Site icon Vistara News

Paris Olympics 2024: ಕೊನೆಗೂ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದ ಬಾಕ್ಸರ್​ ಅಮಿತ್‌ ಪಂಘಲ್‌

Paris Olympics 2024

Paris Olympics 2024: Boxer Amit Panghal Clinches Paris Olympics Spot

ಬ್ಯಾಂಕಾಕ್‌: ಇಲ್ಲಿ ನಡೆಯುತ್ತಿರುವ 2ನೇ ವಿಶ್ವ ಅರ್ಹತಾ ಪಂದ್ಯಾವಳಿಯಲ್ಲಿ(2nd World Qualification Tournament) ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಭಾರತದ ಬಾಕ್ಸರ್ ಅಮಿತ್‌ ಪಂಘಲ್‌(Boxer Amit Panghal) ಅವರು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ ಗೇಮ್ಸ್​ಗೆ(Paris Olympics 2024) ಅರ್ಹತೆ ಪಡೆದರು.

ಭಾನುವಾರ ನಡೆದ ಪುರುಷರ 51 ಕೆ.ಜಿ. ಸ್ಪರ್ಧೆಯಲ್ಲಿ ತಮ್ಮೆಲ್ಲಾ ಅನುಭವ ಬಳಸಿ ಬಾಕ್ಸಿಂಗ್​ ರಿಂಗ್​ಗಿಳಿದ ಅಮಿತ್‌ ಪಂಘಲ್‌ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಸರ್ವಾನುಮತದ ತೀರ್ಪಿನಲ್ಲಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡರು. ಈ ಮೂಲಕ ಭಾರತದಿಂದ 5 ಬಾಕ್ಸರ್​ಗಳು ಒಲಿಂಪಿಕ್ಸ್​ ಕೋಟಾ ಸಂಪಾದಿಸಿದಂತಾಗಿದೆ. ಇದಕ್ಕೂ ಮುನ್ನ ನಿಶಾಂತ್ ದೇವ್ (71 ಕೆಜಿ), ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಈಗಾಗಲೇ ಪ್ಯಾರಿಸ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

ಜೈಸ್ಮಿನ್ ಲಂಬೋರಿಯಾ (57 ಕೆಜಿ) ಮತ್ತು ಸಚಿನ್ ಸಿವಾಚ್ (57 ಕೆಜಿ) ಕೂಡ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು ಇವರು ಕೂಡ ಗೆಲುವು ಸಾಧಿಸಿ ಒಲಿಂಪಿಕ್ಸ್​ ಕೋಟಾಗಳನ್ನು ಪಡೆಯಲು ಎದುರು ನೋಡುತ್ತಿದ್ದಾರೆ. ಕಳೆದ ವಾರ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಬಾಕ್ಸಿಂಗ್ ಒಲಿಂಪಿಕ್ಸ್‌ ಅರ್ಹತಾ ಪಂದ್ಯದಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ನಿಶಾಂತ್ ದೇವ್ ಅವರು ಒಲಿಂಪಿಕ್ಸ್​ ಅರ್ಹತೆ ಪಡೆದುಕೊಂಡಿದ್ದರು. ಈ ವರೆಗೆ ಭಾರತದಿಂದ ಕೇವಲ ಪುರುಷ ಬಾಕ್ಸರ್​ ಮಾತ್ರ ಪ್ಯಾರಿಸ್​ ಟಿಕೆಟ್​ ಪಡೆದಿದ್ದಾರೆ.

ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಭಾರೀ ನಗದು ಪ್ರಶಸ್ತಿ ಘೋಷಣೆ


ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್​ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್‌, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ. ಆದರೆ, 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.

Exit mobile version