Site icon Vistara News

Paris Olympics 2024 : ಒಲಿಂಪಿಕ್ಸ್​​ ಸ್ಮರಣೆಗಾಗಿ ಜೆಎಸ್​ಡಬ್ಲ್ಯುನಿಂದ ಪ್ಯಾರಿಸ್​ನಲ್ಲಿ ವಿಶೇಷ ಪ್ರದರ್ಶನ

Paris olympics 2024


ಬೆಂಗಳೂರು : ಒಲಿಂಪಿಕ್ ಆಂದೋಲನದ ಸಂಸ್ಥಾಪಕ ಪಿಯರೆ ಡಿ ಕೂಬರ್ಟಿನ್ ಅವರ ಬದುಕನ್ನು ಸಂಭ್ರಮಿಸುವ ಉದ್ದೇಶದಿಂದ ಮತ್ತು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ದೇಶದ 100 ವರ್ಷಗಳ ಭಾಗವಹಿಸುವಿಕೆಯನ್ನು ಸ್ಮರಿಸುವ ಸಲುವಾಗಿ ಈ ಬಾರಿಯ ಒಲಿಂಪಿಕ್ಸ್ (Paris Olympics 2024) ಆತಿಥೇಯ ನಗರವಾದ ಪ್ಯಾರಿಸ್ ನಲ್ಲಿ ಜೆಎಸ್‌ಡಬ್ಲ್ಯೂ ಗ್ರೂಪ್ ಪ್ರದರ್ಶನವನ್ನು ಆರಂಭಿಸಿದೆ. ಇದು ಒಲಿಂಪಿಕ್ಸ್ ಮುಕ್ತಾಯದ ತನಕ ನಡೆಯಲಿದ್ದು ಭಾರತದ ಒಲಿಂಪಿಕ್ಸ್ ಪರಂಪರೆಯ ನಾನಾ ಕ್ಷಣಗಳನ್ನು ವೀಕ್ಷಿಸಲು ಅವಕಾಶವಿದೆ.

ಜೆಎಸ್‌ಡಬ್ಲ್ಯೂ ಫೌಂಡೇಶನ್‌ ನ ಅಧ್ಯಕ್ಷೆ ಸಂಗೀತಾ ಜಿಂದಾಲ್ ಮತ್ತು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸಂಸ್ಥಾಪಕ ಪಾರ್ಥ್ ಜಿಂದಾಲ್, ಐಓಸಿ ಅಧ್ಯಕ್ಷ ಶ್ರೀ ಥಾಮಸ್ ಬಾಚ್, ಫ್ರಾನ್ಸ್ ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಮತ್ತು ಪಿಯರೆ ಡಿ ಕೂಬರ್ಟಿನ್ ಫ್ಯಾಮಿಲಿ ಅಸೋಸಿಯೇಶನ್‌ ನ ಅಧ್ಯಕ್ಷರಾದ ಅಲೆಕ್ಸಾಂಡ್ರಾ ಡಿ ನವಸೆಲ್ಲೆ ಅವರು ಪ್ಯಾರಿಸ್‌ನ 7ನೇ ಅರೋಂಡಿಸ್ಮೆಂಟ್‌ನ ಟೌನ್ ಹಾಲ್‌ ನಲ್ಲಿ ಆಯೋಜಿಸಲಾಗಿರುವ ಎಕ್ಸಿಬಿಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಪ್ರದರ್ಶನವು ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಪ್ಯಾರಿಸ್ 2024ರ ಬೇಸಿಗೆ ಪ್ಯಾರಾಲಿಂಪಿಕ್ ಅಂತ್ಯದವರೆಗೆ ನಡೆಯಲಿದೆ.

ಜೆಎಸ್‌ಡಬ್ಲ್ಯೂ ಫೌಂಡೇಶನ್‌ನ ಅಧ್ಯಕ್ಷೆ ಶ್ರೀಮತಿ ಸಂಗೀತಾ ಜಿಂದಾಲ್, “ಪ್ಯಾರಿಸ್‌ ನಲ್ಲಿ ನಡೆಯುತ್ತಿರುವ ಜೀನಿಯಸ್ ಆಫ್ ಸ್ಪೋರ್ಟ್ ಎಕ್ಸಿಬಿಷನ್ ನಲ್ಲಿ ‘ ಭಾರತದ 100 ವರ್ಷಗಳ ಭಾಗವಹಿಸುವಿಕೆ”ಯನ್ನು ಸ್ಮರಿಸುವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲು ಗೆ ಸಂತೋಷವಾಗಿದೆ. ಈ ವಿಶಿಷ್ಟ ಪ್ರದರ್ಶನದ ಮೂಲಕ ನಾವು ಪಿಯರೆ ಡಿ ಕೂಬರ್ಟಿನ್ ಅವರ ಬದುಕು ಹಾಗೂ ಪರಂಪರೆಯನ್ನು ಮತ್ತು ಭಾರತದ ಗಮನಾರ್ಹವಾದ 100 ವರ್ಷಗಳ ಒಲಿಂಪಿಕ್ ಪ್ರಯಾಣವನ್ನು ಆಚರಿಸುತ್ತಿದ್ದೇವೆ. ಕ್ರೀಡೆಯು ಜಾಗತಿಕ ಎಲ್ಲಾ ಗಡಿಗಳನ್ನು ಮೀರಿ ಶಾಂತಿ ಹಾಗೂ ಸ್ನೇಹದ ಮೂಲಕ ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಪಿಯರೆ ಡಿ ಕೂಬರ್ಟಿನ್ ಅವರ ದೂರದೃಷ್ಟಿ ಮತ್ತು ನಂಬಿಕೆಯನ್ನು ಗೌರವಿಸುತ್ತಿದ್ದೇವೆ. 2024ರ ಒಲಿಂಪಿಕ್ಸ್ ಕ್ರೀಡಾಕೂಟವು ಜೆಎಸ್‌ಡಬ್ಲ್ಯೂ ಗ್ರೂಪ್‌ ಗೆ ಬಹಳ ಪ್ರಮುಖ ಮೈಲಿಗಲ್ಲಾಗಿದೆ. ಈ ಪ್ರದರ್ಶನವನ್ನು ಆಯೋಜಿಸಲು ಮತ್ತು ಪ್ಯಾರಿಸ್‌ ನಲ್ಲಿ ಭಾರತದ ಅಥ್ಲೀಟ್​ಗಳ ನಿಯೋಗವನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ. ನಾವು ಭಾರತದಲ್ಲಿ ಕ್ರೀಡಾ ಸಂಸ್ಕೃತಿ ಮತ್ತು ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Paris Olympics 2024 : ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ “ಇಂಡಿಯಾ ಹೌಸ್”

