Site icon Vistara News

Paris Olympic 2024: ಒಲಿಂಪಿಕ್ಸ್ ಕ್ರೀಡಾ ಗ್ರಾಮಕ್ಕೆ​ ದಾಖಲೆಯ 3 ಲಕ್ಷ ಕಾಂಡೋಮ್ ಪೂರೈಕೆ!

Paris Olympic 2024

Paris Olympic 2024: Sex is back in City of Love, 3 lakh condoms to be distributed in Game Village

ಪ್ಯಾರಿಸ್​: ಪ್ರತಿಷ್ಠಿತ ಒಲಿಂಪಿಕ್ಸ್​(Olympic) ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಕ್ರೀಡಾಕೂಡದ ಯಶಸ್ಸಿಗಾಗಿ ಪ್ಯಾರಿಸ್(Paris Olympic 2024)​ ಸರ್ವ ಸನ್ನದ್ಧವಾಗಿದೆ. ಜುಲೈ 26ರಿಂದ ಟೂರ್ನಿ ಆರಂಭವಾಗಲಿದೆ. ಇದೀಗ ಒಲಿಂಪಿಕ್ಸ್​ ಕ್ರೀಡಾ ಗ್ರಾಮದಲ್ಲಿ(Olympic Game Village) ಕ್ರೀಡಾಪಟುಗಳಿಗೆ ಸಂಘಟಕರು 3 ಲಕ್ಷ ಕಾಂಡೋಮ್​ಗಳನ್ನು ಪೂರೈಕೆ ಮಾಡಿದ್ದಾರೆ. ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಕಾಂಡೋಮ್​ ಪೂರೈಕೆಯಾಗಿರಲಿದೆ.

2021ರ ಟೋಕಿಯೊ ಒಲಿಂಪಿಕ್ಸ್​ ವೇಳೆ ಕರೊನಾ ಹಾವಳಿ ಇದ್ದ ಕಾರಣದಿಂದಾಗಿ ​ಸಂಟಕರು 1.5 ಲಕ್ಷ ಕಾಂಡೋಮ್​ಗಳನ್ನು ಕ್ರೀಡಾಪಟುಗಳಿಗೆ ಪೂರೈಕೆ ಮಾಡಿದ್ದರು. ಈ ಆದರೆ ಬಾರಿ ದಾಖಲೆಯ ಸಂಖ್ಯೆಯಲ್ಲಿ ಕಾಂಡೋಮ್​ಗಳನ್ನು ಪೂರೈಕೆ ಮಾಡಲಾಗಿದೆ. ಇದಕ್ಕೂ ಒಂದು ಕಾರಣವಿದೆ. ಪ್ಯಾರಿಸ್ ಎಂದರೆ ಪ್ರಣಯ ನಗರ ಎಂದೇ ಪ್ರಸಿದ್ಧಿ ಹೀಗಾಗಿ ಇಷ್ಟು ದೊಡ್ಡ ಸಂಖ್ಯೆಯ ಕಾಂಡೋಮ್​ಗಳನ್ನು ಸಂಘಟಕರು ಪೂರೈಕೆ ಮಾಡಿದ್ದಾರೆ. ಜತೆಗೆ ನಿಮ್ಮ ದೇಶದಲ್ಲಿ ಎಚ್​ಐವಿ ಜಾಗೃತಿ ಮೂಡಿಸಲು ಇದನ್ನು ಬಳಸಿ ಎಂಬ ಕಿವಿಮಾತು ಹೇಳಿದ್ದಾರೆ. ಈ ಕಾಂಡೋಮ್ ಕವರ್​ನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ 2024 ಎಂದು ಬರೆದಿದೆ.

ಇದನ್ನೂ ಓದಿ Paris Olympics 2024: ಮಹಿಳೆಯರ 100 ಮೀಟರ್ ಹರ್ಡಲ್ಸ್​ನಲ್ಲಿ ಒಲಿಂಪಿಕ್ಸ್​ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಜ್ಯೋತಿ ಯರ‍್ರಾಜಿ

1988ರಲ್ಲಿ ಆರಂಭ


ಒಲಿಂಪಿಕ್ಸ್​ ಕ್ರೀಡಾಕೂಟದ ವೇಳೆ ಕಾಂಡೋಮ್​ಗಳನ್ನು ಪೂರೈಸುವುದು ಆರಂಭಗೊಂಡಿದ್ದು 1988ರಲ್ಲಿ. ಏಡ್ಸ್​ ಜಾಗೃತಿಗಾಗಿ ಸಿಯೋಲ್​ ಒಲಿಂಪಿಕ್ಸ್​ ವೇಳೆ ಮೊದಲ ಬಾರಿ ಕಾಂಡೋಮ್​ಗಳನ್ನು ಹಂಚಲಾಗಿತ್ತು. 2000ದಲ್ಲಿ ಸಿಡ್ನಿ ಗೇಮ್ಸ್​ ವೇಳೆ 70 ಸಾವಿರ ಕಾಂಡಂ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದು ಖಾಲಿಯಾಗಿ ಮತ್ತೆ 20 ಸಾವಿರ ಹೆಚ್ಚುವರಿ ಕಾಂಡಂ ಪೂರೈಸಲಾಗಿತ್ತು. 2016ರ ರಿಯೋ ಒಲಿಂಪಿಕ್ಸ್​ ವೇಳೆ ಮಹಿಳೆಯರಿಗೂ ಗರ್ಭ ನಿರೋಧಕಗಳನ್ನೂ ಪೂರೈಸಲಾಗಿತ್ತು. ಈ ಬಾರಿ ದಾಖಲೆಯ ಸಂಖ್ಯೆಯ ಕಾಂಡೋಮ್​ ಪೂರೈಕೆಯಾಗಿದೆ. ಮುಂದಿನ ಬಾರಿ ಈ ಸಂಧ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಒಲಿಂಪಿಕ್ಸ್‌ ಆರಂಭೋತ್ಸವವನ್ನು ಮೊದಲ ಬಾರಿಗೆ ಅಳವಡಿಸಿದ್ದು 1908ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ. ಚೊಚ್ಚಲ ಒಲಿಂಪಿಕ್ಸ್‌ ಸಂಘಟಿಸಿದ ಹೆಗ್ಗಳಿಕೆ ಗ್ರೀಕ್‌ಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಉದ್ಘಾಟನ ಸಮಾರಂಭದಲ್ಲಿ ಕ್ರೀಡಾಪಟುಗಳ ಪಥಸಂಚಲನ ನಡೆಯುವಾಗ ಪ್ರತಿಸಲವೂ ಗ್ರೀಕ್‌ ತಂಡವೇ ಮುಂಚೂಣಿಯಲ್ಲಿರುತ್ತದೆ. ಬಳಿಕ ಆತಿಥೇಯ ದೇಶದ ಭಾಷೆಯ ಅಲ್ಪಾಬೆಟಿಕ್‌ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ.

ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 28 ರಿಂದ ಸೆಪ್ಟೆಂಬರ್‌ 8ರವರೆಗೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

Exit mobile version