ನವದೆಹಲಿ: ಏಷ್ಯನ್ ಗೇಮ್ಸ್ ಪದಕ ವಿಜೇತ 24 ವರ್ಷದ ಭಾರತದ ಕುದುರೆ ಸವಾರ ಅನುಷ್ ಅಗರ್ವಾಲ್(Anush Agarwalla) ಈಕ್ವೆಸ್ಟ್ರಿಯನ್(ಕುದುರೆ ರೇಸ್)ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ(Paris Olympics 2024) ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅನುಷ್ ಡ್ರೆಸ್ಸೇಜ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.
ಕಳೆದ ವರ್ಷ ಚೀನಾದಲ್ಲಿ ನಡೆದಿದ್ದ ಏಷ್ಯಾಡ್ನಲ್ಲಿ ಅನುಷ್ ಐತಿಹಾಸಿಕ ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಎಫ್ಇಐ ಟೂರ್ನಿಗಳಲ್ಲಿ ತೋರ್ಪಡಿಸಿದ ಒಟ್ಟಾರೆ ಸಾಧನೆ ಮಾನದಂಡದಂತೆ ಅವರಿಗೆ ಪ್ಯಾರಿಸ್ ಅರ್ಹತೆ ಲಭಿಸಿದೆ. ಅನುಷ್ 4 ಅಂತಾರಾಷ್ಟ್ರೀಯ ಈಕ್ವೆಸ್ಟ್ರಿಯನ್ ಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.
8ನೇ ಈಕ್ವೆಸ್ಟ್ರಿಯನ್
ಅನುಷ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ 8ನೇ ಈಕ್ವೆಸ್ಟ್ರಿಯನ್(Equestrian) ಪಟುವಾಗಿದ್ದಾರೆ. ಇದಕ್ಕೂ ಮುನ್ನ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದ ಭಾರತೀಯರೆಂದರೆ ದರ್ಯಾ ಸಿಂಗ್ (1980, ಮಾಸ್ಕೊ), ಇಂದ್ರಜಿತ್ ಲಾಂಬಾ (1996, ಅಟ್ಲಾಂಟಾ), ಇಮಿ¤ಯಾಜ್ ಅನೀಸ್ (2000, ಸಿಡ್ನಿ) ಮತ್ತು ಫವಾದ್ ಮಿರ್ಜಾ (2022, ಟೋಕಿಯೊ).
ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್ನ (Asian Games 2023) ಈಕ್ವೆಸ್ಟ್ರೀಯನ್(ಕುದುರೆ ಸವಾರಿ) ವೈಯಕ್ತಿಕ ಡ್ರೆಸ್ಸೇಜ್(Equestrian Dressage) ವಿಭಾಗದ ಫೈನಲ್ನಲ್ಲಿ ಅನುಷ್ ಅಗರ್ವಾಲ್ 73.030 ಅಂಕ ಪಡೆದ ಕಂಚಿಗೆ ತೃಪ್ತಿಪಟ್ಟಿದ್ದರು. ಇದು ಈ ಈವೆಂಟ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿತ್ತು. ಒಲಿಂಪಿಕ್ಸ್ನಲ್ಲಿಯೂ ಪದಕ ಗೆಲ್ಲುವಂತಾಗಿ ಎನ್ನುವುದು ಭಾರತೀಯರ ಆಶಯವಾಗಿದೆ.
𝗢𝗹𝘆𝗺𝗽𝗶𝗰 𝗤𝘂𝗼𝘁𝗮! ✅
— Olympic Khel (@OlympicKhel) February 19, 2024
Anush Agarwalla earns a place for Team India in Equestrian (Individual Dressage) at #Paris2024 🏇
Congratulations!#RoadToParis2024 | #OlympicQualifiers | @WeAreTeamIndia
ಬಾಲ್ಯದ ಕನಸು
ಒಲಿಂಪಿಕ್ಸ್ ಟಿಕೆಟ್ ಪಡೆದ ಬಳಿಕ ಪ್ರತಿಕ್ರಿಕೆ ನೀಡಿದ ಅನುಷ್, ಇದು ನನ್ನ ಬಾಲ್ಯದ ಕನಸಾಗಿತ್ತು. ಅದೀಗ ಸಾಕಾರಗೊಳ್ಳುತ್ತಿದೆ. ಒಲಿಂಪಿಕ್ಸ್ ವಿಶ್ವ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಬಹಳ ಹೆಮ್ಮೆ ಆಗುತ್ತಿದೆ. ಇದೊಂದು ಐತಿಹಾಸಿಕ ಕ್ಷಣ ಎಂಬುದಾಗಿ ತಿಳಿಸಿದರು.
ಒಲಿಂಪಿಕ್ಸ್ ಆರಂಭ ಯಾವಾಗ?
2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಮಹಿಳೆಯರ ಹಾಕಿ ತಂಡಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಪ್ರವೇಶವೇ ಇಲ್ಲ!
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡವು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆಯದಿರುವುದು ವಿಪರ್ಯಾಸ. 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆಯಲು ವಿಫಲಗೊಂಡಿದೆ.
1980ರ ಮಾಸ್ಕೋದಲ್ಲಿ ಮಹಿಳಾ ಹಾಕಿ ಸೇರ್ಪಡೆಯಾದ ಬಳಿಕ ಭಾರತ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಕೇವಲ ಮೂರು ಬಾರಿ ಆಡಿದೆ. ಮೊದಲ ನಾಲ್ಕು ಆವೃತ್ತಿಯಲ್ಲಿ ಅರ್ಹತೆ ಪಡೆಯದ ಭಾರತ ರಿಯೋ 2016ರಲ್ಲಿ ಅವಕಾಶ ಗಿಟ್ಟಿಸಿತು. ಆ ಸಮಯದಲ್ಲಿ 12ನೇ ಸ್ಥಾನ ಪಡೆದುಕೊಂಡಿತ್ತು. ನಂತರ ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಿತು.