Site icon Vistara News

Asia Cup | ಪಾಕ್‌ ವಿರುದ್ಧ ರೋಚಕ ಪಂದ್ಯ ಸೋತ ಆಫ್ಘನ್‌, ಟೂರ್ನಿಯಿಂದಲೇ ಭಾರತ ಔಟ್!

Match

ದುಬೈ: ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸಿಯೂ ಅಫಘಾನಿಸ್ತಾನ ಸೋಲನುಭವಿಸಿದ್ದು, ಇದರೊಂದಿಗೆ ಭಾರತ ತಂಡವು ಅಧಿಕೃತವಾಗಿ ಏಷ್ಯಾಕಪ್‌ (Asia Cup)ನಿಂದಲೇ ಹೊರಬಿದ್ದಿದೆ.

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಅಫಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್‌ನಲ್ಲಿ ವಿಫಲವಾದರೂ ಬೌಲಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಆಫ್ಘನ್‌, ಗೆಲುವಿನ ಹಂತ ತಲುಪಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಪಂದ್ಯ ಕೈಚೆಲ್ಲಿತು.

ಟರ್ನಿಂಗ್‌ ಪಾಯಿಂಟ್

19ನೇ ಓವರ್‌ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 119 ರನ್‌ ಗಳಿಸಿದ್ದ ಪಾಕಿಸ್ತಾನದ ಗೆಲುವಿಗೆ 11 ರನ್‌ ಬೇಕಿತ್ತು. ಹಾಗಾಗಿ, ಅಫಘಾನಿಸ್ತಾನ ತಂಡವು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ, ನಸೀಮ್‌ ಶಾ ಸತತ ಎರಡು ಸಿಕ್ಸರ್‌ ಬಾರಿಸುವ ಮೂಲಕ ಪಾಕ್‌ಗೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಭಾರತ ತಂಡವು ಟೂರ್ನಿಯಿಂದಲೇ ಅಧಿಕೃತವಾಗಿ ಹೊರಬಿದ್ದಿದ್ದು, ಗುರುವಾರ ಆಫ್ಘನ್‌ ವಿರುದ್ಧ ನಡೆಯುವ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಸಂಕ್ಷಿಪ್ತ ಸ್ಕೋರ್‌

ಆಫ್ಘನ್‌ 20 ಓವರ್‌ಗಳಲ್ಲಿ 129/6

ಪಾಕಿಸ್ತಾನ 19.2 ಓವರ್‌ಗಳಲ್ಲಿ 131\9

Exit mobile version