುತ್ತಿರುವುದು ಎನ್ನಲಾದ ಖಾಸಗಿ ವಿಡಿಯೊವೊಂದು ಜನವರಿ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ತನಿಖೆಯಾಗಿಲ್ಲ. ಆದರೆ, ಸ್ವತಃ ಬಾಬರ್ ಅಜಮ್ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ.
ಬಾಬರ್ ಅಜಮ್ ತಮ್ಮ ತಂಡದ ಸಹ ಸದಸ್ಯನ ಗೆಳತಿಯ ಜತೆ ಚಾಟ್ ಮಾಡಿದ್ದು, ಅವರಿಗೆ ನಗ್ನ ಚಿತ್ರಗಳು, ಅಶ್ಲೀಲ ಸಂದೇಶಗಳನ್ನು ಕಳುಹಿಸುವುದಕ್ಕೆ ಒತ್ತಾಯಿಸಿದ್ದರು ಎನ್ನಲಾಗಿದೆ. ಅಲ್ಲದೆ, ತನ್ನ ಗೆಳೆಯನನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾದರ ಸೆಕ್ಸ್ಟಿಂಗ್ ಮಾಡುವಂತೆ ಬಾಬರ್ ಒತ್ತಾಯಿಸಿದ್ದರು ಎಂದೂ ಆರೋಪಿಸಲಾಗಿತ್ತು. ಈ ವಿಡಿಯೊ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿತ್ತು.
ಇದರಿಂದ ಬೇಸರಗೊಂಡಿರುವ ಅವರು ನದಿಯೊಂದರ ತಟದಲ್ಲಿ ತಾವು ಕುಳಿತಿರುವ ಚಿತ್ರವನ್ನು ಪೋಸ್ಟ್ ಮಾಡಿ, ‘ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಂತೋಷವಾಗಿರು’ ಎಂದು ಬರೆದುಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಹಾಕಿರುವ ಪೋಸ್ಟ್ಗೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.
ಪಾಕಿಸ್ತಾನ ತಂಡ ಪ್ರವಾಸಿ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ವಿರುದ್ಧದ ತವರಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿತ್ತು. ಅದಕ್ಕಾಗಿ ಬಾಬರ್ ಟೀಕೆಗಳನ್ನು ಎದುರಿಸಿದ್ದರು. ಇದೀಗ ಅವರು ವಿಡಿಯೊ ವೈರಲ್ ಆದ ಕಾರಣಕ್ಕೂ ಟೀಕೆಗಳನ್ನು ಎದುರಿಸಿದ್ದಾರೆ.
ಇದನ್ನೂ ಓದಿ | Babar Azam | ಸಹ ಆಟಗಾರನ ಪ್ರೇಯಸಿಯ ಜತೆ ಸೆಕ್ಸ್ಟಿಂಗ್?; ಜಾಲತಾಣಗಳಲ್ಲಿ ಹರಿದಾಡಿದ ಖಾಸಗಿ ವಿಡಿಯೊ!