ಕೊಲಂಬೊ: ಬದ್ಧ ವೈರಿ ಪಾಕಿಸ್ತಾನ(IND vs PAK) ವಿರುದ್ಧ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ತಂಡಕ್ಕೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ರಾಹುಲ್ ಆಗಮನದಿಂದ ಶ್ರೇಯಸ್ ಅಯ್ಯರ್ ಹೊರಗುಳಿಯಬೇಕಾಯಿತು.
ಇಲ್ಲಿ ಆಡಿದ ಕೊನೆಯ ಮೂರು ಏಕದಿನ ಇನಿಂಗ್ಸ್ಗಳಲ್ಲಿ ಕೊಹ್ಲಿ 128*, 131, 110* ಶತಕ ಬಾರಿಸಿ ಮಿಂಚಿದ್ದಾರೆ. ಎರಡು ಬಾರಿ ಅಜೇಯರಾಗಿ ಉಳಿದಿದ್ದರು. ಇದು ಪಾಕ್ಗೆ ತಲೆನೋವು ತಂದಿದೆ.
ಕೊಹ್ಲಿ ಇದುವರೆಗೆ ಆರ್. ಪ್ರೇಮದಾಸ ಮೈದಾನದಲ್ಲಿ ಒಟ್ಟು 8 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 103.8 ಸರಾಸರಿಯಲ್ಲಿ ರನ್ಗಳಿಸಿ 519 ರನ್ ಕಲೆಹಾಕಿದ್ದಾರೆ. ಇದರಲ್ಲಿ 3 ಶತಕ ಹಾಗೂ ಒಂದು ಅರ್ಧಶತಕ ಒಳಗೊಂಡಿದೆ.
ಮೊದಲ ಮುಖಾಮುಖಿ ಮಳೆಯಿಂದ ರದ್ದುಗೊಂಡರೂ ಪಾಕಿಸ್ತಾನ ಬೌಲಿಂಗ್ ಪರಾಕ್ರಮ ಹೇಗಿತ್ತು ಎಂದು ಜಗಜ್ಜಾಹೀರವಾಗಿದೆ. ಶಾಹೀನ್ ಅಫ್ರಿದಿಯ ಬೆಂಕಿಯುಗುಳುವ ಎಸೆತಗಳನ್ನು ಸಮರ್ಥವಾಗಿ ಎದುರಿಸದೇ ಹೋದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಮೊಬೈಲ್‌ನಲ್ಲಿ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಟೂರ್ನಿಯ ಎಲ್ಲ ಪಂದ್ಯಗಳನ್ನು ಉಚಿತವಾಗಿ ಆನಂದಿಸಬಹುದು.
ಏಷ್ಯಾ ಕಪ್ನ ಎಲ್ಲ ಪಂದ್ಯಗಳು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ವೀಕ್ಷಿಸಬಹುದು