ಕೊಲಂಬೊ: ಬದ್ಧ ವೈರಿ ಪಾಕಿಸ್ತಾನ(IND vs PAK) ವಿರುದ್ಧ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ತಂಡಕ್ಕೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ರಾಹುಲ್ ಆಗಮನದಿಂದ ಶ್ರೇಯಸ್ ಅಯ್ಯರ್ ಹೊರಗುಳಿಯಬೇಕಾಯಿತು.
ಭಾರತ ಪಾಕ್ ಪಂದ್ಯ ವೀಕ್ಷಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ. ಸಂಪೂರ್ಣ ಬಿಸಿಲಿನಿಂದ ಕೂಡಿದ ಕೊಲಂಬೊ
ಟಾಸ್ಗೆ ಕ್ಷಣಗಣನೆ. ಮಳೆಯ ಯಾವುದೇ ಭೀತಿ ಇಲ್ಲ
ಮೈದಾನಕ್ಕೆ ಹಾಕಿರುವ ಕವರ್ಗಳನ್ನು ತೆಗೆಯದೆ ಹಾಗೆ ಇರಿಸಲಾಗಿದೆ. ಶುಕ್ರವಾರ ರಾತ್ರಿ ಇಲ್ಲಿ ಮಳೆಯಾಗಿರುವುದಾಗಿ ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ
ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದ(R.Premadasa Stadium) ಪಿಚ್ ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಸ್ಪಿನ್ನರ್ಗಳೇ ಹೆಚ್ಚು ದಾಖಲೆಯನ್ನು ಹೊಂದಿದ್ದಾರೆ
ಇಂದು ಮಳೆಯಿಂದಾಗಿ ಪಂದ್ಯ ನಡೆಯದೇ ಹೋದರೆ, ಅಂದರೆ ಮೊದಲ ಇನಿಂಗ್ಸ್ ಮುಗಿದು ದ್ವಿತೀಯ ಇನಿಂಗ್ಸ್ನಲ್ಲಿ ಕನಿಷ್ಠ 20 ಓವರ್ ಆಟವೂ ಸಾಧ್ಯವಾಗದೆ ಇದ್ದರೆ ಆಗ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ.