ಈ ಬಾರಿ ಪ್ಯಾರಿಸ್ ನಲ್ಲಿ ಜುಲೈ 26ರಿಂದ ಆಗಸ್ಟ್ 11ರವರೆಗೆ (Paris Olympics 2024) ಒಲಿಂಪಿಕ್ಸ್ ಕ್ರೀಡಾಕೂಟ (Olympic Games) ನಡೆಯಲಿದೆ. ಈಗಿನ ಒಲಿಂಪಿಕ್ಸ್ ಕ್ರೀಡಾಕೂಟವು ಸಾಕಷ್ಟು ಆಧುನೀಕರಣಗೊಂಡಿದೆ. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವು ಅಥೆನ್ಸ್ ನಲ್ಲಿ (Athens) 1896ರ ಏಪ್ರಿಲ್ 6ರಿಂದ 15ರವರೆಗೆ ಆಯೋಜಿಸಲಾಗಿತ್ತು. ಮೊದಲ ಒಲಿಂಪಿಕ್ ಕ್ರೀಡಾಕೂಟ (First Olympic Games) ಹಲವು ಪ್ರಮುಖ ಸ್ಮರಣೀಯ ಘಟನೆಗಳಿಗೆ ಕಾರಣವಾಗಿತ್ತು.
ಒಲಿಂಪಿಕ್ ಕ್ರೀಡಾಕೂಟವನ್ನು ವಿಶ್ವದ ಅತಿದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್ ಕಲ್ಪನೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 23ರಂದು ವಿಶ್ವ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಂಪಿಕ್ಸ್ ಉದ್ಘಾಟನೆ ಸ್ಪರ್ಧೆಗಳಲ್ಲಿ ಒಟ್ಟು 280 ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್ ನಲ್ಲಿ 43 ಸ್ಪರ್ಧಿಗಳಿದ್ದರು.
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಟಗಾರರು ಅನೇಕ ಸ್ಪರ್ಧಿಗಳನ್ನು ಸೋಲಿಸಿದ ಅನಂತರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಾರೆ. ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವು ಆತಿಥೇಯ ರಾಷ್ಟ್ರದ ಅತಿದೊಡ್ಡ ಸಾಧನೆಯಾಗಿದೆ. ಅಮೆರಿಕ ಈವರೆಗೆ 9 ಬಾರಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದೆ. ಇದು ಇತರ ದೇಶಗಳಿಗಿಂತ ಹೆಚ್ಚಿನದಾಗಿದೆ. ಇದುವರೆಗೆ 6 ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಿದ ಫ್ರಾನ್ಸ್ ಅನಂತರದ ಸ್ಥಾನದಲ್ಲಿದೆ.
ಮೊದಲ ಒಲಿಂಪಿಕ್ ಕ್ರೀಡಾಕೂಟದ ಹತ್ತು ಪ್ರಮುಖ ಸಂಗತಿಗಳು
1. ಮೊದಲ ಒಲಂಪಿಕ್ಸ್ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ 1896ರ ಏಪ್ರಿಲ್ 6ರಿಂದ 15ರವರೆಗೆ ನಡೆಯಿತು.
2. ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್ ಗೇಮ್ಸ್ ಅನ್ನು ಕಿಂಗ್ ಜಾರ್ಜ್ I ಉದ್ಘಾಟಿಸಿದ್ದರು.
3. ಮೊದಲ ಒಲಿಂಪಿಕ್ಸ್‌ನಲ್ಲಿ ಒಟ್ಟು 14 ದೇಶಗಳು ಭಾಗವಹಿಸಿವೆ.
4. 1896ರ ಏಪ್ರಿಲ್ 6ರಂದು ಅಮೆರಿಕನ್ ಆಟಗಾರ ಜೇಮ್ಸ್ ಕೊನೊಲಿ ಟ್ರಿಪಲ್ ಜಂಪ್ ಅನ್ನು ಗೆದ್ದು ಮೊದಲ ಒಲಿಂಪಿಕ್ ಚಾಂಪಿಯನ್ ಆದರು. ಎತ್ತರ ಜಿಗಿತದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಅವರು ಗಳಿಸಿದರು.
5. ಜರ್ಮನಿಯ ಕಾರ್ಲ್ ಶುಹ್ಮನ್ ಅವರು 1896ರಲ್ಲಿ ಅಥೆನ್ಸ್‌ನ ಸ್ಟಾರ್ ತಾರೆಯಾಗಿದ್ದರು. ಜಿಮ್ನಾಸ್ಟಿಕ್ಸ್, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್ ಮತ್ತು ಗ್ರೀಕೊ-ರೋಮನ್ ಕುಸ್ತಿಯಲ್ಲಿ ಸ್ಪರ್ಧಿಸಿ ಅವರು ಉದ್ಘಾಟನಾ ಆಧುನಿಕ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು.
6. ಮೊದಲ ಒಲಿಂಪಿಕ್ಸ್ ನಲ್ಲಿ ಅಮೆರಿಕವು ಗರಿಷ್ಠ ಸಂಖ್ಯೆಯ 14 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು.
7. ಮೊದಲ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 241 ಆಟಗಾರರು ಸ್ಪರ್ಧಿಸಿದ್ದರು.
7. ಅಥೆನ್ಸ್‌ನಲ್ಲಿ ಒಲಿಂಪಿಕ್ಸ್ ಅಂಗವಾಗಿ ಒಟ್ಟು 43 ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
8. ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನ ಪಡೆದ ವಿಜೇತರಿಗೆ ಬೆಳ್ಳಿ ಪದಕ ಮತ್ತು ಆಲಿವ್ ಗುಚ್ಛ ನೀಡಲಾಯಿತು. ಎರಡನೇ ಸ್ಥಾನದಲ್ಲಿರುವವರಿಗೆ ತಾಮ್ರದ ಪದಕ, ಲಾರೆಲ್ ಗುಚ್ಛ ಮತ್ತು ಪ್ರಮಾಣಪತ್ರ ನೀಡಲಾಯಿತು.
9. ಪದಕದ ಮುಂಭಾಗದ ಭಾಗವು ಜೀಸಸ್‌ನ ಮುಖವನ್ನು ಹೊಂದಿದ್ದು, ಅವನು ಕೈಯಲ್ಲಿ ರೆಕ್ಕೆಯ ವಿಜಯದೊಂದಿಗೆ ಗ್ಲೋಬ್ ಅನ್ನು ಹಿಡಿದಿದ್ದಾನೆ. ಗ್ರೀಕ್ ಭಾಷೆಯಲ್ಲಿ “ಒಲಿಂಪಿಯಾ” ಎಂಬ ಶೀರ್ಷಿಕೆಯನ್ನು ಇದು ಒಳಗೊಂಡಿತ್ತು. ಹಿಂಭಾಗವು ಆಕ್ರೊಪೊಲಿಸ್ ಸೈಟ್ ಅನ್ನು ಗ್ರೀಕ್ ಭಾಷೆಯಲ್ಲಿ “1896ರಲ್ಲಿ ಅಥೆನ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ” ಎಂಬ ಶೀರ್ಷಿಕೆಯೊಂದಿಗೆ ಹೊಂದಿತ್ತು.
ಇದನ್ನೂ ಓದಿ: Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?
10. ಅಥೆನ್ಸ್ 1896ರ ಒಲಿಂಪಿಕ್ ಕ್ರೀಡಾಕೂಟದ ಅಧಿಕೃತ ವರದಿಯು ಎರಡು ಭಾಗಗಳನ್ನು ಒಳಗೊಂಡಿತ್ತು. “ದ ಒಲಿಂಪಿಕ್ ಗೇಮ್ಸ್ ಇನ್ ಏನ್ಷಿಯಂಟ್ ಟೈಮ್ಸ್” ಶೀರ್ಷಿಕೆಯಲ್ಲಿ ಕ್ರೀಡಾಕೂಟದ ಮೊದಲು ಪ್ರಕಟವಾಯಿತು. 1896ರಲ್ಲಿ ಒಲಿಂಪಿಕ್ ಗೇಮ್ಸ್ ಕ್ರೀಡಾಕೂಟದ ಅನಂತರ ಪ್ರಕಟವಾಯಿತು.
ಎರಡು ಸಂಪುಟಗಳನ್ನು ಫ್ರೆಂಚ್-ಗ್ರೀಕ್ ಮತ್ತು ಇಂಗ್ಲಿಷ್-ಜರ್ಮನ್ ಎಂಬ ಎರಡು ದ್ವಿಭಾಷಾ ಆವೃತ್ತಿಗಳ ರೂಪದಲ್ಲಿ ನಾಲ್ಕು ಭಾಷೆಗಳಲ್ಲಿ ಪ್ರಕಟಿಸಲಾಯಿತು. ಈ ಅಧಿಕೃತ ವರದಿಯು ವಿವಿಧ ಹೊಸ ಆವೃತ್ತಿಗಳ ವಿಷಯವಾಗಿತ್ತು.