Site icon Vistara News

IND vs PAK | ಭಾರತದ ಧ್ವಜ ಬೀಸಿದ ಪಾಕ್‌ ಕ್ರಿಕೆಟಿಗ ಶಾಹಿದ್‌ ಅಫ್ರಿದಿಯ ಪುತ್ರಿ!

ind vs pak

ದುಬೈ : ಪಾಕಿಸ್ತಾನದ ಮಾಜಿ ಕ್ರಿಕೆಟಿ ಶಾಹಿದ್ ಅಫ್ರಿದಿಯ ಚಿಕ್ಕ ಮಗಳು, ಸೆಪ್ಟೆಂಬರ್‌ ೪ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್‌-೪ ಹಣಾಹಣಿಯ ವೇಳೆ ಭಾರತದ ಧ್ವಜವನ್ನು ಬೀಸಿದ್ದಾಳೆ ಎಂಬ ಸುದ್ದಿ ಪಾಕಿಸ್ತಾನದ ಟಿವಿಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಆದರೆ, ಇದು ಅನಿವಾರ್ಯತೆಯಿಂದ ಮಾಡಿದ್ದು ಎಂದು ಅಫ್ರಿದಿ ಸ್ಪಷ್ಟನೆ ನೀಡಿದ್ದಾರೆ.

ಸೂಪರ್‌-೪ ಹಂತದ ಹಣಾಹಣಿಯನ್ನು ವೀಕ್ಷಿಸಲು ಬಂದಿದ್ದ ಅಫ್ರಿದಿಯ ಪುತ್ರಿ ಭಾರತದ ಧ್ವಜವನ್ನು ಹಿಡಿದು ಬೀಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಹೀಗಾಗಿ ಟಿವಿ ಮಾಧ್ಯಮವೊಂದು ಅವರನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಿತ್ತು. ಅದಕ್ಕವರು “ಹೌದು, ಪುತ್ರಿ ಭಾರತದ ಧ್ವಜ ಹಿಡಿದಿದ್ದು ಸತ್ಯ. ಸ್ಟೇಡಿಯಮ್‌ನಲ್ಲಿ ಪಾಕಿಸ್ತಾನದ ಧ್ವಜ ಲಭಿಸದ ಕಾರಣ ಅವರು ಭಾರತದ ಧ್ವಜ ಹಿಡಿದಿದ್ದಳು,” ಎಂದು ಹೇಳಿದ್ದಾರೆ.

“ನನ್ನ ಮಗಳು ಭಾರತದ ಧ್ವಜ ಹಿಡಿದು ಬೀಸಿರುವ ವಿಷಯವನ್ನು ಪತ್ನಿ ನನಗೆ ಹೇಳಿದ್ದಾಳೆ. ಮ್ಯಾಚ್‌ ನಡೆದ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಕೇವಲ ಶೇಕಡ ೧೦ರಷ್ಟು ಮಂದಿ ಮಾತ್ರ ಪಾಕಿಸ್ತಾನಿಯರು ಇದ್ದರು. ಉಳಿದ ಶೇಕಡ ೯೦ರಷ್ಟು ಅಭಿಮಾನಿಗಳು ಭಾರತೀಯರಾಗಿದ್ದರು. ಅಂತೆಯೇ ಅಲ್ಲಿ ಪಾಕಿಸ್ತಾನದ ಧ್ವಜವೂ ಲಭಿಸಿರಲಿಲ್ಲ. ಹೀಗಾಗಿ ಪಕ್ಕದಲ್ಲಿ ಕುಳಿತಿದ್ದ ಭಾರತೀಯ ಅಭಿಮಾನಿಗಳು ಬೀಸುತ್ತಿದ್ದ ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಬೀಸಿದ್ದಾಳೆ,” ಎಂದು ಅಫ್ರಿದಿ ಹೇಳಿದ್ದಾರೆ.

ಇದನ್ನೂ ಓದಿ | Asia Cup | ಟೀಮ್‌ ಇಂಡಿಯಾದ್ದು ಸಿಗಲಿಲ್ಲವೆಂದು ಪಾಕಿಸ್ತಾನದ ಜರ್ಸಿ ಧರಿಸಿದ ಯುಪಿಯ ಯುವಕನಿಗೆ ಶುರುವಾಗಿದೆ ಸಂಕಷ್ಟ!

Exit mobile version