Site icon Vistara News

Paris Olympics: ಅಂದು ಒಲಿಂಪಿಕ್ಸ್​ ಕ್ರೀಡಾಪಟು; ಇಂದು ಖ್ಯಾತ ಸ್ವಾಮೀಜಿ; ಯಾರಿವರು?

Paris Olympics

Paris Olympics: a sanyasi who is part of Indian basketball’s Olympic history 2024

ಚೆನ್ನೈ: ಒಂದು ಕಾಲದಲ್ಲಿ ಪ್ರತಿಷ್ಠತ ಕ್ರೀಡಾಕೂಟವಾದ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಪಟು ಈಗ ಎಲ್ಲವನ್ನೂ ತ್ಯಜಿಸಿ ಸ್ವಾಮೀಜಿಯಾಗಿದ್ದಾರೆ!. ಹೌದು, ಇವರ ಹೆಸರು, ಅಮರನಾಥ್‌ ನಾಗರಾಜನ್‌(Amarnath Nagarajan). ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಒಮ್ಮೆ ಮಾತ್ರ ಬಾಸ್ಕೆಟ್‌ಬಾಲ್‌ ಅರ್ಹತೆ ಪಡೆದಿತ್ತು. 1980ರ ಮಾಸ್ಕೊ ಒಲಿಂಪಿಕ್ಸ್‌ ಇದಾಗಿತ್ತು. ಅಂದು ಸ್ಪರ್ಧಿಸಿದ್ದ ಭಾರತ ತಂಡದಲ್ಲಿ ನಾಗರಾಜನ್‌ ಕೂಡ ಒಬ್ಬರಾಗಿದ್ದರು.

ಅಮರನಾಥ್‌ ನಾಗರಾಜನ್‌ ಅವರ ಊರು, ತಮಿಳುನಾಡಿನ ಥೇಣಿ ಜಿಲ್ಲೆಯ ಪೆರಿಯಾಕುಲಂ. ಆರಂಭದಲ್ಲಿ ಹಾಕಿ ಹಾಗೂ ಅಥ್ಲೇಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದ ಇವರು ಕೊನೆಗೆ ಆಯ್ಕೆ ಮಾಡಿಕೊಂಡದ್ದು ಬಾಸ್ಕೆಟ್‌ಬಾಲ್‌. ಸ್ವಾರಸ್ಯವೆಂದರೆ ಇವರ ಹೆತ್ತವರು ಭಾರತ ಕ್ರಿಕೆಟ್​ ತಂದ ಖ್ಯಾತ ಮಾಜಿ ಆಟಗಾರ ಲಾಲಾ ಅಮರನಾಥ್‌(Lala Amarnath) ಅವರ ಕಟ್ಟಾ ಅಭಿಮಾನಿಯಾದ್ದರು. ಇದೇ ಕಾರಣಕ್ಕೆ ಮಗನ ಹೆಸರಿನಲ್ಲಿ ಅಮರನಾಥ್‌ ಎಂದು ಸೇರಿಸಿಕೊಂಡರು.

ಕ್ರೀಡೆಯಿಂದ ನಿವೃತ್ತರಾದ ಬಳಿಕ ಇವರು ಎಲ್ಲವನ್ನೂ ತ್ಯಜಿಸಿ ಸ್ವಾಮೀಜಿಯಾಗಿದ್ದಾರೆ. ಅವರಿಗೀಗ 70 ವರ್ಷ. ಈಗಿನ ಹೆಸರು ಸ್ವಾಮಿ ನಟೇಶಾನಂದ ಸರಸ್ವತಿ. ಕೊಯಮತ್ತೂರಿನ ಆಶ್ರಮದಲ್ಲಿದ್ದಾರೆ. 1982ರ ಏಷ್ಯಾಡ್‌ನ‌ಲ್ಲಿ ನಾಗ ರಾಜನ್‌ ಅವರೇ ಭಾರತದ ಬಾಸ್ಕೆಟ್‌ಬಾಲ್‌ ತಂಡದ ನಾಯಕರಾಗಿದ್ದರು. ಇದೀಗ ಪ್ಯಾರಿಸ್​ ಒಲಿಂಪಿಕ್ಸ್​ಗೆ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಅವರು ಶುಭ ಹಾರೈಸಿದ್ದಾರೆ. ಜತೆಗೆ ಅಂದಿನ ಒಲಿಂಪಿಕ್ಸ್​ ಸ್ಪರ್ಧೆಯ ನೆನಪನ್ನು ಮೆಲುಕಯ ಹಾಕಿದರು.


ಇದನ್ನೂ ಓದಿ Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್ ಯಾವಾಗ ಆರಂಭ? ಬೃಹತ್​ ಕ್ರೀಡಾಕೂಟಕ್ಕೆ ನಡೆಸಿರುವ ಸಿದ್ಧತೆಗಳೇನು?

“ನನ್ನ ಪಾಲಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದೇ ಹೆಮ್ಮೆ ಹಾಗೂ ಖುಷಿಯ ಸಂಗತಿ. 60 ಸಾವಿರ ವೀಕ್ಷಕರ ಸ್ಟೇಡಿಯಂನಲ್ಲಿ ಭಾರತ ತಂಡ ಆಡಿದ್ದವು. ಆಡಿದ ಎಲ್ಲ ಏಳೂ ಪಂದ್ಯಗಳಲ್ಲಿ ಸೋತರೂ ಕೂಡ ಆಗಿನ ಕಾಲಕ್ಕೆ ಒಲಿಂಪಿಕ್ಸ್​ ಕ್ರೀಡೆಯಲ್ಲಿ ಪಾಲ್ಗೊಂಡಿದ್ದೇ ಒಂದು ರೋಮಾಂಚನ ಎಂದರು. ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಅಸಿಸ್ಟೆಂಟ್​​ ಜನರಲ್​ ಮ್ಯಾನೇಜರ್​​ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 2019ರಲ್ಲಿ ತಮ್ಮ ಪತ್ನಿಯ ಸಾವಿನ ಬಳಿಕ ಸನ್ಯಾಸಿ ಜೀವನದತ್ತ ಸಾಗಿದ್ದರು.


ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

30 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.

Exit mobile version