Site icon Vistara News

Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

Paris Olympics 2024

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು, ವ್ಯಕ್ತಿಯೊಬ್ಬರು ಪ್ಯಾರಿಸ್​​ನ ಐತಿಹಾಸಿಕ ಐಫೆಲ್ ಟವರ್ (Eiffel Tower) ಏರಿ ಆತಂಕ ಸೃಷ್ಟಿಸಿದ್ದಾನೆ. ವ್ಯಕ್ತಿಯೊಬ್ಬ ಏರುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ತಕ್ಷಣವೇ ಜಾಗೃತರಾಗಿದ್ದು, ಆತನನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.

ವಿವರಗಳ ಪ್ರಕಾರ, ಅಂಗಿ ಧರಿಸದೇ ಕೇವಲ ಶಾರ್ಟ್​​ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಮಧ್ಯಾಹ್ನ 330 ಮೀಟರ್ ಎತ್ತರದ ಗೋಪುರ ಏರುತ್ತಿರುವುದು ಕಂಡುಬಂದಿದೆ. ಆತ ಯಾವಾಗ ಮತ್ತು ಎಲ್ಲಿಂದ ತಮ್ಮ ಏರಲು ಪ್ರಾರಂಭಿಸಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟವರ್​ ಮೇಲೆ ಅಳವಡಿಸಲಾಗಿದ್ದ ರಿಂಗ್​ ಮೇಲೆ ಆತನ ಚಹರೆ ಕಂಡುಬಂದಾಗ ಅಧಿಕಾರಿಗಳು ಆತನನ್ನು ಸ್ಥಳಾಂತರ ಮಾಡಿದರು. ಐಫೆಲ್ ಟವರ್​ನ ಮೇಲೆ ವ್ಯಕ್ತಿಯನ್ನು ಗುರುತಿಸಿದ ನಂತರ, ಪೊಲೀಸರು ಈ ಪ್ರದೇಶವನ್ನು ಸುತ್ತುವರಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಟವರ್​ ಏರುತ್ತಿದ್ದ ಪ್ರವಾಸಿಗರನ್ನು ತಡೆಯಲಾಯಿತು. ಎರಡನೇ ಮಹಡಿಯಲ್ಲಿ ಸ್ವಲ್ಪ ಸಮಯದವರೆಗೆ ಪ್ರವಾಸಿಗರು ಹಾಗೆಯೇ ನಿಲ್ಲುಂತಾಯಿತು. ಇನ್ನೂ ಕೆಲವರಿಗೆ ಸುಮಾರು 30 ನಿಮಿಷಗಳ ನಂತರ ನಿರ್ಗಮಿಸಲು ಅವಕಾಶ ನೀಡಲಾಯಿತು.

ಪ್ಯಾರಿಸ್​​ನ ಹೃದಯಭಾಗದಲ್ಲಿರುವ ಐತಿಹಾಸಿಕ ಗೋಪುರವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭದ ಕೇಂದ್ರಬಿಂದುವಾಗಿತ್ತು. ಆದಾಗ್ಯೂ, ಇದು ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭ ಅದರ ಸಮೀಪ ನಡೆಯುವುದಿಲ್ಲ. 2024ರ ಒಲಿಂಪಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕಾಗಿ ಪ್ಯಾರಿಸ್​ನಲ್ಲಿ 30,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಒಲಿಂಪಿಕ್ಸ್​​ನ ಕೊನೆಯ ದಿನದಂದು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾರಿಸ್ ಮತ್ತು ಸೇಂಟ್-ಡೆನಿಸ್ ಪ್ರದೇಶದಲ್ಲಿ 20,000 ಪೊಲೀಸ್ ಪಡೆಗಳು ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ಭಾನುವಾರ ತಡರಾತ್ರಿಯವರೆಗೆ ಸಜ್ಜುಗೊಳಿಸಲಾಗುವುದು ಎಂದು ಫ್ರಾನ್ಸ್​​ನ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಾರೋಪ ಸಮಾರಂಭವು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ ಆಗಸ್ಟ್ 12 ರಂದು ಬೆಳಿಗ್ಗೆ 12.30) ಐಫೆಲ್ ಟವರ್​ನಲ್ಲಿ ನಡೆಯಲಿದೆ. ಸೇಂಟ್-ಡೆನಿಸ್ ಪ್ರದೇಶದ ಸ್ಟೇಡ್ ಡಿ ಫ್ರಾನ್ಸ್ನಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ: PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

76 ಕೆ.ಜಿ ಮಹಿಳಾ ಕುಸ್ತಿಯಿಂದ ಭಾರತದ ರಿತಿಕಾ ಹೂಡಾ ನಿರ್ಗಮಿಸಿದ ನಂತರ, ಪದಕಗಳ ರೇಸ್​ನಲ್ಲಿ ಯಾವುದೇ ಭಾರತೀಯರು ಉಳಿದಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭದಲ್ಲಿ ಭಾರತದ ಪರ ಅನುಭವಿ ಹಾಕಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಧ್ವಜಧಾರಿಗಳಾಗಿದ್ದಾರೆ.

Exit mobile version