ಕರಾಚಿ: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಬಾಕ್ಸರ್(Pakistan boxer) ಒಬ್ಬರು ತಂಡದ ಸಹ ಆಟಗಾರ್ತಿಯ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಜುಗರ ತಂದಿದೆ. ಒಲಿಂಪಿಕ್ ಅರ್ಹತಾ(Olympic qualifier) ಪಂದ್ಯಾವಳಿಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದ ಪಾಕಿಸ್ತಾನದ ಜೊಹೈಬ್ ರಶೀದ್(Zohaib Rasheed) ಹಣ ಕದ್ದು ಪರಾರಿಯಾದ ಬಾಕ್ಸರ್.
ಈ ಕುರಿತು ಪಾಕಿಸ್ತಾನ ಅಮೆಚೂರ್ ಬಾಕ್ಸಿಂಗ್ ಫೆಡರೇಶನ್ ಮಾಹಿತಿ ನೀಡಿದ್ದು, “ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಐದು ಸದಸ್ಯರ ತಂಡದೊಂದಿಗೆ ಇಟಲಿಗೆ ತೆರಳಿದ್ದ ಜೊಹೈಬ್ ರಶೀದ್ ತೋರಿದ ಈ ವರ್ತನೆ ನಿಜಕ್ಕೂ ಖಂಡನೀಯ. ಜತೆಗೆ ದೇಶಕ್ಕೂ ಅತ್ಯಂತ ಮುಜುಗರವನ್ನುಂಟು ಮಾಡಿದೆ” ಎಂದು ತಿಳಿಸಿದೆ.
ಇದನ್ನೂ ಓದಿ Sedition Case : ಪಾಕಿಸ್ತಾನ್ ಮುರ್ದಾಬಾದ್ ಬದಲು ಜಿಂದಾಬಾದ್ ಎಂದ ಬಿಜೆಪಿ ಕಾರ್ಯಕರ್ತ ಜೈಲಿಗೆ!
ಮಹಿಳಾ ಬಾಕ್ಸರ್ ಬ್ಯಾಗ್‌ನಿಂದ ಕಳವು
ಜೊಹೈಬ್ ರಶೀದ್ ಅವರು ಹಣವನ್ನು ಎಗರಿಸಿದ್ದು ಮಹಿಳಾ ಬಾಕ್ಸರ್ ಲಾರಾ ಇಕ್ರಮ್ ಅವರ ಬ್ಯಾಗ್‌ನಿಂದ. ಲಾರಾ ತರಬೇತಿಗೆ ತೆರಳಿದ್ದ ವೇಳೆ ರಶೀದ್ ಕಳ್ಳತನ ಮಾಡಿದ್ದಾರೆ. ಅವರ ಕೋಣೆಯ ಕೀಯನ್ನು ಪಡೆದು, ಅವರ ಪರ್ಸ್‌ನಿಂದ ವಿದೇಶಿ ಕರೆನ್ಸಿಯನ್ನು ಕದ್ದಿದ್ದಾರೆ. ಬಳಿಕ ಹೋಟೆಲ್‌ನಿಂದ ಪರಾರಿಯಾಗಿದ್ದಾರೆ ಎಂದು ರಾಷ್ಟ್ರೀಯ ಒಕ್ಕೂಟದ ಕಾರ್ಯದರ್ಶಿ ಕರ್ನಲ್ ನಾಸಿರ್ ಅಹ್ಮದ್ ಹೇಳಿದ್ದಾರೆ. ಘಟನೆ ಬಗ್ಗೆ ಇಟಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಗಮನಕ್ಕೆ ಮತ್ತು ಇಲ್ಲಿನ ಪೊಲೀಸರಿಗೆ ಫೆಡರೇಶನ್ ದೂರು ನೀಡಿದೆ. ಜೊಹೈಬ್ ಅವರು ಕಳೆದ ವರ್ಷ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಕಳ್ಳನ ಪಟ್ಟವನ್ನು ಪಡೆದಿದ್ದಾರೆ.
2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾದ ಪಾಕ್ ಕ್ರಿಕೆಟ್ ತಜ್ಞ
ಪಾಕಿಸ್ತಾನ ಕ್ರಿಕೆಟ್ (Pakistan Cricket) ತಜ್ಞರೊಬ್ಬರು ಲೈವ್ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಏಕಾಏಕಿ ಸಿಟ್ಟಿಗೆದ್ದ ಅವರು ತಮ್ಮ ಹೆಂಡತಿಗೆ ಹೊಡೆಯಲು ಪ್ರಯತ್ನಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿತ್ತು.
Short Kalesh b/w Pakistani Cricket expert Mohsin Ali and His wife on You Tube live
— Ghar Ke Kalesh (@gharkekalesh) February 16, 2024
pic.twitter.com/YGFuZeTmKO
ಪಾಕಿಸ್ತಾನ ಕ್ರಿಕೆಟ್ ತಜ್ಞ ಮೊಹ್ಸಿನ್ ಅಲಿ ಅವರು ಸಂದರ್ಶನದಲ್ಲಿ ತೊಡಗಿದ್ದ ವೇಳೆ ಅವರ ಪತ್ನಿ ತಿಳಿಯದೆ ಕ್ಯಾಮೆರಾ ಮುಂದೆ ಬರುತ್ತಿದ್ದರು. ಇದನ್ನು ಸಮಧಾನನದಿಂದ ಅವರ ಗಮನಕ್ಕೆ ತರುವ ಬದಲು ಏಕಾಏಕಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವಿಡಿಯೊ ಲೈವ್ನಲ್ಲೇ ಪ್ರಸಾರವಾಗಿದೆ. ಮೊಹ್ಸಿನ್ ಅಲಿ ಅವರ ಈ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದರು.