ಕೊಲಂಬೊ: ಬದ್ಧ ವೈರಿ ಪಾಕಿಸ್ತಾನ(IND vs PAK) ವಿರುದ್ಧ ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ತಂಡಕ್ಕೆ ಆಯ್ಕೆಯಾಗಿದ್ದರೂ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ರಾಹುಲ್ ಆಗಮನದಿಂದ ಶ್ರೇಯಸ್ ಅಯ್ಯರ್ ಹೊರಗುಳಿಯಬೇಕಾಯಿತು.
ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಕೆ.ಎಲ್. ರಾಹುಲ್(KL Rahul) ಅಲಭ್ಯರಾಗಿದ್ದರು.
ಪಾಕಿಸ್ತಾನ ಈ ಪಂದ್ಯಕ್ಕೆ ಈಗಾಗಲೇ ಆಡುವ ಬಳಗವನ್ನು ಪ್ರಕಟಿಸಿದೆ. ಭಾರತ ಪರ ಕನ್ನಡಿಗ ರಾಹುಲ್ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ.
ಸದ್ಯಕ್ಕೆ ಪಂದ್ಯ ನಡೆಯುವ ಕೊಲಬೊಂದಲ್ಲಿ ಯಾವುದೇ ಮಳೆಯ ಭೀತಿ ಕಂಡು ಬಂದಿಲ್ಲ. ಹೀಗಾಗಿ ಪಂದ್ಯ ನೋಡಲು ಕಾದು ಕುಳಿತ ಅಭಿಮಾನಿಗಳು ನಿಟ್ಟುಸಿರು ಬಿಡಬಹುದಾಗಿದೆ.
ಭಾರತ ಮತ್ತು ಪಾಕ್ ನಡುವಣ ಸೂಪರ್ 4 ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಪಂದ್ಯಕ್ಕೆ ಶೇ.90 ರಷ್ಟು ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.