Site icon Vistara News

ಪಾಕ್‌ ಫುಟ್ಬಾಲ್‌ ಆಟಗಾರ್ತಿಯರು ಶಾರ್ಟ್ಸ್‌ ಧರಿಸಿದ್ದನ್ನು ಆಕ್ಷೇಪಿಸಿದ ಪತ್ರಕರ್ತನಿಗೆ ಕೊಟ್ಟರು ಖಡಕ್‌ ಉತ್ತರ

ಕಠ್ಮಂಡು : ಪಾಕಿಸ್ತಾನ ಫುಟ್ಬಾಲ್‌ ತಂಡದ ಆಟಗಾರ್ತಿಯರು ಎಂಟು ವರ್ಷಗಳ ಬಳಿಕ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ (SAFF Championship) ಭಾಗವಹಿಸಿ, ಮಾಲ್ಡೀವ್ಸ್‌ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ. ದೀರ್ಘ ಅವಧಿಯ ಬಳಿಕ ವಿಜಯದ ಸಾಧನೆ ಮಾಡಿದ್ದ ಆಟಗಾರ್ತಿಯರ ಬಗ್ಗೆ ಎಲ್ಲರೂ ಮೆಚ್ಚುಗೆ ಮಾತನಾಡುತ್ತಿರುವ ನಡುವೆ, ಅಲ್ಲಿನ ಧರ್ಮಾಂಧ ಪತ್ರಕರ್ತನೊಬ್ಬ, ಹೆಣ್ಣು ಮಕ್ಕಳು ಆಡುವಾಗ ಶಾರ್ಟ್ಸ್‌ (ಚಡ್ಡಿ) ಧರಿಸಿಕೊಂಡಿದ್ದು ಸರಿಯಲ್ಲ ಎಂಬುದಾಗಿ ಆಕ್ಷೇಪಿಸಿದ್ದ. ಆತನ ಮಂಕುಬುದ್ಧಿಯನ್ನು ಕೋಚ್‌ ಹಾಗೂ ಫುಟ್ಬಾಲ್ ಅಭಿಮಾನಿಗಳಾದಿಯಾಗಿ ಕಟು ಪದಗಳಿಂದ ಟೀಕಿಸಿದ್ದಾರೆ.

ಮಾಲ್ಡೀವ್ಸ್‌ ವಿರುದ್ಧ ಪಂದ್ಯದದಲ್ಲಿ ಪಾಕಿಸ್ತಾನ ಏಳು ಗೋಲ್‌ಗಳಿಂದ ಗೆಲುವು ಸಾಧಿಸಿತ್ತು. ಪಂದ್ಯದಲ್ಲಿ ಪಾಕ್‌ ತಂಡದ ಕೆಲವು ಆಟಗಾರ್ತಿಯರು ಸಹಜವಾಗಿ ಶಾರ್ಟ್‌ ಧರಿಸಿದ್ದರು. ಗೆಲುವಿನ ಬಳಿಕ ಕೋಚ್‌ ಅದೀಲ್‌ ರಿಜ್ಕಿ ಅವರು ತಂಡದ ಸಾಧನೆಯ ಬಗ್ಗೆ ವಿವರಣೆ ನೀಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿದ ಪತ್ರಕರ್ತನೊಬ್ಬ, ಪಾಕಿಸ್ತಾನ ಇಸ್ಲಾಮಿಕ್‌ ರಿಪಬ್ಲಿಕ್‌ ದೇಶವಾಗಿದ್ದು, ಇಲ್ಲಿನ ತಂಡದ ಆಟಗಾರ್ತಿಯರು ಶಾರ್ಟ್ಸ್‌ ಧರಿಸಿ ಆಡಿರುವುದು ಹೇಗೆ ಸರಿ. ಎಲ್ಲರೂ ಲೆಗ್ಗಿಂಗ್ಸ್‌ ಹಾಕಿಕೊಂಡು ಆಡಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ತಂಡದಲ್ಲಿದ್ದ ನಾದಿಯಾ ಖಾನ್‌ ಅವರನ್ನು ಗುರಿಯಾಗಿಸಿ ಹೇಳಿದ್ದರು. ನಾದಿಯಾ ತಂಡದ ಪ್ರಮುಖ ಆಟಗಾರ್ತಿಯಾಗಿದ್ದು, ಪಾಕ್‌ ತಂಡ ಬಾರಿಸಿದ್ದ ಏಳು ಗೋಲ್‌ಗಳಲ್ಲಿ ಅವರೊಬ್ಬರದ್ದೇ ನಾಲ್ಕು.

ಪ್ರಗತಿಶೀಲರಾಗಿ

ಪತ್ರಕರ್ತನ ಪಶ್ನೆಗೆ ಕೋಚ್‌ ಅದಿಲ್‌ ರಿಜ್ಕಿ ಸ್ವಲ್ಪವೂ ಹಿಂಜರಿಕೆ ತೋರದೆ ಕೊಟ್ಟಿರುವ ಉತ್ತರ ಹೀಗಿದೆ. “ಎಲ್ಲರೂ ಪ್ರಗತಿಶೀಲರಾಗುತ್ತಿದ್ದಾರೆ. ನೀವು ಆಗಬೇಕು. ಯೂನಿಫಾರ್ಮ್ ಹಾಕಬೇಕು ಎಂಬುದನ್ನು ಹೊರತುಪಡಿಸಿ ಯಾರೊಬ್ಬರ ಆಯ್ಕೆಯನ್ನು ನಾವು ಪ್ರಶ್ನಿಸುವುದು ಸರಿಯಲ್ಲ. ಇವೆಲ್ಲವೂ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದ ವಿಚಾರವಲ್ಲ,” ಎಂದು ಹೇಳಿದ್ದಾರೆ.

ಪತ್ರಕರ್ತನ ಅಧಿಕ ಪ್ರಸಂಗದ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾಕಷ್ಟು ಟೀಕೆಗಳು ಪ್ರಕಟಗೊಂಡಿವೆ. ಎಲ್ಲರೂ ಬದಲಾಗುತ್ತಿರುವಾಗ ಪತ್ರಕರ್ತ ಇಂಥ ಸಣ್ಣತನದ ಪ್ರಶ್ನೆ ಕೇಳಬಾರದಿತ್ತು ಹೇಳಿದ್ದಾರೆ. ಇನ್ನೂ ಹಲವರು, ಶಾರ್ಟ್ಸ್‌ ಧರಿಸಿದ ಆಡಿದ ಹೆಣ್ಣು ಮಕ್ಕಳು ಆಡಿದ ಪಂದ್ಯದ ಪತ್ರಿಕಾಗೋಷ್ಠಿಗೆ ನೀನ್ಯಾಕೆ ಹಾಜರಾದೆ,” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | SCO Summit | ಪಾಕಿಸ್ತಾನ ಪ್ರಧಾನಿಗೆ ಹೆಡ್‌ಫೋನ್ ಪೇಚು, ವಿಡಿಯೋ ವೈರಲ್

Exit mobile version