ಪಿಯರೆ ಡಿ ಕೂಬರ್ಟಿನ್ ಫ್ಯಾಮಿಲಿ ಅಸೋಸಿಯೇಷನ್‌ ನ ಸಹಯೋಗದೊಂದಿಗೆ ನಡೆಯುತ್ತಿರುವ ಪ್ರದರ್ಶನವು ಕಳೆದ ಶತಮಾನದ ಭಾರತದ ಒಲಿಂಪಿಕ್ ಪ್ರಯಾಣದ ವಿವರಗಳನ್ನು ಒದಗಿಸುತ್ತದೆ. ಭಾರತವು ಒಲಿಂಪಿಕ್ಸ್ ನಲ್ಲಿ ಈ ಹಿಂದೆ ಅನುಭವಿಸಿದ ಯಶಸ್ಸು ಮತ್ತು ಭವಿಷ್ಯದ ಕುರಿತು ಹೊಂದಿರುವ ದೂರದೃಷ್ಟಿಯ ಚಿತ್ರಗಳನ್ನು ಈ ಎಕ್ಸಿಬಿಷನ್ ನಲ್ಲಿ ವೀಕ್ಷಿಸಬಹುದು

ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ ನ ಸಂಸ್ಥಾಪಕ ಪಾರ್ಥ್ ಜಿಂದಾಲ್ ಮಾತನಾಡಿ “ ಒಲಿಂಪಿಕ್ಸ್​​ನಲ್ಲಿ ಭಾರತದ ಸಾಧನೆ ಕುರಿತು ವಿಶೇಷ ಪ್ರದರ್ಶನ ಆಯೋಜಿಸಲು ಪಿಯರೆ ಡಿ ಕೂಬರ್ಟಿನ್ ಕುಟುಂಬದೊಂದಿಗೆ ಸಹಯೋಗ ಮಾಡಿಕೊಂಡಿರುವುದಕ್ಕೆ ನಮಗೆ ಹೆಮ್ಮೆಯಿದೆ ನಾವು ವಿಶ್ವದ ಶ್ರೇಷ್ಠ ಕ್ರೀಡಾಕೂಟದ ಸನಿಹದಲ್ಲಿದ್ದೇವೆ ಮತ್ತು ಈ ಸಂದರ್ಭದಲ್ಲಿ ಒಲಿಂಪಿಕ್ಸ್ ನಡೆಯುವ ಪ್ಯಾರಿಸ್ ನಗರದಲ್ಲಿ ಗಮನ ಸೆಳೆಯುವಂಥದ್ದೇನೋ ಮಾಡಬೇಕೆಂಬುದು ಜೆಎಸ್‌ಡಬ್ಲ್ಯೂ ನಲ್ಲಿನ ನಮ್ಮ ಬಯಕೆಯಾಗಿತ್ತು” ಎಂದು ಹೇಳಿದರು.

ಐಒಸಿ ಅಧ್ಯಕ್ಷ ಶ್ರೀ ಥಾಮಸ್ ಬಾಕ್​ ಮಾತನಾಡಿ “ಈ ಪ್ರದರ್ಶನ ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು. ಈ ಪ್ರದರ್ಶನದಿಂದ ಸಾರ್ವಜನಿಕರು ಬೆರಗುಗೊಳಿಸುವ ಮತ್ತು ಬಹುಮುಖಿ ವ್ಯಕ್ತಿತ್ವದ ವ್ಯಕ್ತಿಯ ಕುರಿತು ತಿಳಿಯಲು ಸಾಧ್ಯವಾಗುತ್ತದೆ. ಪಿಯರೆ ಡಿ ಕೂಬರ್ಟಿನ್ ಅವರಂತಹ ಅದ್ಭುತ ವ್ಯಕ್ತಿಯ ಬಗ್ಗೆ ಫ್ರೆಂಚ್ ಜನರು ಹೆಮ್ಮೆ ಪಡುತ್ತೇವೆ” ಎಂದು ಹೇಳಿದರು.

Exit mobile version