Site icon Vistara News

Paris Olympics 2024: ಅತ್ಲೀಟ್​ಗಳ ಕ್ರೀಡಾಗ್ರಾಮಕ್ಕೆ ಲಭಿಸಿತು ಅಧಿಕೃತ ಚಾಲನೆ

Paris Olympics 2024

Paris Olympics 2024: Paris Olympics athletes’ village officially opens

ಪ್ಯಾರಿಸ್: ವಿಶ್ವ ಮಟ್ಟದಲ್ಲಿ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್ಸ್ (Paris Olympics 2024) ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿವೆ. ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿರುವ ಫ್ರಾನ್ಸ್​ ಸರ್ವ ಸನ್ನದ್ಧವಾಗಿದೆ. ಎಲ್ಲ ದೇಶದ ಕ್ರೀಡಾಪಟುಗಳು ಇದೀಗ ಫ್ರಾನ್ಸ್​ಗೆ ಆಗಮಿಸುತ್ತಿದ್ದಾರೆ. ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಹೊಂದಿರುವ ಕ್ರೀಡಾಗ್ರಾಮ ಅಧಿಕೃತವಾಗಿ(Paris Olympic Village) ತೆರೆದುಕೊಂಡಿದೆ. ಈ ಕ್ರೀಡಾಗ್ರಾಮವನ್ನು ಪ್ಯಾರಿಸ್​ನ ಉತ್ತರ ಭಾಗದಲ್ಲಿ ನಿರ್ಮಿಸಲಾಗಿದ್ದು, ಇದು ಗರಿಷ್ಠ 14,500 ಮಂದಿಗೆ ಅತಿಥ್ಯವಹಿಸಲು ಸಿದ್ಧವಾಗಿದೆ. ಆಸ್ಟ್ರೇಲಿಯ ಹಾಗೂ ಬ್ರೆಝಿಲ್ ತಮ್ಮ ತಂಡದ ಸದಸ್ಯರನ್ನು ಕ್ರೀಡಾಗ್ರಾಮಕ್ಕೆ ಕಳುಹಿಸಿಕೊಟ್ಟ ಮೊದಲ ದೇಶಗಳಾಗಿವೆ.

ಕ್ರೀಡಾಗ್ರಾಮವು ಕ್ರೀಡಾಪಟುಗಳಿಗೆ ವಿಶ್ರಾಂತಿ ಹಾಗೂ ಅವರ ಸ್ಪರ್ಧೆಗಳಿಗೆ ತಯಾರಿ ಮಾಡಲು ಆರಾಮದಾಯಕ ಹಾಗೂ ಸುರಕ್ಷಿತ ವಾತಾವರಣ ಒದಗಿಸುತ್ತದೆ. ಒಲಿಂಪಿಕ್ಸ್ ವಿಲೇಜ್, ಕ್ರೀಡಾಕೂಟ ಸಂಘಟಕರಿಗೆ ಹೆಮ್ಮೆಗೆ ಕಾರಣವಾಗಿದ್ದು, ಇದು ಒಂದು ವಿಶಿಷ್ಟ ವೈಶಿಷ್ಟವನ್ನು ಹೊಂದಿದೆ. ಗ್ರಾಮದ ನಿವಾಸಿಗಳಿಗೆ ಅರಾಮದಾಯಕವಾದ ತಾಪಮಾನ ನಿರ್ವಹಿಸಲು ಹವಾನಿಯಂತ್ರಣವನ್ನು ಅವಲಂಬಿಸಿಲ್ಲ. ಬೇಸಿಗೆಯ ಸಮಯದಲ್ಲಿ ಹೊರಭಾಗಕ್ಕಿಂತ ಕನಿಷ್ಠ 6 ಡಿಗ್ರಿ ಸೆಲ್ಸಿಯಸ್ ತಂಪಾಗಿರುವಂತೆ ಗ್ರಾಮದ ಒಳಭಾಗವನ್ನು ವಿನ್ಯಾಸಗೊಳಿಸಲಾಗಿದೆ.

