Site icon Vistara News

Paris Olympics: ಒಲಿಂಪಿಕ್ಸ್​ ಶೂಟಿಂಗ್; ಪದಕ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಶಾಸಕಿ

Paris Olympics

Paris Olympics: BJP MLA Shreyasi Singh to represent India in shooting

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ 117 ಭಾರತೀಯ ಕ್ರೀಡಾಪಟುಗಳಲ್ಲಿ ಒಬ್ಬರು ಶಾಸಕಿ ಕೂಡ ಇರುವುದು ವಿಶೇಷ. ಇವರ ಹೆಸರು ಶ್ರೇಯಸಿ ಸಿಂಗ್(Shreyasi Singh). ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ(Member of Bihar Vidhan Sabha) ಹಾಲಿ ಬಿಜೆಪಿ ಶಾಸಕಿಯಾಗಿದ್ದಾರೆ. ಕಾಮನ್ವೆಲ್ತ್‌ ಗೇಮ್ಸ್‌ ಮತ್ತು ಏಷ್ಯಾಡ್‌ನ‌ಲ್ಲಿ ಪದಕ ಜಯಿಸಿದ್ದರು. 32 ವರ್ಷದ ಶ್ರೇಯಸಿ ಸಿಂಗ್‌, ಮಾಜಿ ಸಚಿವ ದಿವಂಗತ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿ.

ಆರಂಭದಲ್ಲಿ ಒಲಿಂಪಿಕ್ಸ್‌ ಆಯ್ಕೆಯ ಪಟ್ಟಿಯಲ್ಲಿ ಶ್ರೇಯಸಿ ಅವರ ಹೆಸರಿರಲಿಲ್ಲ. ಟೋಕಿಯೊ ಒಲಿಂಪಿಯನ್‌ ಮನು ಭಾಕರ್‌ ಮಹಿಳೆಯರ 10 ಮೀ. ಪಿಸ್ತೂಲ್‌ ಮತ್ತು 25 ಮೀ. ಪಿಸ್ತೂಲ್‌ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಹೀಗಾಗಿ ಒಂದು ಕೋಟಾವನ್ನು ಮರುಹಂಚಿಕೆ ಮಾಡಬಹುದಾಗಿತ್ತು. ಇದನ್ನು ಟ್ರ್ಯಾಪ್‌ ಶೂಟರ್‌ಗಾಗಿ ಬದಲಾಯಿಸಲಾಯಿತು. ಹೀಗಾಗಿ ಈ ಕೋಟಾದಲ್ಲಿ ಶ್ರೇಯಸಿ ಅವರನ್ನು ಆಯ್ಕೆ ಮಾಡಲಾಯಿತು.

ಶ್ರೇಯಸಿ 2014ರ ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ ಏಷ್ಯಾಡ್‌ನ‌ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು. 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ದೇಶಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೇಶಕ್ಕೆ ಮತ್ತು ಬಿಹಾರಕ್ಕೆ ಕೀರ್ತಿ ತಂದಿದ್ದರು.

ಒಲಿಂಪಿಕ್ಸ್​ನಲ್ಲಿ​ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೇಯಸಿ, “ನಾನು ಒಲಿಂಪಿಕ್ಸ್‌ ಕ್ರೀಡಾಕೂಡದಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬುದು ನನ್ನ ತಂದೆಯ ದೊಡ್ಡ ಕನಸಾಗಿತ್ತು. ತಂದೆಯ ಕನಸಿನಂತೆ ಒಲಿಂಪಿಕ್ಸ್​ ಆಡುವ ಸೌಭಾಗ್ಯ ಒದಗಿ ಬಂದಿದೆ. ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಪದಕವೊಂದನ್ನು ಗೆಲ್ಲುವುದು ನನ್ನ ಗುರಿ. ಇದಕ್ಕಾಗಿ ಜಮುಯಿ ಜನತೆ ಪ್ರಾರ್ಥಿಸಲಿ” ಎಂದು ಹೇಳಿದ್ದಾರೆ. 2020ರ ಚುನಾವಣೆಯಲ್ಲಿ ಜುಮಯಿ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿದ್ದ ಶ್ರೇಯಸಿ 41 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನು ಓದಿ India’s July 25 Schedule At Paris Olympics: ನಾಳೆಯಿಂದ ಭಾರತದ ಒಲಿಂಪಿಕ್ಸ್​ ಸ್ಪರ್ಧೆ ಆರಂಭ; ವೇಳಾಪಟ್ಟಿ ಹೀಗಿದೆ

