ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಪಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲು ಪದಕ ಭರವಸೆ ಮೂಡಿಸಿದ್ದು ಆರ್ಚರಿ ತಂಡ. ಗುರುವಾರ ನಡೆದಿದ್ದ ಪುರುಷರ ಮತ್ತು ಮಹಿಳಾ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇಂದು ನಡೆಯುವ(Paris Olympics 2024 Day 2) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur) ಅವರನ್ನೊಳಗೊಂಡ ತಂಡ ಕಣಕ್ಕಿಳಿಯಲಿದೆ. ಫ್ರಾನ್ಸ್ ಅಥವಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.
1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಭಾರತಕ್ಕೆ ಇನ್ನೂ ಪದಕಕ್ಕೆ ಗುರಿ ಇರಿಸಲಾಗಲಿಲ್ಲ. 2000ದ ಸಿಡ್ನಿ ಕೂಟಕ್ಕೆ ಅರ್ಹತೆಯೇ ಲಭಿಸಿರಲಿಲ್ಲ. ಪ್ರತೀ ಸಲವೂ ಪದಕದ ನಿರೀಕ್ಷೆ ಮಾಡಿದರೂ ಕೂಡ ಯಶಸ್ಸು ಮಾತ್ರ ಮರೀಚಿಕೆಯೇ ಆಗುಳಿದಿದೆ. ಇದುವರೆಗೂ ಕ್ವಾರ್ಟರ್ ಫೈನಲ್‌ನಾಚೆ ದಾಟಿಲ್ಲ. ಈ ಬಾರಿ ಐತಿಹಾಸಿಕ ಪದಕವೊಂದರ ಭರವಸೆ ಇರಿಸಲಾಗಿದೆ. ಗೆದ್ದರೆ 36 ವರ್ಷಗಳ ಪದಕ ಬರ ನೀಗಲಿದೆ. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಇಂದೇ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5.45ಕ್ಕೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದರೆ ಸೆಮಿಫೈನಲ್ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ. ಕಂಚಿನ ಸ್ಪರ್ಧೆಯ ಪಂದ್ಯ ರಾತ್ರಿ 8.18ಕ್ಕೆ, ಫೈನಲ್ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ.
ಇಂದು ನಡೆಯುವ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್ ಪಂದ್ಯದಲ್ಲಿ ಮನು ಭಾಕರ್ ಸ್ಪರ್ಧಿಸಲಿದ್ದಾರೆ. ಇವರ ಮೇಲೂ ಪದಕ ನಿರೀಕ್ಷೆ ಮಾಡಲಾಗಿದೆ. 22ರ ಹರೆಯದ ಭಾಕರ್ ನಿನ್ನೆ(ಶನಿವಾರ) ನಡೆದಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿ ಫೈನಲ್ಗೆ ಅರ್ಹತೆ ಪಡೆದಿದ್ದರು.
ಇಂದು ಭಾರತದ ಸ್ಪರ್ಧೆಗಳ ವಿವರ
ಬ್ಯಾಡ್ಮಿಂಟನ್ (ಆರಂಭ: ಮಧ್ಯಾಹ್ನ 12.45)
ಪುರುಷರ ಸಿಂಗಲ್ಸ್ ಗ್ರೂಪ್ ಹಂತ: ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್.
ಮಹಿಳಾ ಸಿಂಗಲ್ಸ್ ಗ್ರೂಪ್ ಹಂತ: ಪಿ.ವಿ. ಸಿಂಧು.
ಪುರುಷರ ಡಬಲ್ಸ್ ಗ್ರೂಪ್ ಹಂತ: ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್.
ಮಹಿಳಾ ಡಬಲ್ಸ್ ಗ್ರೂಪ್ ಹಂತ: ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ.
ಶೂಟಿಂಗ್ (ಮಧ್ಯಾಹ್ನ12.45)
ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಅರ್ಹತಾ ಸುತ್ತು: ಇಳವೆನಿಲ್ ವಲರಿವನ್, ರಮಿತಾ ಜಿಂದಲ್.
ಪುರುಷರ 10 ಮೀ. ಏರ್ ಪಿಸ್ತೂಲ್ ಫೈನಲ್
ಪುರುಷರ 10 ಮೀ. ಏರ್ ರೈಫಲ್ ಅರ್ಹತಾ ಸುತ್ತು: ಸಂದೀಪ್ ಸಿಂಗ್, ಅರ್ಜುನ್ ಬಬುಟ.(ಮಧ್ಯಾಹ್ನ 2.45)
ವನಿತೆಯರ 10 ಮೀ. ಏರ್ ಪಿಸ್ತೂಲ್ ಫೈನಲ್: ಮನು ಭಾಕರ್ (ಮಧ್ಯಾಹ್ನ, 3.30)
ಆರ್ಚರಿ
ಮಹಿಳೆಯರ ತಂಡ ಸ್ಪರ್ಧೆ, 16ರ ಸುತ್ತು: ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್. (ಮಧ್ಯಾಹ್ನ 1.00)
ಮಹಿಳಾ ತಂಡದ ಕಂಚಿನ ಸ್ಪರ್ಧೆ.(ರಾತ್ರಿ 8.18)
ಮಹಿಳಾ ತಂಡದ ಚಿನ್ನದ ಸ್ಪರ್ಧೆ.(ರಾತ್ರಿ 8.41)
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ಸ್ ರೆಪಿಶಾಜ್ ಸುತ್ತು: ಬಲ್ರಾಜ್ ಪನ್ವರ್.(ಮಧ್ಯಾಹ್ನ 1.06)
ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್: ಶರತ್ ಕಮಲ್, ಹರ್ಮೀತ್ ದೇಸಾಯಿ.
ಮಹಿಳಾ ಸಿಂಗಲ್ಸ್: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.(ಮಧ್ಯಾಹ್ನ 1.30)
ಬಾಕ್ಸಿಂಗ್
ಪುರುಷರ 51 ಕೆಜಿ, 32ರ ಸುತ್ತು: ಅಮಿತ್ ಪಂಘಲ್.(ಮಧ್ಯಾಹ್ನ 2.30)
ಪುರುಷರ 71 ಕೆಜಿ, 32ರ ಸುತ್ತು: ನಿಶಾಂತ್ ದೇವ್.(ಮಧ್ಯಾಹ್ನ 3.02)
ಮಹಿಳೆಯರ 50 ಕೆಜಿ, 32ರ ಸುತ್ತು: ನಿಖತ್ ಜರೀನ್ (ಸಂಜೆ 4.06)
ಈಜು
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಹೀಟ್ಸ್: ಶ್ರಿಹರಿ ನಟರಾಜ್.
ವನಿತೆಯರ 200 ಮೀ. ಫ್ರೀಸ್ಟೈಲ್ ಹೀಟ್ಸ್: ಧಿನಿಧಿ ದೇಸಿಂಗೂ. (ಮಧ್ಯಾಹ್ನ 2.30)
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಸೆಮಿಫೈನಲ್. (ತಡರಾತ್ರಿ 1.02)
ಮಹಿಳೆಯರ 200 ಮೀ. ಫ್ರೀಸ್ಟೈಲ್ ಸೆಮಿಫೈನಲ್.(ತಡರಾತ್ರಿ 1.20.)
ಟೆನಿಸ್
ಪುರುಷರ ಸಿಂಗಲ್ಸ್ ಮೊದಲ ಸುತ್ತು: ಸುಮಿತ್ ನಾಗಲ್.
ಪುರುಷರ ಡಬಲ್ಸ್: ರೋಹನ್ ಬೋಪಣ್ಣ-ಶ್ರೀರಾಮ್ ಬಾಲಾಜಿ(ಮಧ್ಯಾಹ್ನ 3.30)