ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್(Paris 2024 Olympic)ಗೆ ಫ್ರಾನ್ಸ್ ಗಣರಾಜ್ಯದ ಸಂಕೇತವಾದ ‘ಫ್ರಿಜಿಯನ್ ಕ್ಯಾಪ್’ ಅಧಿಕೃತ ಮಸ್ಕಾಟ್ ಆಗಿ ಅಂತಿಮಗೊಳಿಸಲಾಗಿದೆ. ಈ ಫ್ರಿಜಿಯನ್ ಕ್ಯಾಪ್ ಫ್ರೆಂಚ್ ಕ್ರಾಂತಿಯ ಸ್ಫೂರ್ತಿಯನ್ನು ಎತ್ತಿ ಹಿಡಿಯುವ ಸಂಕೇತವಾಗಿದೆ.
ಸೋಮವಾರ ಈ ಮಸ್ಕಾಟ್ ಬಿಡುಗಡೆಗೊಳಿಸಿ ಮಾತನಾಡಿದ ಪ್ಯಾರಿಸ್ ಒಲಿಂಪಿಕ್ಸ್‌ನ ಬ್ರ್ಯಾಂಡ್ ನಿರ್ದೇಶಕ ಜೂಲಿ ಮ್ಯಾಟಿಖಿನ್, ಕ್ರೀಡೆ ಎಲ್ಲವನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ಸಮಾಜದಲ್ಲಿ ಪ್ರಮುಖ ಸ್ಥಾನ ಹೊಂದಲು ಅರ್ಹವಾಗಿದೆ ಎಂಬುವುದನ್ನು ಬಿಂಬಿಸುವ ಗುರಿಯನ್ನು ಈ ಫ್ರಿಜಿಯನ್ ಕ್ಯಾಪ್ ಹೊಂದಿದೆ ಎಂದು ಹೇಳಿದರು.
2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಆರಂಭವಾಗಿ ಆಗಸ್ಟ್ 11ರ ವರೆಗೆ ನಡೆಯಲಿದೆ.
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಅಗ್ರ 5 ಆಟಗಾರರು