ಮುಂಬಯಿ: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕ್ರೀಡಾಕೂಟ ಆರಂಭದಕ್ಕೆ ದಿನಗಣನೆ ಶುರುವಾಗಿದೆ. ಜುಲೈ 26ರಂದು ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಈ ಮಹೋನ್ನತ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಇಡೀ ಪ್ಯಾರಿಸ್ ಸರ್ವ ಸನ್ನದ್ದವಾಗಿದೆ. ಆಯೋಜಕರು ಸಿದ್ಧತೆಯ ಹಲವು ವಿಡಿಯೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿದ್ಧತೆಯ ವಿಡಿಯೊವೊಂದಕ್ಕೆ ನಟ ವಿಜಯ್ ದೇವರಕೊಂಡ(Vijay Deverakonda) ಮತ್ತು ರಶ್ಮಿಕಾ ಮಂದಣ್ಣ ನಟಿಸಿದ ತೆಲುಗಿನ ಗೀತ ಗೋವಿಂದಂ(Geetha Govindam song) ಚಿತ್ರದ ಹಾಡನ್ನು ಕೂಡ ಬಳಸಲಾಗಿದೆ. ಇದಕ್ಕೆ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ವಿಜಯ್ ದೇವರಕೊಂಡ ಹರ್ಷ ವ್ಯಕ್ತಪಡಿಸಿದ್ದು ಈ ವಿಡಿಯೊ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ಒಲಿಂಪಿಕ್ಸ್ ಉಂಗುರಗಳಿಂದ ಅಲಂಕರಿಸಲ್ಪಟ್ಟ ಐಫೆಲ್ ಟವರ್ ವಿಡಿಯೊಗೆ ಗೀತ ಗೋವಿಂದಂ ಸಿನೆಮಾದ ‘ಇಂಕೇಮ್ ಇಂಕೇಮ್’ ಹಾಡನ್ನು ಒಲಿಂಪಿಕ್ಸ್ ಅಧಿಕೃತ ಇನ್ಸ್ಟಾಗ್ರಾಮ್ ಬಳಿಸಿಕೊಂಡಿದೆ. “ಐಫೆಲ್ ಟವರ್‌ನ ಹೊಸ ನೋಟವನ್ನು ಯಾರು ಇಷ್ಟಪಡುತ್ತಾರೆ? ಪ್ಯಾರಿಸ್ ಮುಂದಿನ ತಿಂಗಳ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧವಾಗುತ್ತಿದೆ” ಎಂಬ ಶೀರ್ಷಿಕೆಯೊಂದಿಗಿನ ವೀಡಿಯೊಗೆ ಈ ಹಾಡನ್ನು ಬಳಿಸಿಕೊಂಡಿದೆ. ಪ್ಯಾರಿಸ್ನಲ್ಲಿಯೂ ಈ ಹಾಡು ಜನಪ್ರಿಯತೆಗಳಿಸಿದ ಖುಷಿಯಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಹರ್ಷ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಅವರು ಕ್ರೇಜಿ…ಸಾಂಗ್ ಎಂದು ಬರೆದುಕೊಂಡರೆ, ದೇವರಕೊಂಡ ಕೆಲವು ಹಾಡುಗಳು ಯಾವಾಗಲೂ ವಿಶೇಷ ಮತ್ತು ಮರೆಯಲು ಅಸಾಧ್ಯ ಎಂದು ಬರೆದುಕೊಂಡಿದ್ದಾರೆ.
ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ
ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 8ರವರೆಗೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.
ಬೋಟ್‌ಗಳಲ್ಲೇ ಪರೇಡ್
ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಇದನ್ನೂ ಓದಿ Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ತಂಗಿ ಈಗ ಹೇಗಿದ್ದಾರೆ?
ಸಾರ್ವಜನಿಕ ನಿಧಿಯಿಂದ ಸ್ವಚ್ಛಗೊಂಡ ನದಿ
ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ. ಕಳೆದ ವಾರ ಕ್ರೀಡಾಪಟುಗಳು ಉಳಿದುಕೊಳ್ಳಲು ನಿರ್ಮಿಸಲಾಗಿರುವ ಕ್ರೀಡಾಗ್ರಾಮವನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಾಕ್ರನ್ ಅವರು ಪರಿಶೀಲಿಸಿದ್ದರು. ಈ ವೇಳೆ ಅವರು ಸೀನ್ ನದಿ ಸ್ವಚ್ಛಗೊಂಡಿದ್ದು, ತಾನು ಕೂಡ ಈ ನದಿಯಲ್ಲಿ ಈಜುವುದಾಗಿ ಭರವಸೆ ನೀಡಿದ್ದರು.