Site icon Vistara News

Paris Olympics 2024 : ಜಿಯೋಸಿನಿಮಾದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​​ ಉಚಿತ ನೇರಪ್ರಸಾರ

Paris Olympics 2024

ಮುಂಬೈ : ಪ್ಯಾರಿಸ್ ಒಲಿಂಪಿಕ್ಸ್​-2024ರ (Paris Olympics 2024 : ಜಿಯೋಸಿನಿಮಾದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​​ ಪೂರ್ಣ ಉಚಿತವಾಗಿ ನೇರಪ್ರಸಾರ) ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರನಾಗಿರುವ ವಯಾಕಾಮ್​18, ಭಾರತದಲ್ಲಿ 20 ಏಕಕಾಲಿಕ ಫೀಡ್‌ಗಳ ಒಲಿಂಪಿಕ್ಸ್ ಕ್ರೀಡಾಕೂಟದ ನೇರ ಪ್ರಸಾರ ಮಾಡಲಿದೆ. ಜುಲೈ 26ರಂದು ಆರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಎಲ್ಲ ಕ್ರೀಡಾಸ್ಪರ್ಧೆಗಳನ್ನು ಸ್ಪೋರ್ಟ್ಸ್ 18 ನೆಟ್​ವರ್ಕ್​ನಲ್ಲಿ ನೇರಪ್ರಸಾರ ವಾಗಲಿದೆ. ಇದೇ ವೇಳೆ ಜಿಯೋಸಿನಿಮಾದಲ್ಲಿ ಉಚಿತವಾಗಿ ನೇರಪ್ರಸಾರ ಕಾಣಲಿದೆ. . ‘ ದಮ್​ಲಗಾ ಕೆ… ಹೈಶಾ ‘ ಪ್ರಚಾರ ವಿಡಿಯೋದ ಮೂಲಕ ಹಿಂದೆಂದೂ ಕಂಡಿರದ ರೀತಿಯಲ್ಲಿ ಒಲಿಂಪಿಕ್ಸ್ ನೇರಪ್ರಸಾರಗೊಳ್ಳಲಿದೆ.

ಇದೇ ಮೊದಲ ಬಾರಿಗೆ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಜಿಯೋಸಿನಿಮಾದಲ್ಲಿ 20 ಏಕಕಾಲೀನ ಫೀಡ್‌ಗಳಲ್ಲಿ ಉಚಿತವಾಗಿ ಪ್ರಸಾರವಾಗಲಿದೆ. ಅಭಿಮಾನಿಗಳು ತಮ್ಮ ಆದ್ಯತೆಯ ಸ್ಪರ್ಧೆ ಮತ್ತು ಭಾರತೀಯರ ಪ್ರದರ್ಶನಗಳನ್ನು ತಮ್ಮ ಅನುಕೂಲಕರ ರೀತಿಯಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಸಾಧ್ಯವಿದೆ. ಇದು 17 ಕ್ರೀಡಾವಾರು ಫೀಡ್‌ಗಳನ್ನು ಮತ್ತು ಮೂರು ಕ್ಯುರೇಟೆಡ್ ಫೀಡ್‌ಗಳನ್ನು ಹೊಂದಿರುತ್ತದೆ. ಎಲ್ಲವೂ 4ಕೆನಲ್ಲಿ ಲಭ್ಯವಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ವೀಕ್ಷಕ ವಿವರಣೆಯೊಂದಿಗೆ ಲಭ್ಯವಿರುತ್ತದೆ.

ಇದೇ ಮೊದಲ ಬಾರಿ ಮಹಿಳಾ ಕ್ರೀಡಾಪಟುಗಳ ಫೀಡ್ ಸೃಷ್ಟಿಸಲಾಗಿದೆ. ಕ್ರೀಡಾಕೂಟದಲ್ಲಿ ಮಹಿಳಾ ಒಲಿಂಪಿಯನ್‌ಗಳ ಪ್ರಯಾಣವನ್ನು ಪ್ರತ್ಯೇಕವಾಗಿ ಸೆರೆಹಿಡಿಯಲಾಗಿದೆ. ಕ್ಯುರೇಟೆಡ್ ಫೀಡ್‌ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಜಾಗತಿಕ ಕ್ರೀಡಾಕೂಟಗಳ ಫೀಡ್​ಗಳನ್ನು ಒಳಗೊಂಡಿರುತ್ತವೆ. ಇದರಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್​-2024ರಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳ ಸ್ಪರ್ಧೆಗಳನ್ನು ವೀಕ್ಷಿಸಲು ಅವಕಾಶ ಇದೆ.

ನೇರ ಪ್ರಸಾರ ಎಲ್ಲೆಲ್ಲಿ?

