Site icon Vistara News

T20 World Cup | ಭಾರತವನ್ನು ಸೋಲಿಸಿದರೆ ಜಿಂಬಾಬ್ವೆಯ ಹುಡುಗನನ್ನು ವರಿಸುವೆ ಎಂದ ಪಾಕ್‌ ನಟಿ!

ಲಾಹೋರ್‌ : ಟಿ೨೦ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಭಾರತ ತಂಡ ಐದು ವಿಕೆಟ್‌ಗಳಿಂದ ಮಣಿಸಿರುವುದು ಆ ದೇಶದ ಕ್ರಿಕೆಟ್‌ ಅಭಿಮಾನಿಗಳಿಗೆ ಸಹಿಸಲಾಗದ ಸಂಗತಿಯಾಗಿದೆ. ಸೋಲಿನ ಕಹಿ ಮರೆಯಲಾಗದೇ ನಾನಾ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಂಪೈರ್‌ ಮೋಸ ಮಾಡಿದ್ದಾರೆ ಎಂದೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನದ ನಟಿಯೊಬ್ಬಳು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಜಿಂಬಾಬ್ವೆ ತಂಡ ಸೋಲಿಸಿದರೆ ಅಲ್ಲಿನ ಹುಡುಗನೊಬ್ಬನನ್ನು ವಿವಾಹವಾಗುವುದಾಗಿ ಹೊಸ ಆಫರ್‌ ಕೊಟ್ಟಿದ್ದಾರೆ.

ಪಾಕಿಸ್ತಾನದ ನಟಿ ಸೆಹರ್‌ ಶಿನ್ವಾರಿ ತನ್ನ ಆಫರ್‌ ಬಗ್ಗೆ ಟ್ವೀಟ್‌ ಮಾಡಿದ್ದು, ಭಾರತ ತಂಡವನ್ನು ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಸೋಲಿಸಿದರೆ ನಾನು ಜಿಂಬಾಬ್ವೆ ಹುಡುಗನನ್ನು ಮದುವೆಯಾಗುವೆ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅಭಿಮಾನಿಯೊಬ್ಬರು, ಇದೆಲ್ಲವೂ ನಡೆಯುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನವೆಂಬರ್‌ ೬ರಂದು ಪಂದ್ಯ ನಡೆಯಲಿದೆ. ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿರುವ ಜತೆಗೆ, ಇತ್ತೀಚಿನ ದಿನಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತ ತಂಡ ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹೀಗಾಗಿ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ಸೂಚನೆಯಿದೆ.

ಇದನ್ನೂ ಓದಿ | T20 World Cup | ಫೀಲ್ಡಿಂಗ್​ ಮಾಡುವಾಗ ಕಳಚಿತು ಜಿಂಬಾಬ್ವೆ ಆಟಗಾರನ ಪ್ಯಾಂಟ್​!

Exit mobile version