Site icon Vistara News

World Cup 2023 : ಒಪ್ಪಂದಕ್ಕೆ ಸಹಿ ಹಾಕಲು ಐಸಿಸಿಯಿಂದ ಕಾಸು ಕೇಳಿದ ಪಾಕ್​ ತಂಡ! ಇದೆಂಥಾ ದುರಾಸೆ?

Virat kohli

#image_title

ದುಬೈ: ಬಿಸಿಸಿಐ ಮತ್ತು ಪಿಸಿಬಿ ನಡುವಿನ ಒಳಜಗಳದ ಅಧ್ಯಾಯ 3 ಹಂತಕ್ಕೆ ತಲುಪಿದ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಧ್ಯಪ್ರವೇಶದ ನಂತರ ಏಷ್ಯಾ ಕಪ್ 2023 ಅಂತಿಮವಾಗಿ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ. 2023 ರ ವಿಶ್ವಕಪ್ ಆಯೋಜನೆ ಬಗ್ಗೆ ಇನ್ನೂ ಬಿಕ್ಕಟ್ಟು ಉಳಿದಿದ್ದರೂ ಪಾಕಿಸ್ತಾನ ತಂಡ ಬರಲು ಒಪ್ಪಿಗೆ ನೀಡಿದೆ. ಆದರೀಗ ಹೊಸ ಅಧ್ಯಾಯ 2025ರ ಚಾಂಪಿಯನ್ಸ್​ ಟ್ರೋಫಿ ಬಗ್ಗೆ. ಈ ಟೂರ್ನಿಯ ಆತಿಥ್ಯ ಆತಿಥ್ಯ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ನಿರಾಕರಿಸಿದೆ. ಸಹಿ ಹಾಕಬೇಕಿದ್ದರೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಾಗಿ ಆರ್ಥಿಕ ಖಾತರಿ ನೀಡಬೇಕು ಎಂದು ಕೋರುತ್ತಿದೆ.

ಭಾರತವು ತಂಡವನ್ನು ಪಂದ್ಯಾವಳಿಗೆ ಕಳುಹಿಸಲು ನಿರಾಕರಿಸಿದರೆ ಐಸಿಸಿ ಆರ್ಥಿಕ ಖಾತರಿಯನ್ನು ಪಿಸಿಬಿಗೆ ನೀಡಬೇಕು ಎಂಬುದು ಈ ವಿವಾದದ ಮೂಲ. ಹೀಗಾಗಿ ಮತ್ತೊಂದು ಬಾರಿ ಪಿಸಿಬಿ, ಬಿಸಿಸಿಐ ನಡುವಿನ ವಿವಾದ ಐಸಿಸಿಗೆ ಆತಂಕ ತಂದೊಡ್ಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ಮೌನ ವಹಿಸಿದೆ. ಸರ್ಕಾರದ ಅನುಮತಿಯಿಲ್ಲದೆ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಅದು ನಿರಾಕರಿಸಿದೆ. ರೋಹಿತ್ ಶರ್ಮಾ ಮತ್ತು ಬಳಗಕ್ಕೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಭಾರತ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿಲ್ಲದ ಕಾರಣ, ಐಸಿಸಿ ಈಗ ಗೊಂದಲದಲ್ಲಿದೆ.

ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲಾರ್ಡೈಸ್ ಕಳೆದ ತಿಂಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ ಆತಿಥ್ಯ ಒಪ್ಪಂದಕ್ಕೆ ಸಹಿ ಹಾಕಿಸಲು ಮುಂದಾಗಿದ್ದರು. ಆದರೆ ಪಿಸಿಬಿ ಆರ್ಥಿಕ ಖಾತರಿಯಿಲ್ಲದೆ ಸಹಿ ಮಾಡಲು ನಿರಾಕರಿಸಿದೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಖಾತರಿಯನ್ನು ನೀಡಬೇಕು ಅಥವಾ ದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಅನುಪಸ್ಥಿತಿಯಲ್ಲಿ ಪಿಸಿಬಿಗೆ ಆಗುವ ನಷ್ಟವನ್ನು ಐಸಿಸಿ ಸರಿದೂಗಿಸಬೇಕು ಎಂದು ಅಲ್ಲಿನ ಕ್ರಿಕೆಟ್​ ಮಂಡಳಿ ಕೋರಿದೆ.

ಎಕ್ಸ್​ಪ್ರೆಸ್​​ ಟ್ರಿಬ್ಯೂನ್ ವರದಿಯ ಪ್ರಕಾರ, ಪಿಸಿಬಿ ದಾಖಲೆಗೆ ಸಹಿ ಹಾಕುವ ಬಗ್ಗೆ ವಕೀಲರ ಸಲಹೆಯನ್ನು ಕೋರಿದೆ. ಇದಲ್ಲದೆ, ಪಿಸಿಬಿ ಐಸಿಸಿಗೆ ಪತ್ರ ಬರೆದಿದ್ದು, ಕೆಲವು ಆಕ್ಷೇಪಣೆಗಳನ್ನು ಎತ್ತಿದೆ. ಹೋಸ್ಟಿಂಗ್ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕೋರಿದೆ.

ಪಿಸಿಬಿಯ ಆಕ್ಷೇಪಣೆಗಳು ಯಾವುವು?

ಈ ಬಗ್ಗೆ ಐಸಿಸಿ ಇನ್ನೂ ಲಿಖಿತ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಐಸಿಸಿ ಮತ್ತು ಪಿಸಿಬಿ ಅಧಿಕಾರಿಗಳು ಆರ್ಥಿಕ ಕುಸಿತವನ್ನು ತಗ್ಗಿಸಲು ಚರ್ಚಿಸುತ್ತಿದ್ದಾರೆ. ಐಸಿಸಿ ಅಥವಾ ಬಿಸಿಸಿಐ ಅವರಿಗೆ ಲಿಖಿತ ಭರವಸೆಗಳನ್ನು ನೀಡದ ಹೊರತು ಅಥವಾ ಅವರಿಗೆ ಆರ್ಥಿಕವಾಗಿ ಪರಿಹಾರ ನೀಡದ ಹೊರತು, ಒಪ್ಪಂದವನ್ನು ಒಪ್ಪಿಕೊಳ್ಳುವುದು ಕಷ್ಟ.

ಭಾರತವು ಪ್ರಯಾಣಿಸಲು ನಿರಾಕರಿಸಿದ ನಂತರ ಪಿಸಿಬಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನಿಂದ (ಎಸಿಸಿ) ಆರ್ಥಿಕ ಪರಿಹಾರ ಪಡೆಯುತ್ತದೆ. ಏಷ್ಯಾದ ಇತರ ರಾಷ್ಟ್ರಗಳ ವಿರುದ್ಧ ಪಾಕಿಸ್ತಾನ ಕೇವಲ ನಾಲ್ಕು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದ್ದು, ಫೈನಲ್ ಪಂದ್ಯವೂ ಅಲ್ಲಿಯೇ ನಡೆಯಲಿದೆ.

Exit mobile version