ಪ್ಯಾರಿಸ್ : ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ (Paris Olympics 2024) 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಬ್ರಿಟಿಷ್ ಈಜುಗಾರ ಆಡಮ್ ಪೀಟಿ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಸೋಮವಾರ ಅವರ ತಂಡ ಈ ಮಾಹಿತಿಯನ್ಉ ನೀಡಿದೆ. ಪೀಟಿ ಅವರು ಸ್ಪರ್ಧೆಯಲ್ಲಿ ಅವರು ಇಟಲಿಯ ನಿಕೊಲೊ ಮಾರ್ಟಿನೆಂಗಿ ಅವರಿಗಿಂತ 0.02 ಸೆಕೆಂಡುಗಳ ಹಿಂದೆ ಬಿದ್ದ ಕಾರಣ ಬೆಳ್ಳಿ ಗೆದ್ದಿದ್ದರು. ಅವರು ಅಮೆರಿಕದ ನಿಕ್ ಫಿಂಕ್ ಅವರೊಂದಿಗೆ ಬೆಳ್ಳಿ ಹಂಚಿಕೊಂಡಿದ್ದಾರೆ.
ಸ್ಪರ್ಧೆಯ ದಿನದಂದು ತಮಗೆ ಅನಾರೋಗ್ಯವಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಆದರೆ ಬಂಗಾರ ಗೆಲ್ಲದೇ ಇರಲು ಅದನ್ನೇ ನೆಪವಾಗಿ ಬಳಸಲು ನಿರಾಕರಿಸಿದರು. ಪೀಟಿ ರೇಸ್ ನಂತರ ಗಂಟಲು ನೋವಿನಿಂದ ಮಾತನಾಡಲು ಹೆಣಗಾಡಿದ್ದರು. “ಫೈನಲ್ ಪಂದ್ಯದ ನಂತರದ ಕೆಲವೇ ಗಂಟೆಗಳಲ್ಲಿ, ಅವರ ರೋಗಲಕ್ಷಣಗಳು ಉಲ್ಬಣಗೊಂಡಿತು. ಸೋಮವಾರ ಮುಂಜಾನೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಆ ಸಮಯದಲ್ಲಿ ಅವರು ಪಾಸಿಟಿವ್ ಎಂದು ಗೊತ್ತಾಯಿತು” ಎಂದು ಟೀಮ್ ಜಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ .
ಈಜಿನಲ್ಲಿ ಗೆದ್ದಿರುವ ಅವರು ರಿಲೇ ಸ್ಪರ್ಧೆಗಳಿಗೆ ಮತ್ತೆ ಮರಳುವ ಭರವಸೆ ಅವರು ಹೊಂದಿದ್ದಾರೆ. “ಅನಾರೋಗ್ಯದ ಯಾವುದೇ ಪ್ರಕರಣದಂತೆ, ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿದೆ. ಆರೋಗ್ಯವಾಗಿರಲು ಎಲ್ಲಾ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಂದು ಹೇಳಿದ್ದಾರೆ.
ರಿಲೇ ಈ ವಾರದ ಕೊನೆಯಲ್ಲಿ ನಡೆಯಲಿವೆ. ಪೀಟಿ ಅವರು ಭಾನುವಾರ ನಡೆಯಲಿದೆ. ಸಂಪೂರ್ಣ ಸುಧಾರಿಸಿಕೊಳ್ಳುವುದಕ್ಕೆ ಅವರು ಸಜ್ಜಾಗಿದ್ದಾರೆ. “ಇದು ಒಂದು ನೆಪವಲ್ಲ, ಏಕೆಂದರೆ ಅದು ಎಂದಿಗೂ ನೆಪವಾಗಬೇಕೆಂದು ನಾನು ಬಯಸುವುದಿಲ್ಲ ನಾನು ಮುಂದಿನ ಸ್ಪರ್ಧೆಗೆ ರೆಡಿಯಾಗಬೇಕಾಗಿದೆ, “ಎಂದು ಪೀಟಿ ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜುಲೈ 30ರಂದು ಭಾರತದ ವೇಳಾಪಟ್ಟಿ ಈ ರೀತಿ ಇದೆ
ಬೆಂಗಳೂರು: ಪ್ರೇಮಿಗಳ ನಗರಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನ 4ನೇ ದಿನವಾದ ಜುಲೈ 30ರಂದು (Paris Olympics 2024) ಭಾರತದ ಶೂಟರ್ ಮನು ಭಾಕರ್ ಇತಿಹಾಸ ನಿರ್ಮಿಸುವ ಗುರಿ ಹೊಂದಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ (ಕಂಚು) ಗೆದ್ದ ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಯಾವುದೇ ಭಾರತೀಯ ಕ್ರೀಡಾಪಟು ಎರಡು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಗೆದ್ದರೆ ದೊಡ್ಡ ಸಾಧನೆಯಾಗಲಿದೆ.
ಇದನ್ನೂ ಓದಿ: Rohan Bopanna : ಅಂತಾರಾಷ್ಟ್ರೀಯ ಟೆನಿಸ್ಗೆ ವಿದಾಯ ಘೋಷಿಸಿದ ಕನ್ನಡಿಗ ರೋಹನ್ ಬೋಪಣ್ಣ
1900ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.
ಭಾಕರ್ ಮತ್ತು ಸರಬ್ಜೋತ್ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಬಿಲ್ಲುಗಾರ ಧೀರಜ್ ಬೊಮ್ಮದೇವರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಜನ್ ಕೌರ್ ಮತ್ತು ಅಂಕಿತಾ ಭಕತ್ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.