ಕಾರು ಅಪಘಾತದಿಂದ ಚೇತರಿಕೆ ಕಂಡು ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿರುವ ರಿಷಭ್ ಪಂತ್(Rishabh Pant) ಮಾರ್ಚ್ 22ರಿಂದ ಆರಂಭಗೊಳ್ಳಲಿರುವ 17ನೇ ಆವೃತ್ತಿ(IPL 2024) ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದು ಬಹುತೇಖ ಖಚಿತವಾಗಿದೆ. ಇದೀಗ ಪಂತ್ ಟಿ20 ವಿಶ್ವಕಪ್(icc t20 world cup 2024) ಆಡುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಮಹತ್ವದ ಮಾಹಿತಿ ನೀಡಿದ್ದಾರೆ.
“ಕ್ರಿಕೆಟ್‌ಗೆ ಮರಳಲು ಸಿದ್ಧರಾಗಿರುವ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾದರೆ ಭಾರತಕ್ಕಾಗಿ ಟಿ 20 ವಿಶ್ವಕಪ್ ಆಡಬಹುದು” ಎಂದು ಜಯ್ ಶಾ ಹೇಳಿದ್ದಾರೆ. 2022ರ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.
“ಪಂತ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ನಾವು ಅವರನ್ನು ಶೀಘ್ರದಲ್ಲೇ ಫಿಟ್ ಎಂದು ಘೋಷಿಸುತ್ತೇವೆ. ಆದರೆ ಅಪಘಾತದ ಬಳಿಕ ಅವರಿಗೆ ಕೀಪಿಂಗ್ ನಡೆಸುವ ಪೂರ್ಣ ಸಾಮರ್ಥ್ಯವಿದೆಯೇ ಎನ್ನುವುದು ತಿಳಿದಿಲ್ಲ” ಎಂದು ಶಾ ಪಿಟಿಐಗೆ ತಿಳಿಸಿದರು. “ಪಂತ್ ಟಿ20 ವಿಶ್ವಕಪ್ ಆಡಿದರೆ, ಅದು ನಮಗೆ ದೊಡ್ಡ ವಿಷಯ, ಐಪಿಎಲ್ನಲ್ಲಿ ಕೀಪಿಂಗ್ ನಡೆಸಿದರೆ ಅವರು ವಿಶ್ವಕಪ್ ಆಡಬಹುದು. ಐಪಿಎಲ್ನಲ್ಲಿ ಅವರು ಹೇಗೆ ಪ್ರದರ್ಶನ ತೋರುತ್ತಾರೆ ಎನ್ನುಬುದನ್ನು ಕಾದು ನೋಡೋಣ ಎಂದರು.
ಕೀಪಿಂಗ್ ಅಭ್ಯಾಸ ನಡೆಸುತ್ತಿರುವ ಪಂತ್
ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿರುವ ಪಂತ್ ಅವರಿಗೆ ಬಿಸಿಸಿಐ ಈಗಾಗಲೇ ಐಪಿಎಲ್ ಆಡಲು ಅನುಮತಿ ನೀಡಿದೆ ಎಂದು ವರದಿಯಾಗಿದೆ. ಪಂತ್ ಕಳೆದ ವಾರ ಕೀಕಿಂಗ್ ಕೂಡ ನಡೆಸಿದ್ದರು. ಆದರೆ, ಅವರಿಗೆ ಪೂರ್ಣ ಪ್ರಮಾಣದಲ್ಲಿ ಕೀಪಿಂಗ್ ನಡೆಸಲು ಸಾಧ್ಯವೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಐಪಿಎಲ್ನಲ್ಲಿ ಪಂತ್ ಕೀಪಿಂಗ್ ನಡೆಸುವ ಬಗ್ಗೆಯೂ ತಂಡದ ಕೋಚ್ ರಿಕಿ ಪಾಂಟಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪಂತ್ ಆಡಲು ಫಿಟ್ ಆಗಿದ್ದರೆ ಅವರು ನೇರವಾಗಿ ನಾಯಕನ ಜವಾಬ್ದಾರಿ ಪಡೆಯುತ್ತಾರೆ. ಇಲ್ಲವಾದಲ್ಲಿ ಅವರು ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಪಂತ್ ಪೂರ್ಣ ಫಿಟ್ ಆಗದಿದ್ದರೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯಬಹುದು.
ಐಪಿಎಲ್ಗಾಗಿ ಸಿದ್ಧತೆ ನಡೆಸುತ್ತಿರುವ ಪಂತ್ ಅವರು ಅಭ್ಯಾಸ ಪಂದ್ಯದಲ್ಲಿ ತಮ್ಮ ಸಿಗ್ನೇಚರ್ ಶೈಲಿಯಾದ ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸಿ ಗಮನಸೆಳೆದಿದ್ದರು. ಈ ವಿಡಿಯೊ ಕೂಡ ವೈರಲ್ ಆಗಿತ್ತು. ಒಟ್ಟಾರೆಯಾಗಿ ಪಂತ್ ಅವರು ವಿಕೆಟ್ ಕೀಪಿಂಗ್ ನಡೆಸಿದರೆ ಮಾತ್ರ ಟಿ20ಯಲ್ಲಿ ಕಾಣಿಸಿಕೊಳ್ಳುವುದು ಎನ್ನುವ ವಿಚಾರ ಸ್ಪಷ್ಟವಾಗಿದೆ.
ಇದನ್ನೂ ಓದಿ T20 World Cup 2024: ಈ ಮೊಬೈಲ್ ಆ್ಯಪ್ನಲ್ಲಿ ಉಚಿತವಾಗಿ ಪ್ರಸಾರಗೊಳ್ಳಲಿದೆ ಟಿ20 ವಿಶ್ವಕಪ್
ಟಿ20 ವಿಶ್ವಕಪ್ ಯಾವಾಗ ಆರಂಭ?
ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 1 ರಿಂದ ಆರಂಭವಾಗಲಿದೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ಪಂದ್ಯಾವಳಿ ಜೂನ್ 1 ರಿಂದ ಆರಂಭಗೊಂಡು ಜೂನ್ 29ರ ತನಕ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.