ಬೆಂಗಳೂರು: ಒಲಿಂಪಿಕ್ಸ್‌ನಂಥ(Paris Olympics) ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದೇ ಭಾರತೀಯ ಕ್ರೀಡಾಪಟುಗಳ ಮುಖ್ಯ ಗುರಿ. ಈ ಬಾರಿ 117 ಕ್ರೀಡಾಪಟುಗಳು ಪದಕ ಕನಸನ್ನು ಹೊತ್ತು ಪ್ಯಾರಿಸ್ಗೆ ತೆರಳಲಿದ್ದಾರೆ. ಒಲಿಂಪಿಕ್ಸ್ಗೆ ತೆರಳುವ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತ್ತಲೂ ದೊರೆಯದ ಬೆಂಬಲ ಈ ಬಾರಿ ಸಿಕ್ಕಿದೆ.
117 ಕ್ರೀಡಾಪಟುಗಳ ಪೈಕಿ 72 ಮಂದಿಗೆ ಇದು ಚೊಚ್ಚಲ ಒಲಿಂಪಿಕ್ಸ್ ಕೂಟವಾಗಿದೆ. ಭಾರತೀಯ ಸೇನೆಯ 24 ಮಂದಿ ಕೂಡೆ ಸ್ಪರ್ಧಿಸುತ್ತಿರುವುದು ವಿಶೇಷ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಬಾಕ್ಸರ್ಗಳಾದ ಜಾಸ್ಮಿನ್ ಲಂಬೋರಿಯಾ ಮತ್ತು ಕುಸ್ತಿ ಪಟು ರಿತಿಕಾ ಹೂಡಾ ಈ ಮಹಿಳಾ ಸೇನಾನಿಗಳು. ಅಥ್ಲೆಟಿಕ್ಸ್ನಲ್ಲಿ ಗರಿಷ್ಠ 13 ಮಂದಿ ಸೈನಿಕರಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಓಟಗಾರ ಅವಿನಾಶ್ ಸಾಬ್ಲೆ ಇದರಲ್ಲಿ ಪ್ರಮುಖರು. ಬಾಕ್ಸರ್ ಅಮಿತ್ ಪಂಗಲ್, ಆರ್ಚರ್ ತರುಣ್ದೀಪ್ ರೈ, ಟೆನಿಸ್ ಆಟಗಾರ ಶ್ರೀರಾಮ್ ಬಾಲಾಜಿ ಕೂಡ ಸೈನಿಕರಾಗಿದ್ದಾರೆ.
ನಾಳೆಯಿಂದ ಭಾರತದ ಸ್ಪರ್ಧೆ ಆರಂಭ
ಭಾರತ (India’s Schedule At Paris Olympics) ನಾಳೆಯಿಂದ ಒಲಿಂಪಿಕ್ಸ್ ಸ್ಪರ್ಧೆ ಆರಂಭಿಸಲಿದೆ(India’s July 25 Schedule At Paris Olympics). ನಾಳೆ(ಗುರುವಾರ) ನಡೆಯುವ ಆರ್ಚರಿ(Archery) ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತು ವಿಭಾಗದಲ್ಲಿ ಭಾರತ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur) ಕಣಕ್ಕಿಳಿಯಲಿದ್ದಾರೆ. ಪುರುಷರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಬಿ. ಧೀರಾಜ್(B. Dhiraj), ತರುಣದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಸಂಜೆ 5: 45ಕ್ಕೆ ನಡೆಯಲಿದೆ. ಮಹಿಳೆಯ ಪಂದ್ಯ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಇದನ್ನೂ ಓದಿ Paris Olympics: ಕ್ರೀಡಾಪಟುಗಳು ರತಿ ಕ್ರೀಡೆ ನಡೆಸಿದರೆ ಮಂಚ ಮುರಿದೇ ಹೋಗುತ್ತೆ! ಏನಿದು ‘ಆ್ಯಂಟಿ ಸೆಕ್ಸ್ ಬೆಡ್?
ಕರ್ನಾಟಕದಿಂದ 9 ಮಂದಿ ಸ್ಪರ್ಧೆ
ಒಲಿಂಪಿಕ್ಸ್ನಲ್ಲಿ ಈ ಬಾರಿ ರಾಜ್ಯದ ಪರವಾಗಿ ಒಟ್ಟು 9 ಮಂದಿ ಕ್ರೀಡಾಳುಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ. ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ನಲ್ಲಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ನಲ್ಲಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಕಣಕ್ಕಿಳಿಯಲಿದ್ದಾರೆ. ಎಲ್ಲ 9 ಮಂದಿಯೂ ಪದಕ ಗೆಲ್ಲಲಿ ಎನ್ನುವುದು ಕನ್ನಡಿಗರ ಆಶಯ ಮತ್ತು ಹಾರೈಕೆ.