Site icon Vistara News

Paris Olympics 2024: ಭಾರತ-ಅರ್ಜೆಂಟೀನಾ ಹಾಕಿ ಪಂದ್ಯ ವೀಕ್ಷಿಸಿದ ರಾಹುಲ್​ ದ್ರಾವಿಡ್​

Paris Olympics 2024

Paris Olympics 2024: Rahul Dravid In Attendance During India Vs Argentina Hockey Clash

ಪ್ಯಾರಿಸ್​: ಭಾರತ ಕ್ರಿಕೆಟ್​ ತಂಡದ ಮಾಜಿ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics 2024) ಸೋಮವಾರ ನಡೆದಿದ್ದ ಭಾರತ ಮತ್ತು ಅರ್ಜೆಂಟೀನಾ ವಿರುದ್ಧ ಹಾಕಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ಪೋಟೊ ಇದೀಗ ವೈರಲ್​ ಆಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿರುವ ಇಂಡಿಯಾ ಹೌಸ್‌ನಲ್ಲಿ ಸೋಮವಾರ ‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌; ಹೊಸ ಯುಗದ ಉದಯ’ ವಿಷಯದ ಕುರಿತು ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಬಳಿಕ ದ್ರಾವಿಡ್​ ಹಾಕಿ ಪಂದ್ಯವನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ಮುಂದಿನ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಯಾಗದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.

“ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಅದ್ಭುತವಾಗಿ ನಡೆಯಬೇಕು. ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳೆರಡು ಚಿನ್ನ ಗೆಲ್ಲಬೇಕೆಂಬುದು ನನ್ನ ಕನಸು. ನಾನು ಯಾವುದಾದರೊಂದು ಸ್ಥಾನದ ಮೂಲಕ ಒಲಿಂಪಿಕ್ಸ್‌ನಲ್ಲಿ ಹಾಜರಿರುತ್ತೇನೆ. ಕೊನೆಗೆ ಮಾಧ್ಯಮ ಪ್ರತಿನಿಧಿಯಾಗಿಯಾದರೂ ಬರುತ್ತೇನೆ’ ಎಂದು ಹೇಳಿ ದ್ರಾವಿಡ್ ನಕ್ಕರು. ಲಾಸ್ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಸೇರ್ಪಡೆಗೊಂಡಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ತಾವರಣವನ್ನು ಕಲ್ಪಿಸಲು ಇದರ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಉದ್ಘಾಟನ ಸಮಾರಂಭದ ಬಳಿಕ ಮಾತನಾಡಿದ್ದ ಈ ನೀತಾ ಅಂಬಾನಿ, ಭಾರತ ಒಲಿಂಪಿಕ್ಸ್‌ ಆತಿಥ್ಯ ವಹಿಸುವ ದಿನ ದೂರವಿಲ್ಲ ಎಂದರು.

ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.

ಇದನ್ನೂ ಓದಿ Kerala Cyclist Reaches Paris: ನೀರಜ್​ ಚೋಪ್ರಾಗೆ ಬೆಂಬಲ ಸೂಚಿಸಲು ಬರೋಬ್ಬರಿ 22 ಸಾವಿರ ಕಿ.ಮೀ ಸೈಕಲ್​ ತುಳಿದು ಪ್ಯಾರಿಸ್​ ತಲುಪಿದ ಕೇರಳದ ಅಭಿಮಾನಿ

ಐಪಿಎಲ್​ ಕೋಚಿಂಗ್​ನತ್ತ ಮುಖ ಮಾಡಿದ ದ್ರಾವಿಡ್​


ಟಿ20 ವಿಶ್ವಕಪ್​ ಬಳಿಕ ಭಾರತ ತಂಡದ ಕೋಚಿಂಗ್​ ಹುದ್ದೆಯಿಂದ ನಿವೃತ್ತಿ ಹೊಂದಿರುವ ದ್ರಾವಿಡ್​ ಮುಂದಿನ ಐಪಿಎಲ್​ನಲ್ಲಿ ಈ ಹಿಂದೆ ಕೋಚಿಂಗ್​ ನಡೆಸಿದ್ದ ರಾಜಸ್ಥಾನ್ ರಾಯಲ್ಸ್​(Rajasthan Royals) ತಂಡದ ಪರವೇ ಮತ್ತೆ ಕೋಚಿಂಗ್​ ನಡೆಸಲಿದ್ದಾರೆ ಎನ್ನಲಾಗಿದೆ.

ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್​ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್​ನಲ್ಲಿ ತಂಡ ಫೈನಲ್​ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಎರಡು ಸೀಸನ್​ಗಳಲ್ಲಿ ರಾಜಸ್ಥಾನ್ ತಂಡದ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್​ ಕೋಚಿಂಗ್​ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಟೀಮ್​ ಇಂಡಿಯಾ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎಲ್ಲ ಹುದ್ದೆಗಳಿಂದ ನಿವೃತ್ತಿ ಹೊಂದಿರುವ ಅವರು ಐಪಿಎಲ್​ ಕೋಚಿಂಗ್​ ಕಡೆ ಗಮನಹರಿಸಿದ್ದಾರೆ.

Exit mobile version