Site icon Vistara News

Paris Olympics 2024 : ಕಂಚಿನ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

Paris Olympics 2024

ಬೆಂಗಳೂರು: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ಯಾರಿಸ್​​ನಲ್ಲಿ (Paris Olympics 2024) ನಡೆದ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಗೆದ್ದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಭಾರತೀಯ ಹಾಕಿ ತಂಡಕ್ಕೆ ಕರೆ ಮಾಡಿದರು. ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಭಾರತ ತಂಡ ಜರ್ಮನಿ ವಿರುದ್ಧದ ಸೆಮಿಫೈನಲ್​​ನಲ್ಲಿ 2-3 ಗೋಲುಗಳಿಂದ ಸೋಲನುಭವಿಸಿ ಫೈನಲ್ ತಲುಪಲು ವಿಫಲವಾಗಿತ್ತು.

ಪಿಎಂ ಮೋದಿ ಇಡೀ ತಂಡವನ್ನು ಅವರೆಲ್ಲರ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದರು. ಇದು ಕೌಶಲ್ಯ, ಪರಿಶ್ರಮ ಮತ್ತು ತಂಡದ ಮನೋಭಾವದ ಯಶಸ್ಸು ಎಂದು ಬಣ್ಣಿಸಿದರು. ಈ ಸಾಧನೆಯು ಯುವಜನರಲ್ಲಿ ಹಾಕಿಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು.

“ಈ ಸಾಧನೆಯನ್ನು ಮುಂದಿನ ತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳುತ್ತವೆ! ಒಲಿಂಪಿಕ್ಸ್​ನಲ್ಲಿ ಮಿಂಚಿದ ಭಾರತೀಯ ಹಾಕಿ ತಂಡ ಕಂಚಿನ ಪದಕವನ್ನು ಮನೆಗೆ ತಂದಿದೆ! ಇದು ಇನ್ನೂ ವಿಶೇಷ. ಏಕೆಂದರೆ ಇದು ಒಲಿಂಪಿಕ್ಸ್​ನಲ್ಲಿ ಅವರ ಸತತ ಎರಡನೇ ಪದಕ. ಅವರ ಯಶಸ್ಸು ಕೌಶಲ್ಯ, ಪರಿಶ್ರಮ ಮತ್ತು ತಂಡದ ಮನೋಭಾವದ ವಿಜಯ. ಅವರು ಅಪಾರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವ ತೋರಿಸಿದರು. ಆಟಗಾರರಿಗೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ಹಾಕಿಯೊಂದಿಗೆ ಭಾವನಾತ್ಮಕ ಸಂಪರ್ಕ ಹೊಂದಿದ್ದಾನೆ. ಈ ಸಾಧನೆಯು ನಮ್ಮ ರಾಷ್ಟ್ರದ ಯುವಕರಲ್ಲಿ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತದೆ ” ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಹಾಕಿಯಲ್ಲಿ ಭಾರತದ ಸಾಧನೆ

52 ವರ್ಷಗಳ ನಂತರ ಭಾರತವು ಕ್ರೀಡಾಕೂಟದಲ್ಲಿ ಸತತ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1972ರ ಒಲಿಂಪಿಕ್ಸ್​ನಲ್ಲಿ ಭಾರತ ಕೊನೆಯ ಬಾರಿ ಸತತ ಪದಕಗಳನ್ನು ಗೆದ್ದಿತ್ತು. 96 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತವು ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 14 ಪದಕಗಳನ್ನು ಗೆದ್ದಿದೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 9ರಂದು ಭಾರತೀಯ ಅಥ್ಲೀಟ್​ಗಳಿಗೆ ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಅದರ ವಿವರ

ಪಂದ್ಯದ ಮೊದಲ ಉಭಯ ತಂಡಗಳು ಗೋಲು ರಹಿತ ಆಟ ಆಡಿವೆ. ಆದರೆ ಮಾರ್ಕ್ ಮಿರಾಲೆಸ್ 18ನೇ ನಿಮಿಷದಲ್ಲಿ ಸ್ಪೇನ್ಗೆ ಮುನ್ನಡೆ ತಂದುಕೊಟ್ಟರು. ಆದರೆ 30ನೇ ನಿಮಿಷದಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಸಿಂಗ್ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 33ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

Exit mobile version