ಕೊಲಂಬೊ: ಬದ್ಧ ವೈರಿ ಪಾಕಿಸ್ತಾನ(IND vs PAK) ವಿರುದ್ಧ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ತಂಡಕ್ಕೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ರಾಹುಲ್ ಆಗಮನದಿಂದ ಶ್ರೇಯಸ್ ಅಯ್ಯರ್ ಹೊರಗುಳಿಯಬೇಕಾಯಿತು.
ಮೀಸಲು ದಿನದ ನಿಯಮದ ಪ್ರಕಾರ ಪಂದ್ಯ ಎಲ್ಲಿ ಸ್ಥಗಿತಗೊಂಡಿದೆಯೊ ಅಲ್ಲಿಂದಲೇ ಆರಂಭವಾಗಲಿದೆ. ನಾಳೆಯೂ ಮಳೆ ಸುರಿದರೆ ಮತ್ತೆ ಡರ್ಕರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶಕ್ಕೆ ಪ್ರಯತ್ನ ನಡೆಯಲಿದೆ.
ಭಾರತ, ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ ಸೂಪರ್-4 ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿದೆ. ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಭಾರತ ತಂಡ 24.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಬಾರಿಸಿದ್ದು, ಸೋಮವಾರ ಅಲ್ಲಿಂದಲೇ ಪಂದ್ಯ ಮುಂದುವರಿಯಲಿದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುತ್ತಿರುವ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ ಬಳಿ ಮಳೆ ಕಡಿಮೆಯಾಗಿದೆ. ಆದರೆ ಸ್ಟೇಡಿಯಮ್ ಆಟಕ್ಕೆ ಸಿದ್ದಗೊಂಡಿಲ್ಲ. ಅಂಪೈರ್ಗಳು ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 7.30ಕ್ಕೆ ಮತ್ತೊಂದು ಬಾರಿ ಮೈದಾನ ಪರಿಶೀಲನೆ ನಡೆಸಲಿದ್ದಾರೆ.
ಹವಾಮಾನ ವರದಿಯ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಕ್ರೀಸ್ಗೆ ಬಂದ ಕನ್ನಡಿಗ ಕೆ.ಎಲ್ ರಾಹುಲ್