ಎಲ್ಲ ಕ್ರೀಡಾಕೂಡ ಮುಕ್ತಾಯದ ಬಳಿಕ ಈ ಕ್ರೀಡಾಗ್ರಾಮದ ಒಳಗಿನ ಅಪಾರ್ಟ್ಮೆಂಟ್​ಗಳನ್ನು ವಸತಿಗಳಾಗಿ ಪರಿವರ್ತಿಸಲಾಗುತ್ತದೆ. ಕನಿಷ್ಠ ಮೂರನೇ ಒಂದು ಭಾಗವನ್ನು ಸಾರ್ವಜನಿಕ ವಸತಿ ಉದ್ದೇಶಗಳಿಗಾಗಿ ಮೀಸಲಿಡಲಾಗುತ್ತದೆ.

ಇದನ್ನೂ ಓದಿ Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ “ಇಂಡಿಯಾ ಹೌಸ್” ಕಾಣಬಹುದಾಗಿದೆ. ಭಾರತೀಯ ಒಲಿಂಪಿಕ್ಸ್ ಒಕ್ಕೂಟದ (ಐಒಎ) ಸಹಭಾಗಿತ್ವ ವಹಿಸಿರುವಂಥ ರಿಲಯನ್ಸ್ ಫೌಂಡೇಷನ್ ನಿಂದ ಈ “ಇಂಡಿಯಾ ಹೌಸ್” ಪರಿಕಲ್ಪನೆ ಮೂಡಿದೆ. ಈ ಇಂಡಿಯಾ ಹೌಸ್ ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿ ಭಾರತದ ಭೂತ- ಭವಿಷ್ಯತ್ ಹಾಗೂ ವರ್ತಮಾನದ ಸಾಧನೆ, ಕನಸುಗಳನ್ನು ಸಹ ತೋರಿಸಲಾಗುತ್ತದೆ. ತಂತ್ರಜ್ಞಾನ ಮತ್ತು ಡಿಜಿಟಲೈಸೇಷನ್ ನಲ್ಲಿ ಭಾರತದ ಸಾಧನೆಯನ್ನು ಜಗತ್ತಿನೆದುರು ತೆರೆದಿಡಲಾಗುತ್ತದೆ. ವಿಶ್ವದ ವಿವಿಧ ಅಥ್ಲೀಟ್ ಗಳು, ಗಣ್ಯರು, ಕ್ರೀಡಾ ಉತ್ಸಾಹಿಗಳು ಈ ಇಂಡಿಯಾ ಹೌಸ್ ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇನ್ನು ಭಾರತದ ನೀತಿಯನ್ನು ವ್ಯಾಖ್ಯಾನಿಸುವ ಏಕತೆ, ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಸಾರುವುದಕ್ಕೂ ಇದು ಸಹಕಾರಿ ಆಗುತ್ತದೆ.

ಇಂಡಿಯಾ ಹೌಸ್ ಭಾರತದ ವಿಜಯಗಳು ಮತ್ತು ಪದಕ ಗೆಲುವುಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ. ಸಂದರ್ಶಕರು, ಕ್ರೀಡಾ ದಂತಕಥೆಗಳೊಂದಿಗೆ ಮಾತುಕತೆ ನಡೆಸಲು ಮತ್ತು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳ ಮೂಲಕ ಸ್ನೇಹಿತರೊಂದಿಗೆ ಪ್ರಮುಖ ಘಟನೆಗಳನ್ನು ಸ್ಮರಣೀಯವಾಗಿಸುವ ಗಮ್ಯಸ್ಥಾನವಾಗಿದೆ. ಇದು ಎಲ್ಲಾ ದೇಶಗಳ ಮಾಧ್ಯಮ ಮತ್ತು ಅಭಿಮಾನಿಗಳಿಗೆ ಮುಕ್ತವಾಗಿರುತ್ತದೆ. ಪ್ರಮುಖ ಭಾರತೀಯ ಕಾರ್ಯಕ್ರಮಗಳ ಸಂಭ್ರಮಾಚರಣೆಯನ್ನು ಇಂಡಿಯಾ ಹೌಸ್‌ನಲ್ಲಿ ಭಾರತದಲ್ಲಿ ಒಲಂಪಿಕ್ ಗೇಮ್ಸ್‌ನ ವಿಶೇಷ ಮಾಧ್ಯಮ ಹಕ್ಕುದಾರರಾದ ವಯಾಕಾಮ್18 ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ.

Exit mobile version