Site icon Vistara News

Paris Olympics 2024: ಒಲಿಂಪಿಕ್ಸ್​ಗಾಗಿ ಸರ್ಕಾರಿ ಕಟ್ಟಡದಿಂದ ನೂರಾರು ವಲಸಿಗರ ತೆರವು

Paris Olympics 2024

ಏನ್ಸಿಯಂಟ್‌ ಒಲಿಂಪಿಯಾ (ಗ್ರೀಸ್‌): ಪ್ಯಾರಿಸ್‌ ಒಲಿಂಪಿಕ್‌(Paris Olympics 2024) ಕ್ರೀಡಾಕೂಡ ಆರಂಭಕ್ಕೆ ಇನ್ನು ಮೂರು ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಕ್ರೀಡಾಜ್ಯೋತಿ(Olympic flame) ಸಂಪ್ರದಾಯದಂತೆ ದಕ್ಷಿಣ ಗ್ರೀಸ್‌ನ ಪುರಾತನ ಒಲಿಂಪಿಯಾದಲ್ಲಿ ಬೆಳಗಿದೆ. ಪೂರ್ವಾಭ್ಯಾಸದ ವೇಳೆ ಗ್ರೀಕ್‌ ನಟಿ ಮೇರಿ ಮಿನಾ ಅವರು ಪ್ಯಾರಾಬೋಲಿಕ್‌ ಪಾಲಿಶ್‌ ಮಾಡಿದ ಕನ್ನಡಿಯ ನೆರವಿನಿಂದ ಒಲಿಂಪಿಕ್‌ ಜ್ಯೋತಿಯನ್ನು ಬೆಳಗಿಸಿ, ಬಳಿಕ ಇದನ್ನು 2020ರ ಒಲಿಂಪಿಕ್‌ ರೋಯಿಂಗ್‌ ಚಾಂಪಿಯನ್‌ ಸ್ಟೆಫ‌ನಸ್‌ ನೌಸ್ಕೊಸ್‌ಗೆ ಹಸ್ತಾಂತರಿಸಿದ್ದರು. ಇದೀಗ ಫ್ರೆಂಚ್‌ ಅಧಿಕಾರಿಗಳು ಪ್ಯಾರಿಸ್‌ನ ದಕ್ಷಿಣ ಹೊರವಲಯದ ಸರ್ಕಾರಿ ಕಟ್ಟಡವೊಂದರಲ್ಲಿ ಆಶ್ರಯ ಪಡೆದಿದ್ದ ನೂರಾರು ವಲಸಿಗರನ್ನು ತೆರವುಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಲಿಂಪಿಕ್ಸ್‌ ವೇಳೆಗೆ ನಗರವನ್ನು ಅಂದಗೊಳಿಸಲು ಫ್ರಾನ್ಸ್‌ ರಾಜಧಾನಿಯಿಂದ ನಿರಾಶ್ರಿತರನ್ನು ಹೊರದಬ್ಬಲಾಗುತ್ತಿದೆ ಎಂದು ಕೆಲ ಸೇವಾಸಂಸ್ಥೆಗಳು ಇದೇ ವೇಳೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿವೆ. ಒಲಿಂಪಿಕ್ಸ್​ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ನಡೆಯಲಿದೆ.

ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ


ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಇದನ್ನೂ ಓದಿ IPL 2024: ಕಾನ್ವೆ ಬದಲಿಗೆ ಚೆನ್ನೈ ತಂಡ ಸೇರ್ಪಡೆಗೊಂಡ ರಿಚರ್ಡ್ ಗ್ಲೀಸನ್

ಬೋಟ್‌ಗಳಲ್ಲೇ ಪರೇಡ್‌


ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಸಾರ್ವಜನಿಕ ನಿಧಿಯಿಂದ ಸ್ವಚ್ಛಗೊಂಡ ನದಿ

ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ. ಕಳೆದ ವಾರ ಕ್ರೀಡಾಪಟುಗಳು ಉಳಿದುಕೊಳ್ಳಲು ನಿರ್ಮಿಸಲಾಗಿರುವ ಕ್ರೀಡಾಗ್ರಾಮವನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮಾಕ್ರನ್‌ ಅವರು ಪರಿಶೀಲಿಸಿದ್ದರು. ಈ ವೇಳೆ ಅವರು ಸೀನ್​ ನದಿ ಸ್ವಚ್ಛಗೊಂಡಿದ್ದು, ತಾನು ಕೂಡ ಈ ನದಿಯಲ್ಲಿ ಈಜುವುದಾಗಿ ಭರವಸೆ ನೀಡಿದ್ದರು.

Exit mobile version