Site icon Vistara News

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Paris Olympics

Paris Olympics: First COVID case at Paris Olympics; Australian water polo player isolated

ಪ್ಯಾರಿಸ್​: ಪ್ರತಿಷ್ಠಿತ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ 3 ದಿನ ಬಾಕಿ ಇರುವಾಗಲೇ ಕ್ರೀಡಾಪಟುಗಳಿಗೆ ಆತಂತವೊಂದು ಶುರುವಾಗಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್ ವೈರಸ್​ ಇದೀಗ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ(Paris Olympics 2024) ಕಾಣಿಸಿಕೊಂಡಿದೆ. ಮೊದಲ ಪ್ರಕರಣವಾಗಿ ಆಸ್ಟ್ರೇಲಿಯಾದ ವಾಟರ್‌ ಪೋಲೊ ತಂಡದ ಆಟಗಾರ್ತಿಯೊಬ್ಬರಲ್ಲಿ ಕೋವಿಡ್​ ಪಾಸಿಟಿವ್‌(First COVID case at Paris Olympics) ಕಂಡುಬಂದಿದೆ.

ಆಸ್ಟ್ರೇಲಿಯಾದ ಒಲಿಂಪಿಕ್ಸ್‌ ತಂಡದ ಮುಖ್ಯಸ್ಥೆ ಅನ್ನಾ ಮಿಯರ್ ತಮ್ಮ ದೇಶದ ಆಟಗಾರ್ತಿಗೆ ಕೋವಿಡ್​-19 ಸೋಂಕು ತಗುಲಿದ ವಿಚಾರವನ್ನು ಮಂಗಳವಾರ ಖಚಿತಪಡಿಸಿದ್ದಾರೆ. ಆದರೆ, ಸೋಂಕು ಕಾಣಿಸಿಕೊಂಡ ಅಥ್ಲೀಟ್‌ ಹೆಸರನ್ನು ಪ್ರಕಟಿಸಿಲ್ಲ. ಸೋಂಕಿತ ಕ್ರೀಡಾಪಟು ಜತೆಗಿದ್ದ ಉಳಿದವರನ್ನೂ ಪರೀಕ್ಷಿಸಲಾಗಿದ್ದು ಯಾರಲ್ಲೂ ಪಾಸಿಟಿವ್‌ ದೃಢಪಟ್ಟಿಲ್ಲ ಎಂದು ತಿಳಿದಿಬಂದಿದೆ. ಸದ್ಯ ಸೋಂಕು ಪೀಡಿತ ಆಟಗಾರ್ತಿಯನ್ನು ಕ್ವಾರಂಟೈನ್​ನಲ್ಲಿ​ ಇರುವಂತೆ ಸೂಚನೆ ನೀಡಲಾಗಿದೆ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಫ್ರಾನ್ಸ್‌ನ ಆರೋಗ್ಯ ಸಚಿವ ಫ್ರೆಡರಿಕ್‌ ವ್ಯಾಲೆಟಾಕ್ಸ್‌ ಹೇಳಿದ್ದಾರೆ.

100 ವರ್ಷಗಳ ಬಳಿಕ ಪ್ಯಾರಿಸ್​ ಆತಿಥ್ಯ


ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ


ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 28 ರಿಂದ ಸೆಪ್ಟೆಂಬರ್‌ 8ರವರೆಗೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಇದನ್ನೂ ಓದಿ Paris Olympics 2024 : ಅಪಾಯಕಾರಿ ರಾಸಾಯನಿಕ ಪತ್ತೆ; ಪ್ಯಾರಿಸ್​ ಒಲಿಂಪಿಕ್ಸ್​​ ಬ್ರಾಂಡ್​​ನ ಬಾಟಲ್​​ಗಳಿಗೆ ನಿಷೇಧ

Exit mobile version