Site icon Vistara News

ಪಾಕಿಸ್ತಾನ ತಂಡದಲ್ಲಿ ಮತಾಂತರಕ್ಕೆ ಒತ್ತಾಯ; ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ

Afridi

ನವದೆಹಲಿ: ಮಾಜಿ ನಾಯಕ ಮತ್ತು ಲೆಜೆಂಡರಿ ಆಲ್ರೌಂಡರ್ ಶಾಹಿದ್ ಅಫ್ರಿದಿ ತಮ್ಮನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂಬುದಾಗಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಆರೋಪಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಆಡುವ ದಿನಗಳಲ್ಲಿ ತಾವು ಎದುರಿಸಿದ ತಾರತಮ್ಯದ ಬಗ್ಗೆಯೂ ಕನೇರಿಯಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅಫ್ರಿದಿ ಮತ್ತು ಶೋಯೆಬ್ ಅಖ್ತರ್ ಸೇರಿದಂತೆ ಹೆಚ್ಚಿನ ಆಟಗಾರರು ತಮ್ಮನ್ನು ಸಾಕಷ್ಟು ತೊಂದರೆಗೊಳಿಸಿದರೆ, ಇಂಜಮಾಮ್-ಉಲ್-ಹಕ್ ಮಾತ್ರ ತಮ್ಮನ್ನು ಬೆಂಬಲಿಸಿದರು ಎಂದು ಕನೇರಿಯಾ ಬಹಿರಂಗಪಡಿಸಿದ್ದಾರೆ. ಅಫ್ರಿದಿ ಮತ್ತು ಅಖ್ತರ್ ತಮ್ಮೊಂದಿಗೆ ಊಟವನ್ನೂ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇಸ್ಲಾಂಗೆ ಮತಾಂತರಗೊಳ್ಳುವಂತೆ ನನ್ನ ಮನವೊಲಿಸಲು ಅಫ್ರಿದಿ ಸಾಕಷ್ಟು ಪ್ರಯತ್ನಿಸಿದ್ದರು. ಹಿಂದೂ ಧರ್ಮಕ್ಕೆ ಸೇರಿದ್ದ ಕಾರಣ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ತಾರತಮ್ಯವನ್ನು ಎದುರಿಸಬೇಕಾಯಿತು ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ತೊಂದರೆ ಎದುರಿಸಿಯೇ ಆಡಿದೆ

ನಾನು ನನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೆ. ಕೌಂಟಿ ಕ್ರಿಕೆಟ್ ಕೂಡ ಆಡುತ್ತಿದ್ದೆ. ಇಂಜಮಾಮ್-ಉಲ್-ಹಕ್ ನನಗೆ ಸಾಕಷ್ಟು ಬೆಂಬಲ ನೀಡಿದ್ದರು. ಹಾಗೆ ಮಾಡಿದ ಏಕೈಕ ನಾಯಕ . ಶೋಯೆಬ್ ಅಖ್ತರ್. ಶಾಹಿದ್ ಅಫ್ರಿದಿ ಮತ್ತು ಇತರ ಅನೇಕ ಪಾಕಿಸ್ತಾನಿ ಆಟಗಾರರು ನನಗೆ ಸಾಕಷ್ಟು ತೊಂದರೆ ನೀಡಿದರು. ನಿರಂತರ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ : PAK vs SA: ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ದಾಖಲೆ ಹೇಗಿದೆ?

ಮಾಜಿ ಸ್ಪಿನ್ನರ್ ಮುಂದುವರಿಸಿ, “ಅವರೆಲ್ಲರೂ ನನ್ನೊಂದಿಗೆ ಊಟ ಮಾಡಲಿಲ್ಲ. ಪ್ರತಿ ಬಾರಿಯೂ ಮತಾಂತರದ ಬಗ್ಗೆ ಮಾತನಾಡುತ್ತಿದ್ದರು. ಆದರೆ ನನ್ನ ಧರ್ಮವೇ ನನಗೆ ಎಲ್ಲವೂ ಆಗಿತ್ತು. ಶಾಹಿದ್ ಅಫ್ರಿದಿ ನನಗೆ ಮತಾಂತರಗೊಳ್ಳಲು ಹೇಳಿದ ಪ್ರಮುಖ ವ್ಯಕ್ತಿ. ಅದನ್ನು ಸಾಕಷ್ಟು ಬಾರಿ ತೊಂದರೆ ಮಾಡಿದರು. ಇಂಜಮಾಮ್-ಉಲ್-ಹಕ್ ಎಂದಿಗೂ ಆ ರೀತಿ ಮಾತನಾಡುತ್ತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.

ಧರ್ಮವನ್ನು ಲೆಕ್ಕಿಸದೆ ಎಲ್ಲಾ ಕ್ರಿಕೆಟಿಗರಿಗೆ ಸಮಾನ ಅವಕಾಶಗಳನ್ನು ನೀಡುತ್ತಿರುವ ಭಾರತವನ್ನು ಕನೇರಿಯಾ ಹೊಗಳಿದ್ದಾರೆ.

ನಾನು ಹಿಂದೂ ಮತ್ತು ನಾನು ಎಲ್ಲಾ ದಾಖಲೆಗಳನ್ನು ಮುರಿಯುತ್ತೇನೆ ಎಂಬ ಕಾರಣಕ್ಕೆ ಪಿಸಿಬಿ ನನ್ನನ್ನು ಬೆಂಬಲಿಸಲಿಲ್ಲ. ಆದರೆ, ನನ್ನ ಉತ್ತಮ ಪ್ರದರ್ಶನದ ಕಾರಣ ನನ್ನನ್ನು ತಂಡದಿಂದ ಕೈಬಿಡಲು ಸಾಧ್ಯವಾಗಲಿಲ್ಲ. ನಾನು ಎಲ್ಲಾ ದಾಖಲೆಗಳನ್ನು ಮುರಿಯಬಲ್ಲೆ ಎಂದು ಅವರಿಗೆ ತಿಳಿದಿತ್ತು. ಪಾಕಿಸ್ತಾನದಲ್ಲಿ ಎಂದಿಗೂ ಒಬ್ಬ ಹಿಂದೂ ಉತ್ತಮ ಗೌರವ ಪಡೆಯಲಿಲ್ಲ. . ಭಾರತ ಎಲ್ಲರಿಗೂ ಅವಕಾಶ ನೀಡುತ್ತಿದೆ. ಆ ಸಮಯದಲ್ಲಿ ನನ್ನ ತಂದೆ ಕೂಡ ನಿಧನರಾದರು, ಆದ್ದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೆ. ಎಂಬುದಾಗಿ ಡ್ಯಾನಿಶ್​ ಕನೇರಿಯಾ ಹೇಳಿದ್ದಾರೆ.

ಪಾಕ್​ ತಂಡದಲ್ಲಿ ಸದಾ ಗಲಾಟೆ

ವಿಶ್ವ ಕ್ರಿಕೆಟ್​ನಲ್ಲಿ ಅತ್ಯಂತ ಗೊಂದಲಕಾರಿ ತಂಡವೆಂದರೆ ಪಾಕಿಸ್ತಾನ. ಅಲ್ಲಿ ಯಾವುದೂ ಮುಕ್ತವಾಗಿಲ್ಲ. ಆ ತಂಡ ಒಂದಲ್ಲೊಂದು ಕಾರಣಕ್ಕೆ ವಿವಾದಕ್ಕೆ ಕಾರಣವಾಗುತ್ತಿರುತ್ತವೆ. ಫಿಕ್ಸಿಂಗ್​ ಹಾಗೂ ಮೋಸದಾಟದ ವಿಚಾರಕ್ಕೆ ಬಂದಾಗಲೂ ಮುಂಚೂಣಿ ಆರೋಪವನ್ನು ಹೊತ್ತುಕೊಳ್ಳುತ್ತದೆ. ತಂಡದೊಳಗೆ ಆಟಗಾರರ ನಡುವಿನ ಗಲಾಟೆಯಂತೆ ನಿಲ್ಲದ ಸಮಸ್ಯೆಯಾಗಿದೆ. ಈ ಹಿಂದೆಯೂ ಹಲವಾರು ಬಾರಿ ಡ್ರೆಸಿಂಗ್ ರೂಮ್​ನಲ್ಲಿ ಗಲಾಟೆ ಮಾಡಿಕೊಂಡ ಪ್ರಸಂಗಗಳು ನಡೆದಿವೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಇಂಥ ಘಟನೆಗಳು ಬಹಿರಂಗವಾಗುತ್ತಿರಲಿಲ್ಲ. ಆದರೆ, ಹಾಲಿ ವಿಶ್ವ ಕಪ್​ನಲ್ಲಿ ಪ್ರದರ್ಶನ ವೈಫಲ್ಯ ಕಾಣುತ್ತಿರುವ ಬಾಬರ್ ಅಜಮ್​ ನೇತೃತ್ವದ ತಂಡ ಮತ್ತೆ ಶೀತಲ ಸಮರಕ್ಕಾಗಿ ಮತ್ತೆ ಸುದ್ದಿಯಲ್ಲಿದೆ. ಬಾಬರ್ ಅಜಮ್​ ಜತೆ ಕೆಲವು ಆಟಗಾರರು ಜಗಳವಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಕಳೆದ ಏಷ್ಯಾ ಕಪ್​ ವೇಳೆ ಶುರುವಾದ ಗುಮಾನಿ ದಿನ ಕಳೆದಂತೆ ಇನ್ನಷ್ಟು ಬಲವಾಗುತ್ತಿದೆ.

Exit mobile version