Site icon Vistara News

ಭಾರತ ಪಂದ್ಯಕ್ಕೂ ಮುನ್ನ ಬಾಂಗ್ಲಾ ಆಟಗಾರರಿಗೆ ಬಿಗ್​ ಆಫರ್​ ನೀಡಿದ ಪಾಕ್​ ನಟಿ

Pakistani actress gave big offer to Bangladeshi players

ಪುಣೆ: ಭಾರತ ಮತ್ತು ಬಾಂಗ್ಲಾದೇಶ ತಂಡಗಳು(India vs Bangladesh) ಗುರುವಾರ ವಿಶ್ವಕಪ್​(ICC Cricket World Cup 2023) ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ನಟಿ ಬಾಂಗ್ಲಾದೇಶ ತಂಡದ ಆಟಗಾರರಿಗೆ ಬಿಗ್​ ಆಫರ್​ ನೀಡಿದ್ದಾಳೆ. ಭಾರತವನ್ನು ಸೋಲಿಸಿದರೆ ಆಟಗಾರರ ಜತೆ ಡೇಟ್ ಮಾಡುವುದಾಗಿ ತಿಳಿಸಿದ್ದಾಳೆ.

ಶೆಹರ್ ಶಿನ್ವಾರಿ(Sehar Shinwari) ಎಂಬ ಪಾಕಿಸ್ತಾನದ ನಟಿಯೊಬ್ಬರು, ಸಾಮಾಜಿಕ ಜಾಲತಾಣವಾದ ಟ್ವಿಟರ್​ ಎಕ್ಸ್​ನಲ್ಲಿ ಬಹಿರಂಗವಾಗಿಯೇ ಬಾಂಗ್ಲಾ ತಂಡದ ಆಟಗಾರರಿಗೆ ಈ ಆಫರ್​ ನೀಡಿದ್ದಾರೆ. “ಇನ್‌ಶಾ ಅಲ್ಲಾ ನಮ್ಮ ಬಂಗಾಳಿ ಬಂಧುಗಳು ಮುಂದಿನ ಪಂದ್ಯದಲ್ಲಿ ಭಾರತೀಯ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದಾರೆ. ಒಂದು ವೇಳೆ ಭಾರತವನ್ನು ಅವರು ಸೋಲಿಸಿದರೆ, ನಾನು ಢಾಕಾಗೆ ಹೋಗಿ ಬಾಂಗ್ಲಾ ಆಟಗಾರರೊಂದಿಗೆ ಮೀನಿನ ಊಟ ಸವಿದು ಡೇಟ್ ನಡೆಸುತ್ತೇನೆ ಎಂದು ಆಫರ್ ನೀಡಿದ್ದಾರೆ.

ಪಾಕ್​ ವಿರುದ್ಧದ ಸೋಲಿಗೆ ಸೇಡು

ಕಳೆದ ಶನಿವಾರ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಹೀನಾಯ ಪ್ರದರ್ಶನ ತೋರಿ ಸೋಲು ಕಂಡಿತ್ತು. ಈ ಸೋಲಿಗೆ ಸೇಡು ತೀರಿಸುವ ನಿಟ್ಟಿನಲ್ಲಿ ಪಾಕ್​ ನಟಿ ಬಾಂಗ್ಲಾದೇಶ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ನೆಟ್ಟಿಗರು ಈ ನಟಿಯನ್ನು ಟ್ರೋಲ್​ ಮಾಡಿದ್ದಾರೆ. ಭಾರತ ತಂಡ ಬಾಂಗ್ಲಾ ವಿರುದ್ಧ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿಯೇ ನೀವು ಬಾಂಗ್ಲಾ ಆಟಗಾರರಿಗೆ ಈ ಆಫರ್ ನೀಡಿದ್ದೀರ ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ IND vs BAN: ಬಾಂಗ್ಲಾ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ 2 ಬದಲಾವಣೆ!

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಡೇಡಿಯಂನಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತ್ತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು. ಭಾರತ ತಂಡ ಈ ಗೆಲುವಿನಿಂದಿಗೆ 1992ರಿಂದ ಮೊದಲ್ಗೊಂಡು 2023ರ ವರೆಗಿನ ಎಲ್ಲ 8 ಪಂದ್ಯಗಳಲ್ಲೂ ಗೆಲುವು ದಾಖಲಿಸಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

ಭಾರತ-ಬಾಂಗ್ಲಾ ಪಂದ್ಯಕ್ಕೆ ಮಳೆ ಭೀತಿ ಇಲ್ಲ

ಪಂದ್ಯ ನಡೆಯುವ ಪುಣೆಯಲ್ಲಿ ಯಾವುದೇ ಮಳೇಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ಧಗೆ ಹೆಚ್ಚಿರಲಿದೆ ಎಂದು ತಿಳಿಸಿದೆ. ಪಂದ್ಯ ನಡೆಯುವ ಮಧ್ಯಾಹ್ನ ಇಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್​ ಇದರಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಸಂಜೆಯ ವೇಳೆ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.

Exit mobile version