ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ವಹಾಬ್ ರಿಯಾಜ್(Wahab Riaz) ಅವರು ಪಂಜಾಬ್ ಸರ್ಕಾರದ ಕ್ರೀಡಾ ಸಚಿವರಾಗಿ ಆಯ್ಕೆಯಾಗಿದ್ದಾರೆ. ಆದರೆ ಇದು ಭಾರತದ ಪಂಜಾಬ್ ಅಲ್ಲ ಬದಲಾಗಿ ಪಾಕಿಸ್ತಾನ ಪ್ರಾಂತ್ಯದ ಪಂಜಾಬ್.
ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ಫ್ರಾಂಚೈಸಿ ಲೀಗ್ ಆಡುತ್ತಿರುವ ವಹಾಬ್ ರಿಯಾಜ್ ವಹಾಬ್ ಪಾಕಿಸ್ತಾನಕ್ಕೆ ಬಂದ ತಕ್ಷಣ ಕ್ರೀಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪಾಕ್ ತಂಡದ ವೇಗಿಗಳಲ್ಲಿ ಒಬ್ಬರಾಗಿದ್ದ ಎಡಗೈ ಬೌಲರ್ ವಹಾಬ್ ರಿಯಾಜ್ ಒಟ್ಟು 156 ಪಂದ್ಯಗಳನ್ನು ಆಡಿ 237 ವಿಕೆಟ್ಗಳನ್ನು ಕಬಳಿಸಿದ್ದಾರೆ. 2019ರಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದರು. 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ ತಂಡದ ಭಾಗವಾಗಿರುವ ಅವರು 2020 ರ ಬಳಿಕ ಪಾಕ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇದನ್ನೂ ಓದಿ Ramiz Raja | ಬಿಜೆಪಿ ಮನಸ್ಥಿತಿ ಹೊಂದಿರುವ ಬಿಸಿಸಿಐ; ರಮೀಜ್ ರಾಜಾ ಹೇಳಿಕೆಗೆ ಆಕ್ರೋಶ!
ಪಾಕ್ ಪರ ಅವಕಾಶ ಸಿಗದ ಕಾರಣ ಟಿ20 ಲೀಗ್ ಕಡೆ ಮುಖ ಮಾಡಿದ ರಿಯಾಜ್ ಈ ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 400 ಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಸದ್ಯ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಖುಲ್ನಾ ಟೈಗರ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಮಧ್ಯೆ ಅಚ್ಚರಿ ಎಂಬಂತೆ ಪಂಜಾಬ್ ಪ್ರಾಂತ್ಯದ ಕ್ರೀಡಾ ಸಚಿವರಾಗಿ ಆಯ್ಕೆಯಾಗಿದ್ದಾರೆ.