ಸ್ಪೋರ್ಟ್ಸ್​​18-1, ಸ್ಪೋರ್ಟ್ಸ್​​18–1ಎಚ್​ಡಿ, ಸ್ಪೋರ್ಟ್ಸ್​​18-2 ಚಾನಲ್​ಗಳು ಭಾರತ ಕೇಂದ್ರೀಕೃತ ಸ್ಪರ್ಧೆಗಳನ್ನು ನೇರಪ್ರಸಾರ ಮಾಡುತ್ತವೆ. ಸ್ಪೋರ್ಟ್ಸ್​18-3ರಲ್ಲಿ ಜಾಗತಿಕ ಕ್ರೀಡಾತಾರೆಯರ ಸ್ಪರ್ಧೆಗಳು ನೇರಪ್ರಸಾರ ಕಾಣಲಿವೆ. ಸ್ಪೋರ್ಟ್ಸ್​​18-1 ಮತ್ತು ಸ್ಪೋರ್ಟ್ಸ್​​18-1ಎಚ್​ಡಿ ಚಾನಲ್​ಗಳು ತಮಿಳು ಮತ್ತು ತೆಲುಗು ಜತೆಗೆ ಇಂಗ್ಲಿಷ್​ನಲ್ಲಿ ಸ್ಪರ್ಧೆಗಳನ್ನು ನೇರಪ್ರಸಾರ ಆಗಲಿದೆ. ಅದರಲ್ಲಿ ಭಾಷೆಗಳ ಆಯ್ಕೆಯ ಬಟನ್​ಗಳೂ ಲಭ್ಯವಿರಲಿವೆ. ಸ್ಪೋರ್ಟ್ಸ್​​18-2ರಲ್ಲಿ ಹಿಂದಿ ವೀಕ್ಷಕ ವಿವರಣೆಯೊಂದಿಗೆ ನೇರಪ್ರಸಾರ ಕಾಣಲಿವೆ.

ಭಾರತೀಯರ ಮೇಲೆ ಮೀಸಲಾದ ಕ್ಯಾಮರಾ ಫೀಡ್‌ನೊಂದಿಗೆ ಉದ್ಘಾಟನಾ ಸಮಾರಂಭದ ಕವರೇಜ್ ಕೂಡ ಇದೆ. ಈ ಮೂಲಕ ಭಾರತೀಯ ತಂಡದ ಸಂಪೂರ್ಣ ಚಟುವಟಿಕೆಗಳನ್ನು ನೋಡುವ ಅವಕಾಶವಿದೆ. ಹೆಚ್ಚುವರಿಯಾಗಿ ಭಾರತೀಯರ ಪದಕ ಗೆಲುವಿನ ಕ್ಷಣಗಳಲ್ಲಿ ಅವರ ಕುಟುಂಬದ ಸದಸ್ಯರ ನೇರ ಸಂದರ್ಶನ ಕಾಣಬಹುದು.

ನಮ್ಮ ಕ್ರೀಡಾಪಟುಗಳು ಉನ್ನತ ಸಾಧನೆಯ ಮೇಲೆ ಕಣ್ಣಿಟ್ಟಿರುವ ಸಮಯದಲ್ಲಿ ವೀಕ್ಷಕರನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಪ್ಯಾರಿಸ್ ಒಲಿಂಪಿಕ್ಸ್​-2024ರ ನಮ್ಮ ಪ್ರಸಾರವನ್ನು ರೂಪಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಭಾರತೀಯರಿಗೆ ಮೀಸಲಾದ ಫೀಡ್, ಮಹಿಳಾ ಕ್ರೀಡಾಪಟುಗಳ ಫೀಡ್ ಮತ್ತು ಜಾಗತಿಕ ಕ್ರೀಡಾಸ್ಪರ್ಧೆಗಳ ಫೀಡ್​ ಹೊಂದಿರುತ್ತದೆ ಎಂದು ವಯಾಕಾಮ್​18-ಸ್ಪೋರ್ಟ್ಸ್​​ಕಂಟೆಂಟ್​ ಮುಖ್ಯಸ್ಥ ಸಿದ್ಧಾರ್ಥ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: Sourav Ganguly : ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟಿದ್ದು ನಾನು, ಎಲ್ಲರೂ ಮರೆತಿದ್ದಾರೆ ಎಂದ ಗಂಗೂಲಿ

ಭಾರತದ ಮೊದಲ ಮಹಿಳಾ ಕುಸ್ತಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ (2016ರ ರಿಯೋ ಒಲಿಂಪಿಕ್ಸ್), 2008ರ ಬೀಜಿಂಗ್ ಒಲಿಂಪಿಕ್​ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರೊಂದಿಗೆ ನಾಲ್ಕು ಬಾರಿಯ ಒಲಿಂಪಿಯನ್ ಮತ್ತು ಆರು ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತೆ ಮತ್ತು ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ವಿಶ್ವ ನಂಬರ್ ಒನ್ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿರುವ ಸಾನಿಯಾ ಮಿರ್ಜಾ, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೋಮದೇವ್ ದೇವವರ್ಮನ್, ವಿಶ್ವದ ನಂ. 7 ಲಾಂಗ್ ಜಂಪರ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಮುರಳಿ ಶ್ರೀಶಂಕರ್ ಅವರು ಒಲಿಂಪಿಕ್ಸ್ ಸಮಯದಲ್ಲಿ ವಯಾಕಾಮ್​18ರಲ್ಲಿ ಕ್ರೀಡಾ ಪರಿಣತರಾಗಿ ಕಾಣಿಸಿಕೊಳ್ಳಲಿದ್ದಾರೆ.

ಸ್ಟುಡಿಯೋ ಲೈನ್‌ಅಪ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕ್ವಿನ್ಹಾ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಷಟ್ಲರ್ ಪಾರುಪಳ್ಳಿ ಕಶ್ಯಪ್, ಅನೇಕ ಏಷ್ಯನ್ ಗೇಮ್ಸ್ ಪದಕ ವಿಜೇತ ಮತ್ತು ವಿಶ್ವ ಡಬಲ್ಸ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತ ಸ್ಕ್ವಾಷ್ ಆಟಗಾರ ಸೌರವ್ ಘೋಷಾಲ್ ಮತ್ತು ಎರಡು ಬಾರಿಯ ಒಲಿಂಪಿಯನ್​ಆರ್ಚರ್​ಅತನು ದಾಸ್​ವಯಾಕಾಮ್​18ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ರೀಡಾಪಟುಗಳ ಜೀವನ ಕತೆ

‘ ದಮ್​ಲಗಾ ಕೆ… ಹೈಶಾ ‘ ಅಭಿಯಾನವು ಒಲಿಂಪಿಕ್ಸ್​ ಸ್ಫೂರ್ತಿಯ ಕತೆಯಾಗಿದೆ. ಓಟಗಾರರು, ಬಾಕ್ಸರ್‌ಗಳು, ಜಿಮ್ನಾಸ್ಟ್‌ಗಳು, ಬಿಲ್ಲುಗಾರರು ಮತ್ತು ವೇಟ್‌ಲಿಫ್ಟರ್‌ಗಳಂತೆ ನಮ್ಮನ್ನು ಹುರಿದುಂಬಿಸಲಿದ್ದಾರೆ. ದಮ್ ಲಗಾ ಕೆ… ಹೈಶಾ ಅಭಿಯಾನವು ದೇಶಾದ್ಯಂತ ಒಲಿಂಪಿಕ್ಸ್‌ಗಾಗಿ ಭಾರತೀಯರ ಉತ್ಸಾಹವೂ ಆಗಿದೆ.

ಪ್ಯಾರಿಸ್ ಒಲಿಂಪಿಕ್ಸ್​-2024ಕ್ಕಾಗಿ ವಯಾಕಾಮ್​18ನ ಕ್ರೀಡಾಪರಿಣತರ ಪಟ್ಟಿ ಇಲ್ಲಿದೆ

ಸಾನಿಯಾ ಮಿರ್ಜಾ, ವೀರೇನ್​ರಸ್ಕ್ವಿನ್ಹಾ, ಸೋಮ​ದೇವ್​ದೇವವರ್ಮನ್, ನೇಹಾ ಅಗರ್ವಾಲ್​, ನಿಶಾ ಮಿಲ್ಲೆಟ್​, ಮುರಳಿ ಶ್ರೀಶಂಕರ್​, ಸೌರವ್​ಘೋಷಾಲ್​, ರಾಹುಲ್​ಬ್ಯಾನರ್ಜಿ, ಅತನು ದಾಸ್​, ಪಿ. ಕಶ್ಯಪ್​, ವಿಜೇಂದರ್​ಸಿಂಗ್​, ಜುಗ್​ರಾಜ್​ಸಿಂಗ್​, ಹೀನಾ ಸಿಧು, ಜಾಯ್​ದೀಪ್​ಕರ್ಮಾಕರ್​, ವೀರ್​ಧವಳ್​ಖಾಡೆ, ಸಾಕ್ಷಿ ಮಲಿಕ್​.

ವೀಕ್ಷಕರು ಜಿಯೋಸಿನಿಮಾ ಆ್ಯಪ್​ (ಐಒಎಸ್​ ಮತ್ತು ಆಂಡ್ರಾಯ್ಡ್​) ಡೌನ್​ಲೋಡ್​ಮಾಡಿಕೊಳ್ಳಬಹುದು. ಸುದ್ದಿಗಳು, ಸ್ಕೋರ್​, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​, ಯುಟ್ಯೂಬ್ ಮತ್ತು ವ್ಯಾಟ್ಸ್​​ಆ್ಯಪ್​​ನಲ್ಲಿ ಜಿಯೋಸಿನಿಮಾವನ್ನು ಫಾಲೋ ಮಾಡಬಹುದು.

Exit mobile version