ನಾಳೆಯಿಂದ ಭಾರತದ ಸ್ಪರ್ಧೆ ಆರಂಭ

ಭಾರತ (India’s Schedule At Paris Olympics) ನಾಳೆಯಿಂದ ಒಲಿಂಪಿಕ್ಸ್​ ಸ್ಪರ್ಧೆ ಆರಂಭಿಸಲಿದೆ(India’s July 25 Schedule At Paris Olympics). ನಾಳೆ(ಗುರುವಾರ) ನಡೆಯುವ ಆರ್ಚರಿ(Archery) ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತು ವಿಭಾಗದಲ್ಲಿ ಭಾರತ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur)​ ಕಣಕ್ಕಿಳಿಯಲಿದ್ದಾರೆ. ಪುರುಷರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಬಿ. ಧೀರಾಜ್(B. Dhiraj), ತರುಣದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಸ್ಪರ್ಧಿಸಲಿದ್ದಾರೆ. ಈ ಪಂದ್ಯ ಸಂಜೆ 5: 45ಕ್ಕೆ ನಡೆಯಲಿದೆ. ಮಹಿಳೆಯ ಪಂದ್ಯ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಅಥ್ಲೆಟಿಕ್ಸ್​ ದೊಡ್ಡ ತಂಡ

ಅಥ್ಲೆಟಿಕ್ಸ್​ನಲ್ಲಿ 29 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಆರಂಭದಲ್ಲಿ ಅಥ್ಲೀಟ್​ಗಳ ಸಂಖ್ಯೆ​ 30 ಇತ್ತು. ಆದರೆ ವನಿತಾ ಶಾಟ್‌ಪುಟರ್‌ ಅಭಾ ಖತುವಾ ಗೈರಿನಿಂದ 29ಕ್ಕೆ ಇಳಿಯಿತು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ.  29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಶೂಟಿಂಗ್​ನಲ್ಲಿ ಒಟ್ಟು 21 ಮಂದಿ ಸ್ಥಾನ ಪಡೆದಿದ್ದಾರೆ. 10 ಮಂದಿ ಪುರುಷರು ಹಾಗೂ 11 ಮಂದಿ ಮಹಿಳಾ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಹಾಕಿ ತಂಡದಲ್ಲಿ 19 ಆಟಗಾರರಿದ್ದಾರೆ. ಟೇಬಲ್‌ ಟೆನಿಸ್​ನಲ್ಲಿ 8 ಮಂದಿ ಆಟಗಾರರು, ಬ್ಯಾಡ್ಮಿಂಟನ್​ನಲ್ಲಿ 7 ಮಂದಿ ಕಣಕ್ಕಿಳಿಯಲಿದ್ದಾರೆ. ಅವಳಿ ಒಲಿಂಪಿಕ್‌ ಪದಕ ಗೆದ್ದ ಪಿ.ವಿ. ಸಿಂಧು ಮೇಲೆ ಹ್ಯಾಟ್ರಿಕ್​ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಉಳಿದಂತೆ ಕುಸ್ತಿ, ಆರ್ಚರಿ ಮತ್ತು ಬಾಕ್ಸಿಂಗ್‌ನಲ್ಲಿ ತಲಾ 6 ಮಂದಿ ಸ್ಪರ್ಧಿಸಲಿದ್ದಾರೆ.

ಗಾಲ್ಫ್​ನಲ್ಲಿ 4, ಟೆನಿಸ್‌ನಲ್ಲಿ 3, ಈಜು ಮತ್ತು ಹಾಯಿದೋಣಿಯಲ್ಲಿ ತಲಾ ಇಬ್ಬರು ಕಣಕ್ಕಿಳಿಯಲಿದ್ದಾರೆ. ಈಕ್ವೇಸ್ಟ್ರಿಯನ್‌(ಕುದುರೆ ಸವಾರಿ), ಜೂಡೋ, ರೋಯಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬರಷ್ಟೇ ಸ್ಪರ್ಧಿಸಲಿದ್ದಾರೆ. ಪಿ.ವಿ.ಸಿಂಧು(PV Sindhu) ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್(Sharath Kamal) ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

Exit mobile version